NEWSನಮ್ಮರಾಜ್ಯ

KSRTC: ಆಪದ್ಬಾಂಧವನಾದ ಚಾಲಕನಿಂದ ಕೆರೆಯಲ್ಲಿ ಮುಳುಗುತ್ತಿದ್ದ ಹೆಣ್ಣುಮಕ್ಕಳ ರಕ್ಷಣೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ತವ್ಯದ ಮೇಲಿದ್ದಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರೊಬ್ಬರು ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸುವ ಮೂಲಕ ಅವರ ಜೀವವನ್ನು ಉಳಿಸಿದ್ದಾರೆ.

ಜಿಲ್ಲೆಯ ಶಿರಾ ತಾಲೂಕಿನಲ್ಲಿ ಇಂದು (29/01/2023) ಮಧ್ಯಾಹ್ನ 2.15ರ ಸಮಯದಲ್ಲಿ ಶಿರಾ – ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾಗ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ  ಇಬ್ಬರು ಹೆಣ್ಣು ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ್ದು, ಕೂಡಲೇ ಬಸ್‌ ನಿಲ್ಲಿಸಿ ಬಳಿಕ ಓಡಿಹೋಗಿ ಕೆರೆಗೆ ಧುಮುಕುವ ಮೂಲಕ ಅವರ ರಕ್ಷಣೆ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ ಶಿರಾ ಘಟಕದ ಚಾಲಕ ಮಂಜುನಾಥ ಎಂ.(ಬಿ. ಸಂ. 697) ಅನುಸೂಚಿ ಸಂಖ್ಯೆ 31ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಾಹನವನ್ನು ನಿಲ್ಲಿಸಿ ಕೆರೆಗೆ ಧುಮುಕಿ ಎರಡು ಹೆಣ್ಣು ಮಕ್ಕಳನ್ನು ದಡಕ್ಕೆ ಸೇರಿಸಿ ಪ್ರಾಣ ಉಳಿಸಿದ್ದಾರೆ.

ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಣ್ಣುಮಕ್ಕಳ ಪ್ರಾಣ ಉಳಿಸಿದ ಚಾಲಕ ಮಂಜುನಾಥ ಅವರ ಸಮಯ ಪ್ರಜ್ಞೆಯನ್ನು ಶ್ಲಾಘಿಸಿರುವ ಘಟಕ ವ್ಯವಸ್ಥಾಪಕ ವಿನೋದ್‌ ಅಮ್ಮನಗಿ ಅವರು ಘಟಕದಲ್ಲಿ ಅವರನ್ನು ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ಸಂಸ್ಥೆಯ ಚಾಲಕರು ಬರೀ ಸ್ಟೇರಿಂಗ್‌ ಮಾತ್ರ ಹಿಡಿಯುವುದಿಲ್ಲ ತಮ್ಮ ಪ್ರಾಣವನ್ನು ಪಣಕಿಟ್ಟು ಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೂ ಮುಂದಾಗುತ್ತಾರೆ. ಅದಕ್ಕೆ ಇಂದು ಜರುಗಿರುವ ಘಟನೆಯೇ ನಿದರ್ಶನ ಎಂದು ಹೇಳಿದ್ದಾರೆ.

ಇನ್ನು ದುಡಿಮೆಗೆ ತಕ್ಕ ವೇತನ ಸಿಗದಿದ್ದರೂ ಹೊಟ್ಟೆಗೆ ಅರೆಗಂಜಿ ಕುಡಿದು ನಾಡಿನ ಜನರ ಸೇವೆಯಲ್ಲಿ ತೊಡಗಿರುವ ಈ ಸಾರಿಗೆ ನೌಕರರು ನಿತ್ಯ ತಾವು ತಮ್ಮ ಕುಟುಂಬದವರಿಗಿಂತ ಇತರರ ಸೇವೆಯಲ್ಲೇ ದೇವರನ್ನು ಕಾಣುವವರಾಗಿದ್ದಾರೆ.

ಇನ್ನಾದರೂ ಇಂಥ ಶ್ರಮಜೀವಿಗಳ ಕಡೆಗೆ ಸರ್ಕಾರ ಮತ್ತು ಸಾರಿಗೆ ಸಚಿವರು ನಿಗಾವಹಿಸಿ ಇವರಿಗೆ ಕಾನೂನು ಪ್ರಕಾರ ಕೊಡಬೇಕಿರುವ ಸೌಲಭ್ಯಗಳನ್ನು ಕೊಡುವುದಕ್ಕೆ ಮುಂದಾಗಬೇಕು. ಏಕೆಂದರೆ, ಸರ್ಕಾರ 5 ವರ್ಷದಲ್ಲಿ ಬದಲಾಗುತ್ತಿರುತ್ತದೆ. ಆದರೆ ಮಾಡಿದ ಕೆಲಸ ಶಾಶ್ವತವಾಗಿರುತ್ತದೆ. ಇದನ್ನು ಮನಗಂಡು ಈಗಲಾದರೂ ಕಳೆದ 7 ವರ್ಷದಿಂದ ನನೆಗುದಿಗೆ ಬಿದ್ದಿರುವ ವೇತನದ ಬಗ್ಗೆ ಕ್ರಮತೆಗೆದುಕೊಳ್ಳಬೇಕು ಎಂದು ಪ್ರಜ್ಞಾವಂತ ನಾಡಿನ ಜನರು ಒತ್ತಾಯಿಸುತ್ತಿದ್ದಾರೆ.

ಇನ್ನು ಚಾಲಕ ಮಂಜುನಾಥ ಅವರು ಸಮಯ ಪ್ರಜ್ಞೆ ಮೆರೆದು ಇಬ್ಬರು ಹಣ್ಣುಮಕ್ಕಳ ಜೀವವನ್ನು ಉಳಿಸಿರುವುದಕ್ಕೆ ನಾಡಿನ ವಿವಿಧೆಡೆಯಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...