ಕರ್ನಾಟಕ ರಾಜ್ಯ ಬಜೆಟ್ 2023-24: ಬಜೆಟ್‌ನಲ್ಲಿ ವಿವಿಧ ಇಲಾಖಾವಾರು ಭರಪೂರ ಅನುದಾನ ಹಂಚಿಕೆ, ಮಾಡಲಾಗಿದ್ದು, ಶಿಕ್ಷಣಕ್ಕೆ ₹3,79,560 ಕೋಟಿ, ಬಜೆಟ್ನ ಶೇ. 7ರಷ್ಟು ಜಲಸಂಪನ್ಮೂಲಕ್ಕೆ ಅಂದರೆ ಜಲಸಂಪನ್ಮೂಲಕ್ಕೆ ₹22,854 ಕೋಟಿ ಹಂಚಿಕೆ. ಬಜೆಟ್ನ ಶೇ. 6 ಗ್ರಾಮೀಣಾಭಿವೃದ್ಧಿಗೆ ಮೀಸಲು. ಅಂದರೆ ₹20,494 ಕೋಟಿ ಹಂಚಿಕೆ
ಬಜೆಟ್ನ ಶೇ. 6ರಷ್ಟು ನಗರಾಭಿವೃದ್ಧಿಗೆ ಮೀಸಲು. ₹17,938 ಕೋಟಿ ಹಂಚಿಕೆ. ಕಂದಾಯ ಇಲಾಖೆಗೆ ₹15,943ಕೋಟಿ ಮೀಸಲು, ಬಜೆಟ್ನ ಶೇ. 5 ಆರೋಗ್ಯಕ್ಕೆ ಮೀಸಲು. ಅಂದರೆ ₹15,151 ಕೋಟಿ ಮೀಸಲು, ಬಜೆಟ್ನ ಶೇ. 5 ಒಳಾಡಳಿತ, ಸಾರಿಗೆಗೆ ಹಂಚಿಕೆ ಮಾಡಿದ್ದು, ಒಳಾಡಳಿತ & ಸಾರಿಗೆಗೆ ₹14,509 ಕೋಟಿ ಮೀಸಲು. ಇಂಧನ ಇಲಾಖೆಗೆ ₹13,803 ಕೋಟಿ ಹಂಚಿಕೆ. ಅಂದರೆ ಬಜೆಟ್ನ ಶೇ. 4 ಇಂಧನ ಇಲಾಖೆಗೆ ಮೀಸಲಿಡಲಾಗಿದೆ.
ಇನ್ನು ಸಮಾಜ ಕಲ್ಯಾಣ ಇಲಾಖೆಗೆ ₹11,163 ಕೋಟಿ ಮೀಸಲು. ಅಂದರೆ ಬಜೆಟ್ನ ಶೇ. 4ರಷ್ಟು ಹಂಚಿಕೆ ಮಾಡಲಾಗಿದೆ.
ಕರ್ನಾಟಕವು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ 1.39 ಲಕ್ಷ ರೈತ ಕುಟುಂಬಗಳು 1.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿಯನ್ನು ಕೈಗೊಳ್ಳುತ್ತಿದ್ದು, ಒಟ್ಟು ಉತ್ಪಾದನೆ 9,686 ಮೆಟ್ರಿಕ್ ಟನ್‌ಗಳಷ್ಟಿದೆ.
ರೇಷ್ಮೆ ಬೆಳೆಗಾರರಿಗೆ ವೈಜ್ಞಾನಿಕ ಪಾರದರ್ಶಕತೆ ಒದಗಿಸಲು ಹಾಗೂ ಇ-ಹರಾಜು ಮಾರುಕಟ್ಟೆಯಲ್ಲಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜತೆಗೆ ಹೊಸದಾಗಿ ಆರು ಮತ್ತು ಇ-ನಗದು ಗೂಡು ಪರೀಕ್ಷಾ ಕೇಂದ್ರಗಳು, ಆಧುನಿಕ ರೇಷ್ಮೆಗೂಡು ಮಾರುಕಟ್ಟೆ ಹಾಗೂ ಶೈತ್ಯಾಗಾರ ನಿರ್ಮಾಣ ಮಾಡಲಾಗಿದೆ. ರೇಷ್ಮೆ ಬೆಳೆಯನ್ನು 10 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ವಿಸ್ತರಿಸಲಾಗುವುದು ಎಂದು ಬೊಮ್ಮಾಯಿ ಘೋಷಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ. ಗಳ ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಾಗುವುದು.
ರೇಷ್ಮೆ ಬೆಳೆಗಾರರು ಆಧುನಿಕ ವಿಧಾನಗಳನ್ನು ಬಳಸಿಕೊಂಡು ಗುಣಮಟ್ಟದ ಕಚ್ಚಾ ರೇಷ್ಮೆ ಉತ್ಪಾದಿಸಲು ಅನುವಾಗುವಂತೆ 32 ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ. ಹಾಗೂ 1,000 ರೇಷ್ಮೆ ಬೆಳೆಗಾರರಿಗೆ ಬ್ರೆಡ್ಡರ್ಸ್ ಗಳನ್ನು ಒದಗಿಸಲು 12 ಕೋಟಿ ರೂ. ನೆರವು ನೀಡಲಾಗುವುದು.
ಮೂಲ ಬಿತ್ತನೆ ಗೂಡುಗಳ ನಿರಂತರ ಉತ್ಪಾದನೆ ಮತ್ತು ಸರಬರಾಜಿಗಾಗಿ ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯವನ್ನು ಬಲಪಡಿಸಲು 8 ಕೋಟಿ ರೂ. ಅನುದಾನ ಒದಗಿಸಲಾಗುವುದು.
ರೇಷ್ಮೆ ಗೂಡುಗಳನ್ನು ದೀರ್ಘಾವಧಿಗೆ ಸಂರಕ್ಷಿಸಿ ಇಡಲು ಹಾಗೂ ಆ ಮೂಲಕ ರೈತರಿಗೆ ರೇಷ್ಮೆಗೆ ಉತ್ತಮ ಬೆಲೆ ದೊರೆಯುವಂತೆ ಅನುಕೂಲ ಕಲ್ಪಿಸಲು ರಾಜ್ಯದ 10 ಪ್ರಮುಖ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ Hot Air Conveyor Dryer ಅನ್ನು ಅಳವಡಿಸಲು 5 ಕೋಟಿ ರೂ. ಗಳ ಅನುದಾನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ವಿವರಿಸಿದರು.