CrimeNEWSನಮ್ಮಜಿಲ್ಲೆ

BMTC: ಅಧಿಕಾರಿಗಳ ಕಿರುಕುಳ- ಮತ್ತೊಬ್ಬ ನೌಕರ ವಿಷ ಕುಡಿದು ಆಸ್ಪತ್ರೆಗೆ ದಾಖಲು -ಇದು ಸಚಿವರ ನಿರ್ಲಕ್ಷ್ಯಕ್ಕೂ ಹಿಡಿದ ಕನ್ನಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ರಾಜರಾಜೇಶ್ವರಿ ನಗರದಲ್ಲಿರುವ ಬಿಎಂಟಿಸಿ 21ನೇ ಘಟಕದಲ್ಲಿ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಘಟನೆ ಮಾಸುವ ಮುನ್ನವೇ ಕೆಂಗೇರಿಯ 37ನೇ ಬಿಎಂಟಿಸಿ ಘಟಕದಲ್ಲಿ ಇಂದು ಮತ್ತೊಬ್ಬ ನಿರ್ವಾಹಕರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ.

ಕೆಂಗೇರಿಯಲ್ಲಿರುವ ಬಿಎಂಟಿಸಿ ಘಟಕ 37ರ ನಿರ್ವಾಹಕ ಶ್ರೀನಿವಾಸ್‌ (ಉದಯರಂಗ) ಎಂಬುವರೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವವರು.

ಕಳೆದ ಮೂರು ದಿನದಿಂದಲೂ ಡ್ಯೂಟಿಕೊಡದೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಇಂದು ಮಧ್ಯಾಹ್ನ ಘಟಕದಲ್ಲೇ ಅತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ನೌಕರರು ಆರ್‌.ಆರ್‌.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ  ನೀಡುತ್ತಿದ್ದು, 48ಗಂಟೆಗಳು ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಆಸ್ಪತೆಯಲ್ಲಿರುವ ನೌಕರರು ತಿಳಿಸಿದ್ದಾರೆ.

ಇನ್ನು ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ಕಿರುಕುಳ ಮಿತಿಮೀರಿದ್ದು ಹೇಳುವವರು ಕೇಳುವವರು ಯಾರು ಇಲ್ಲ ಎಂಬಂತಾಗಿದೆ. ಹೀಗಾಗಿ ನೌಕರರು ಡ್ಯೂಟಿಗೆ ಬಂದರೂ ಸರಿಯಾಗಿ ಡ್ಯೂಟಿಕೊಡದೆ ಡಿಪೋದಲ್ಲೇ ಕಾಯಿಸಿ ಕೂರಿಸುವುದು, ಬಳಿಕ ಗೈರುಹಾಜರಿ ತೋರಿಸಿ ಅವರನ್ನು ಹೋಗಿ ಎಂದು ಹೇಳುವುದು ನಿರಂತರವಾಗಿ ನಡೆಯುತ್ತಲೇ ಇದೆ.

ಈ ಬಗ್ಗೆ ಗಮನ ಹರಿಸಬೇಕಾದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಸಂಸ್ಥೆಯ ಎಂಡಿಗಳು ಮೌನವಾಗಿರುವುದರಿಂದ ಈ ರೀತಿಯ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆ. ಇನ್ನಾದರೂ ನೌಕರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಹಿರಿಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಚಿವರೂ ಮುಂದಾಗಬೇಕಿದೆ.

ಇಲ್ಲಿ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದ್ದಾರೆ. ಅಂದರೆ ತಮ್ಮ ಇಲಾಖೆಯ ನೌಕರರೊಬ್ಬರು ಅಧಿಕಾರಿಗಳ ಕಿರುಕುಳದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಸೇರಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ಆರೋಪಿತ ಅಧಿಕಾರಗಳ ವಿರುದ್ಧ ಕ್ರಮ ಜರುಗಿಸುವ ಬದಲಿಗೆ ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು ವರ್ತಿಸುತ್ತಿರುವುದು ನಾಚಿಕೆಗೇಡುತನದಿಂದ ಕೂಡಿದೆ.

ಬೆಂಗಳೂರಿನಲ್ಲೇ ಈ ರೀತಿಯ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದರು ಒಬ್ಬ ಜವಾಬ್ದಾರಿ ಸಚಿವ ಸ್ಥಾನದಲ್ಲಿರುವ ಸಚಿವರು ಈ ರೀತಿ ನಡೆದು ಕೊಳ್ಳುವುದು ಅವರು ತಮ್ಮ ಸ್ಥಾನಕ್ಕೆ ಅಗೌರವ ನೀಡಿದಂತೆ ಅಲ್ಲವೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಇನ್ನಾದರೂ ತಮ್ಮ ಇಲಾಖೆಯ ನೌಕರರು ಅಧಿಕಾರಿಗಳ ಕಿರಿಕುಳದಿಂದ ನೊಂದು ಸಾಯುವ ನಿರ್ಧಾರಕ್ಕೆ ಬರುತ್ತಿರುವುದರ ನೈಜ ಸಮಸ್ಯೆ ಏನು ಎಂಬ ಬಗ್ಗೆ ತಿಳಿದುಕೊಂಡು ನೌಕರರ ಕಷ್ಟವನ್ನು ಆಲಿಸುವ ಸೌಜನ್ಯವನ್ನಾದರೂ ತೋರಿಸುವ ನಿಟ್ಟಿನಲ್ಲಿ ಸಚಿವರು ಮುಂದಡಿಯಿಡಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವರ ಬೇಜವಾಬ್ದಾರಿ ನಡೆಯಿಂದಲೇ ನಮ್ಮನ್ನು ಕೇಳುವವರು ಹೇಳುವವರು ಯಾರು ಇಲ್ಲ. ಹೀಗಾಗಿ ನೌಕರರಿಗೆ ನಾವು ಏನೇ ಹಿಂಸೆ ನೀಡಿದರು ನಡೆಯುತ್ತದೆ ಎಂದು ಈ ರೀತಿ ಘಟನೆಗಳು ನಡೆಯುತ್ತಿದ್ದರು ಎಚ್ಚೆತ್ತುಕೊಳ್ಳದೆ ಹಿಂಸೆ ಕೊಡುವುದನ್ನು ಇನ್ನೂ ಹೆಚ್ಚು ಮಾಡುತ್ತಲೇ ಇದ್ದಾರೆ ಈ ಅಧಿಕಾರಿಗಳು. ಇದು ಮೊದಲು ನಿಲ್ಲಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