CrimeNEWSನಮ್ಮಜಿಲ್ಲೆ

ಮೈಸೂರು ಚಾಮುಂಡಿ ಬೆಟ್ಟದ ತಪ್ಪಲು ಸೇರಿ ಐದು ಕಡೆ ಬೆಂಕಿ : ಕಿಡಿಗೇಡಿಗಳ ಕೃತ್ಯ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಕಿಡಿಗೇಡಿಗಳು ತಮ್ಮ ದುಷ್ಕೃತ್ಯ ಎಸಗುತ್ತಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲು ಸೇರಿದಂತೆ ಐದು ಸ್ಥಳಗಳಲ್ಲಿ ಬೆಂಕಿ ಹೊತ್ತಿಕೊಂಡು ಮುಗಿಲೆತ್ತರಕ್ಕೆ ಹೊಗೆ ಚಾಚಿತ್ತು.

ಚಾಮುಂಡಿಬೆಟ್ಟದ ತಪ್ಪಲಿನ ಗೌರಿ ಶಂಕರ ನಗರದ ಬಳಿ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೇಟಗಳ್ಳಿ ಕೈಗಾರಿಕಾ ಪ್ರದೇಶ, ಸಿವೇಜ್ ಫಾರಂ ಹಾಗೂ ಮೈಪಾಲ್ ಕೈಗಾರಿಕೆ ಬಳಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅಪಾರ ಪ್ರಮಾಣದ ಹಾನಿಯುಂಟಾಗಿದ್ದು,ಯಾವುದೇ ಪ್ರಾಣಹಾನಿಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ತಹಬದಿಗೆ ತಂದಿದ್ದದಾರೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಗೌರಿಶಂಕರ ನಗರದ ಬಳಿ ಭಾನುವಾರ ಕಿಡಿಗೇಡಿಗಳು ಖಾಲಿ ಜಾಗದಲ್ಲಿ ಹಚ್ಚಿದ್ದ ಬೆಂಕಿಯಿಂದಾಗಿ ಕೆಲಕಾಲ ಆತಂಕ ಉಂಟಾಗಿತ್ತು. ಮೊನ್ನೆಯಷ್ಟೇ ಚಾಮುಂಡಿಬೆಟ್ಟದಲ್ಲಿ ಕಿಡಿಗೇಡಿ ಗಳು ಹಚ್ಚಿದ್ದ ಬೆಂಕಿಗೆ ಹಲವು ಎಕರೆ ಅರಣ್ಯ ಭಸ್ಮ ವಾಗಿತ್ತು. ಮರು ದಿನವೇ ಬೆಟ್ಟದ ತಪ್ಪಲಿನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯಿಂದಾಗಿ ಚಾಮುಂಡಿಬೆಟ್ಟಕ್ಕೆ ಮತ್ತೊಮ್ಮೆ ಬೆಂಕಿ ಆವರಿಸುವ ಆತಂಕ ನಿರ್ಮಾಣ ವಾಗಿತ್ತು. ತಪ್ಪಲಿನಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಅರಣ್ಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಟ್ಟಕ್ಕೆ ಹೊಂದಿಕೊಂಡಂತೆ ಇರುವ ಖಾಲಿ ಜಾಗದಲ್ಲಿ ಕೆಲವರು ಟೀ ಅಂಗಡಿಗಳಲ್ಲಿ ಬಳಸಿದ ಪೇಪರ್ ಲೋಟ ಹಾಗೂ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯ ತಂದು ಬೆಂಕಿ ಹಚ್ಚುವುದು ಕಂಡು ಬಂದಿದೆ. ಬೆಳಗ್ಗೆ ಯಾರೋ ಸುಟ್ಟಿದ್ದ ಪ್ಲಾಸ್ಟಿಕ್ ಪೇಪರ್‌ನಿಂದ ಕಿಡಿ ಹೊತ್ತಿಕೊಂಡು ಬೆಂಕಿ ವ್ಯಾಪಿಸಿದೆ. ಬೇಸಿಗೆ ಆರಂಭ ವಾಗಿರುವುದರಿಂದ ರಸ್ತೆಬದಿ ಬೀಡಿ-ಸಿಗರೇಟ್ ಕಿಡಿ ನಂದಿಸದೆ ಎಸೆಯಬಾರದು.

ಟೈರ್ ರೀ ಬಿಲ್ಟ್ ಕಾರ್ಖಾನೆಯಲ್ಲಿಯೂ ಬೆಂಕಿ:  ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ್ ಪ್ರಿಸಿಷನ್ ಡೈಸ್ ಎಂಬ ಟೈರ್ ರೀ ಬಿಲ್ಟ್ ಕಾರ್ಖಾನೆಯಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಕಾರ್ಖಾನೆಯ ಆವರಣದಲ್ಲಿದ್ದ ಒಂದು ಕ್ಯಾಂಟರ್ ವಾಹನ ಮತ್ತು ಅಪಾರ ಪ್ರಮಾಣದ ಟೈರ್ ಗಳು ಮತ್ತು ಟೈರ್ ರೀ ಬಿಲ್ಟ್‍ನ ಪದಾರ್ಥಗಳು ನಾಶವಾಗಿದೆ.

ಟೈರ್‌ಗಳಿಗೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿಯೇ ಇದ್ದ ಮಾಜಿ ಶಾಸಕ ವಾಸು ಅವರ ಒಡೆತನದ ಟಿಷ್ಯೂ ಕಾರ್ಖಾನೆಯ ಆವರಣಕ್ಕೆ ಹೊತ್ತಿಕೊಂಡಿತು. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ.

ಸುವೇಜ್ ಫಾರಂ: ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಸುವೇಜ್ ಫಾರಂ ಆವರಣದಲ್ಲಿ ಪ್ಲಾಸ್ಟಿಕ್ ರಾಶಿಗೆ ಬೆಂಕಿ ಹೊತ್ತಿಕೊಂಡಿದ್ದು, ಶಾಸಕ ರಾಮದಾಸ್ ಸ್ಥಳದಲ್ಲಿಯೇ ಮೊಕಾಮೂ ಹೂಡಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪರಿಶೀಲಿಸಿದರು.

ಇದೇ ರೀತಿ ಕಿಡಿಗೇಡಿಗಳು ಹಂಚಿದ ಬೆಂಕಿಗೆ ನಗರದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಕುಸುಮ ಪ್ಯಾಕೇಜ್ ಕಾರ್ಖಾನೆ, ಮೈ ಪಾಲ್ ಕಾರ್ಖಾನೆಯ ಬಳಿಯೂ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಪರಿಣಾಮ 18ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳನ್ನು ಬಳಸಿಕೊಂಡು ಸಿಬ್ಬಂದಿ ಬೆಂಕಿ ನಂದಿಸಿದರು.

Leave a Reply

error: Content is protected !!
LATEST
ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್ ಅಂಗನವಾಡಿ ನೌಕರರ ಸರ್ಕಾರಿ ನೌಕರರಾಗಿ ಪರಿಗಣಿಸಿ: ಹೈಕೋರ್ಟ್ ತೀರ್ಪಿನಿಂದ ಕರ್ನಾಟಕದ ಅಂಗನವಾಡಿ ನೌಕರರಿಗೂ ಬಲ