NEWSನಮ್ಮಜಿಲ್ಲೆನಮ್ಮರಾಜ್ಯ

ಏಳಿ ಎದ್ದೇಳಿ ಸಾರಿಗೆ ನೌಕರರೇ ಈಗಲಾದರೂ ಗುಲಾಮಗಿರಿ ಪದ್ಧತಿಯಿಂದ ಹೊರಬನ್ನಿ : ನಿವೃತ್ತ ಸಾರಿಗೆ ನೌಕರ ಕರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದುರಂತ ನಾಯಕನ ಕರ್ಮ ಕಥೆ!? 40ವರ್ಷದಿಂದ ಸಾರಿಗೆ ನೌಕರರ ಬಾಯಿಗೆ ಮೊಸರನ್ನು ಮೆತ್ತಿ ತಾನು ಮೃಷ್ಟಾನ್ನ ಭೋಜನ ಸವಿಯುತ್ತಲೇ ಬಂದಿರುವ ಸಂಘಟನೆಯೊಂದರ ರಾಜ್ಯದ್ಯಕ್ಷ ಹಾಗೂ ಜಂಟಿ ಕ್ರಿಯಾ ಸಮಿತಿಯ ಪಾರುಪತ್ತೆಯನ್ನು ವಹಿಸಿರುವ ಹಿರಿಯ.

ಕಳೆದ 40 ವರ್ಷಗಳಿಂದ ಅಧಿಕಾರಿಗಳ ಗುಲಾಮನಾಗಿ ಸಾರಿಗೆ ನೌಕರರನ್ನು ಅನ್ಯಾಯವಾಗಿ ಆರ್ಥಿಕ ಸಂಕಷ್ಟದ ಕೂಪಕ್ಕೆ ತಳ್ಳಿ ಇಂದಿಗೂ ತನ್ನ ರುದ್ರವರ್ತನೆ ಮುಂದುವರಿಸಿದ ಪಾಪಿ… ಅಂದ್ರು ತಪ್ಪಾಗಲಾರದು. ಅಧಿಕಾರಿಗಳಿಗೆ ವಜಾಗೊಂಡ ನೌಕರರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟು ಚುನಾವಣೆ ಅಂತ್ಯದವರೆಗೂ ಯಾವೊಬ್ಬ ನೌಕರರನ್ನು ಮರುನೇಮಕ ಮಾಡಿಕೊಳ್ಳಬೇಡಿ ಅಂತ ಪಿತೂರಿ ಮಾಡಿ, ಈಗ ವಜಾಗೊಂಡ ನೌಕರರನ್ನು ಕೂಡಲೇ ಮರುನೇಮಕ ಮಾಡಿಕೊಳ್ಳಬೇಕೆಂದು ನಾಟಕವಾಡುತ್ತಿರುವ ಮಹಾ ನಾರದ.

ಅಲ್ಲದೆ ನಾನಿಲ್ಲದಿದ್ದರೆ ಸಾರಿಗೆ ನೌಕರರು ಬದುಕೋದೇ ಇಲ್ಲ ಅನ್ನೋ ಹಾಗೆ ನಾಟಕ ಮಾಡುವ ಬೃಹನ್ನಳೆ… ನೌಕರರ ಪಾಲಿನ ಯಮ, ಕ್ರೂರಿ, ದುರಂತ ನಾಯಕ. ಈಗ ಜನಬೆಂಬಲ ಇಲ್ಲದ ಸುಮಾರು ಏಳೆಂಟು ಸಂಘಟನೆಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಪೂರ್ವಗ್ರಹ ಪೀಡಿತನಾಗಿ ಅಗ್ರಿಮೆಂಟ್‌ಗೆ ಈ ಮೊದಲೇ ಶೇ. 12ರಷ್ಟು ಒಳ ಒಪ್ಪಂದ ಮಾಡಿಕೊಂಡು ತನ್ನ ಜತೆಯಲ್ಲಿರುವ ಸಂಘಟನೆಗಳ ಮುಖಂಡರನ್ನು ಮತ್ತೆ ಶುದ್ಧ ಮೂರ್ಖರನ್ನಾಗಿಸುತ್ತಿರುವ ಕುತಂತ್ರಿ.

