Please assign a menu to the primary menu location under menu

NEWSನಮ್ಮರಾಜ್ಯಶಿಕ್ಷಣ-

KSRTC ಹೆಮ್ಮೆಯ ನಿರ್ವಾಹಕ ಬಿ.ಎಸ್‌. ಮಹೇಶ್‌ಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪದವಿ ಪ್ರದಾನ – ಗ್ರಾಮಕ್ಕೂ ಕೀರ್ತಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೆಮ್ಮೆಯ ನಿರ್ವಾಹಕ ಬಿ.ಎಸ್‌. ಮಹೇಶ್‌ ಅವರು ಮಂಡಿಸಿದ “ಕಾವೇರಿ ವನ್ಯಜೀವಿ ವಲಯದ ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ವೀಕ್ಷಕರ ಸಮಸ್ಯೆಗಳು ಮತ್ತು ಸವಾಲುಗಳ ಬಗೆಗಿನ ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.

ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ರೈತಾಪಿ ಕುಟುಂಬದ ಶಿವಣ್ಣ ಹಾಗೂ ಕೆಂಪಮ್ಮ ದಂಪತಿಯ ಪುತ್ರ ಮಹೇಶ್‌ ಅವರು ಸಮಾಜಶಾಸ್ತ್ರ ವಿಷಯದಲ್ಲಿ “ಕಾವೇರಿ ವನ್ಯಜೀವಿ ವಲಯದ ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ವೀಕ್ಷಕರ ಸಮಸ್ಯೆಗಳು ಮತ್ತು ಸವಾಲುಗಳ ಬಗೆಗಿನ ಅಧ್ಯಯನ” ಎಂಬ ವಿಷಯಾಧಾರಿತ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಮಂಡಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟಿನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸಿನ ಮೇರೆಗೆ, ಡಾ.ಆರ್‌.ಗೋಪಾಲರಾಜು ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಿದ್ದಾರೆ.

ಡಾ.ಬಿ.ಎಸ್‌. ಮಹೇಶ್‌ ಕುರಿತು: ಮಹೇಶ್‌ ಅವರು ಶಿವಣ್ಣ ಮತ್ತು ಕೆಂಪಮ್ಮ ಅವರಿಗೆ ಏಕೈಕಪುತ್ರ, ಇವರಿಗೆ 3 ಎಕರೆ ಹೊಲವಿದೆ ( ಡ್ರೈಲ್ಯಾಂಡ್‌) ಮಳೆಯಾಶ್ರಿತ ಭೂಮಿಯಾಗಿರುವುದರಿಂದ ಅಷ್ಟೇನು ಕೃಷಿಯಿಂದ ಆದಾಯವಿಲ್ಲ. ಹೀಗಾಗಿ ಜೆಒಸಿ ಮಾಡಿದ ಬಳಿಕ ಮಹೇಶ್‌ ಅವರು ಕೆಎಸ್‌ಆರ್‌ಟಿಸಿಗೆ 2006ರಲ್ಲಿ ನಿರ್ವಾಹಕರಾಗಿ ನೇಮಕಗೊಂಡು ವೃತ್ತಿ ಆರಂಭಿಸಿದ್ದು, ಪ್ರಸ್ತುತ ಮಳವಳ್ಳಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬಡತನದ ಹಿನ್ನೆಯಲ್ಲಿ ಕೆಲಸಕ್ಕೆ ಸೇರುವುದು ಅನಿವಾರ್ಯವಾಗಿತ್ತು. ಆದರೂ ಇವರಿಗೆ ಹೆಚ್ಚಿಗೆ ಓದಬೇಕು ಎಂಬ ಬಗೆಗಿನ ಉತ್ಸಾಹ ಮಾತ್ರ ಕುಗ್ಗಲಿಲ್ಲ ಹೀಗಾಗಿ ಇವರು ಬಿಎ ಮತ್ತು ಎಂಎ ಅಂದರೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಕರೆಸ್ಪಂಡೆಂಟ್‌ನಲ್ಲೇ ಮುಗಿಸಿ ಬಳಿಕ ಪಿಎಚ್‌ಡಿ ಮಾಡುವ ಹಂಬಲದಿಂದ ಅದನ್ನು ಕೂಡ ಈಗ ಪೂರ್ಣಗೊಳಿಸಿದ್ದಾರೆ. ನನ್ನ ಆಸೆಗೆ ಸಾರಿಗೆ ಅಧಿಕಾರಿಗಳು ಸಾಥ್‌ ನೀಡಿದ್ದು ಈ ಸಾಧನೆಗೆ ಹಲವರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೂ ಇದೆ  ಎಂದು ಮಹೇಶ್‌ ಹೇಳಿದ್ದಾರೆ.

ಪ್ರಸ್ತುತ ಕೆಎಸ್‌ಆರ್‌ಟಿಸಿ ನಿರ್ವಾಹಕರಾಗಿದ್ದುಕೊಂಡೇ ಈ ಸಾಧನೆ ಮಾಡಿರುವ ಮಹೇಶ್‌ ಅವರು ಇಡೀ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸುಮಾರು 42 ಹಳ್ಳಿಗಳಲ್ಲಿ ಪಿಎಚ್‌ಡಿ ಮಾಡಿರುವವರಲ್ಲಿ ಇವರೇ ಮೊದಲಿಗರಾಗಿದ್ದಾರೆ. ಈವರೆಗೂ ಮಹೇಶ್‌ ಅವರ ಗ್ರಾಮ ಬ್ಯಾಡರಹಳ್ಳಿ ಸೇರಿದಂತೆ ಇಡೀ ಗ್ರಾಪಂ ವ್ಯಾಪ್ತಿಯಲ್ಲಿ ಯಾರೂ ಕೂಡ ಪಿಎಚ್‌ಡಿ ಪದವಿ ಪಡೆದಿಲ್ಲ. ಹೀಗಾಗಿ ಇವರು ಇಡೀ ಗ್ರಾಮವಷ್ಟೇ ಅಲ್ಲದೆ ಗ್ರಾಪಂ ವ್ಯಾಪ್ತಿಯ 42 ಹಳ್ಳಿಗಳ ಯುವಕರಿಗೆ ಪ್ರೇರಣೆಯಾಗಿದ್ದಾರೆ.

ಮಹೇಶ್‌ ಅವರಿಗೆ ಮದುವೆಯಾಗಿದ್ದು, ಇಬ್ಬರು ಪುತ್ರಿಯರು ಇದ್ದಾರೆ. ಸದ್ಯ ಇಡೀ ಸಂಸಾರದ ಹೊಣೆ ಹೊತ್ತಿರುವ ಇವರು ಅಪ್ಪ, ಅಮ್ಮ ಜತೆಗೆ ಹೆಂಡತಿ ಮಕ್ಕಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...