Please assign a menu to the primary menu location under menu

NEWSನಮ್ಮರಾಜ್ಯರಾಜಕೀಯ

ಬಜೆಟ್ ಒಟ್ಟು ಗಾತ್ರ 3,09,182 ಕೋಟಿ ರೂ. ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿರುವ ಬಜೆಟ್ ಇದಾಗಿದೆ: ಸಿಎಂ ಬೊಮ್ಮಾಯಿ

ವಿಜಯಪಥ ಸಮಗ್ರ ಸುದ್ದಿ

ರಾಜ್ಯ ಬಜೆಟ್‌-2023-24: ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಆದರೆ ಕೊಟ್ಟ 600 ಭರವಸೆಗಳಲ್ಲಿ ಕನಿಷ್ಠ 50ನ್ನೂ ಪೂರೈಸಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಈ ಆರೋಪದ ನಡುವೆಯೇ ಇಂದು ಬಜೆಟ್‌ ಮಂಡನೆ ಮಾಡಿದ ಸಿಎಂ ಬೊಮ್ಮಾಯಿ ಅವರು, ಮುಂದಿನ 25 ವರ್ಷಗಳ ದೂರದೃಷ್ಟಿ ಹೊಂದಿರುವ ಬಜೆಟ್ ಇದಾಗಿದೆ ಎಂದು ಇಂದಿನ ಬಜೆಟ್​ನಲ್ಲಿ ವ್ಯಾಖ್ಯಾನಿಸಿದರು.

ಇದಿಷ್ಟೇ ಅಲ್ಲದೆ  ರೈತರಿಗೆ ಈ ಮೊದಲು ಕೊಡುತ್ತಿರುವ 3 ಲಕ್ಷ ರೂ.ಗಳ ಶೂನ್ಯ ಬಡ್ಡಿ ದರದ ಸಾಲವನ್ನು ಈಗ 5 ಲಕ್ಷಕ್ಕೆ ಏರಿಕೆ ಮಾಡಿ ಸಿಎಂ ಘೋಷಣೆ ಮಾಡಿದರು. ಇದು ಸೇರಿದಂತೆ ಬಜೆಟ್‌ನಲ್ಲಿ ಏನೆಲ್ಲ ಘೋಷಣೆ ಮಾಡಿದ್ದಾರೆ ಎಂಬುದರ ಪೂರ್ಣ ವಿವರವನ್ನು  ವಿಜಯಪಥ ನಿಮಗಾಗಿ ಕೊಡುತ್ತಿದೆ.

ರೈತರಿಗೆ ಬಂಪರ್ ಗಿಫ್ಟ್, ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ. ಆಡಳಿತ-ವಿಪಕ್ಷಗಳ ಮಾತಿನ ಚಕಮಕಿಯ ನಡುವೆಯೇ ಬಜೆಟ್ ಓದಲು ಆರಂಭಿಸಿದ ಸಿಎಂ ಬೊಮ್ಮಾಯಿ, ಎರಡನೇ ಬಜೆಟ್ ಮಂಡಿಸುತ್ತಿದ್ದು ಬಜೆಟ್‌ನ ಒಟ್ಟು ಗಾತ್ರ 3,09,182 ಕೋಟಿ ರೂ.ಗಳು ಇದೆ.

ಈ ನಡುವೆ ಬಜೆಟ್ ಮಂಡನೆಗೆ ವಿಪಕ್ಷಗಳ ಅಡ್ಡಿಪಡಿಸಿದವು. ಇದನ್ನು ಮನಗಂಡು ವಿಪಕ್ಷಗಳ ನಾಯಕರನ್ನು ಸಮಾಧಾನಪಡಿಸಲು ಸ್ಪೀಕರ್ ಕಾಗೇರಿ ಹರಸಾಹಸ ಪಟ್ಟರು. ಸಿಎಂ ಅವರು ಬಜೆಟ್ ಓದಲಿ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿದರು.

ಈ ನಡುವೆ ಕಾಂಗ್ರೆಸ್‌ ಶಾಸಕರು ಕಿವಿಯ ಮೇಲೆ ಹೂಗಳನ್ನು ಇಟ್ಟುಕೊಂಡು ಬಂದು ರಾಜ್ಯದ ಜನರ ಕಿವಿ ಮೇಲೆ ಹೂವಿಡ್ತಿದ್ದಾರೆ ಬೊಮ್ಮಾಯಿ ಎಂದು ಕಾಲೆಳೆದು ಅದಕ್ಕೆ  ಸಿದ್ದರಾಮಯ್ಯ ಕೂಡ ಸಾಥ ನೀಡಿದರು.  ಇದರ ನಡುವೆಯೇ ಬಜೆಟ್‌ ಮಂಡಿಸಿದ ಸಿಎಂ ದೇವಸ್ಥಾನಗಳು ಮತ್ತು ಮಠಗಳ ಜೀರ್ಣೋದ್ಧಾರಕ್ಕೆ ಒಂದು ಸಾವಿರ ಕೋಟಿ ರೂ. ಘೋಷಣೆ ಮಾಡಿದರು.

ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ರಾಗಿ, ಕುಚಲಕ್ಕಿ ಖರೀದಿಗೆ ಕೇಂದ್ರ ಸ್ಥಾಪನೆ ಮಾಡಲಾಗುವುದು. ತೊಗರಿ, ಅಡಕೆಗೆ ರೋಗ ಬಂದಾಗ ಸರ್ಕಾರದ ಸಹಾಯ ನೀಡಲಾಗಿದೆ. ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಲಾಗಿದೆ. ಆರೋಗ್ಯ ಕೇಂದ್ರಗಳ ಉನ್ನತೀಕರಣ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಮುಂದುವರಿಯುತ್ತಿದೆ…

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...