ಇವನನ್ನು ನಂಬಿದ ಸಾರಿಗೆ ನೌಕರರು ಸುಮಾರು 40 ವರ್ಷಗಳಿಂದ ಪಡಬಾರದ ಪಾಡುಪಟ್ಟು ಎಷ್ಟೋ ಜನ ಇವನ ಪಾದಾರವಿಂದಕ್ಕೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಐಟಿಸಿ, ಕಿರ್ಲೋಸ್ಕರ್, ಎಚ್‌ಎಮ್‌ಟಿ ಮತ್ತು ರೇಷ್ಮೆ ಕಾರ್ಖಾನೆಗಳಂತಹ ಹತ್ತು ಹಲವು ಕಾರ್ಖಾನೆಗಳನ್ನು ಮುಚ್ಚಿ ಅಲ್ಲಿನ ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿದ ಕೀಚಕ.

ಈಗ ಸಾರಿಗೆ ಸಂಸ್ಥೆಗಳನ್ನು ಹಂತ ಹಂತವಾಗಿ ಖಾಸಗೀಕರಣ ಮಾಡುವುದರ ಮುಖಾಂತರ ಇದನ್ನು ಸಹ ಮುಚ್ಚುವ ಹುನ್ನಾರದೊಂದಿಗೆ ಕೆಲವೇ ದಿನಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ಖಾಸಗಿ ಚಾಲಕರನ್ನು ನೇಮಕ ಮಾಡಿಕೊಳ್ಳಲು ಹಿಂಬಾಗಿಲಿನಿಂದ ಸೂಚಿಸಿ ಮುಂದೆಯಿಂದ ಖಾಸಗೀಕರಣ ನಿಲ್ಲಬೇಕು ಅಂತ ಹೋರಾಡುವ ತರ ನಾಟಕ ಮಾಡಿ ನೌಕರರಿಗೆ ಒಳ್ಳೆಯವನು ಎಂದು ತೋರಿಸುವ ನಾಜೂಕುಗಾರ.

ಈ ನಾಟಕ ಅದಷ್ಟೇ ಅಲ್ಲದೆ ಸಾರಿಗೆ ನೌಕರರಿಗಾಗಿ ಹುಟ್ಟಿರುವ ಸಾರಿಗೆ ನೌಕರರ ಪರವಾಗಿ ಹೋರಾಟ  ಮಾಡುತ್ತಿರುವ ನಿರ್ನಾಮ ಮಾಡಲು ಹಗಲಿರುಳು ಎನ್ನದೆ ತನ್ನ ಜತೆ ನಾಲ್ಕಾರು ನಾಯಕರನ್ನು ಹಿಡಿದುಕೊಂಡು ಶ್ರಮಿಕ ಸಾರಿಗೆ ನೌಕರರ ಬಾಳನ್ನ ಹಾಳು ಮಾಡೋದಕ್ಕೆ ಹೊರಟಿರುವ ನವರಂಗಿ.

ಆಂಧ್ರಪ್ರದೇಶದ ಸಾರಿಗೆ ನೌಕರರು ಹೋರಾಟ ಮಾಡುವಾಗ ಅಲ್ಲಿನ ನೌಕರರಿಗೆ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಬಾಹ್ಯ ಬೆಂಬಲ ಕೊಟ್ಟ ದುಷ್ಟ. ತನ್ನದೇ ರಾಜ್ಯದಲ್ಲಿ ಸಾರಿಗೆ ನೌಕರರನ್ನು ಕೊನೆಪಕ್ಷ ವೇತನ ಆಯೋಗ ಅಳವಡಿಸುವುದಕ್ಕೂ ಬಿಡದೆ ವಿರೋಧಪಡಿಸುತ್ತಿರುವ ನೀಚ.

ನೋಡಿ ಶ್ರಮಿಕ ಸಾರಿಗೆ ನೌಕರ ಬಂಧುಗಳೇ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ಇಂತಹ ನಾಜೂಕು ಮಾತನಾಡಿ ನೌಕರರ ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡುವ ಈ ನಾಯಕನ ಅಂತ್ಯ ಹಾಡುವವರೆಗೂ ನಿಲ್ಲದಿರಿ. ಅದಕ್ಕಾಗಿ ಬರುವ ಮುಷ್ಕರದಲ್ಲಿ ಕುಟುಂಬ ಸಮೇತರಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಜತೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಈತನ ತೊಲಗಿಸಲು ಪಣತೊಡೋಣ.

ಜತೆಗೆ ನಮ್ಮ ಯುವಪೀಳಿಗೆಯ ಭವಿಷ್ಯಕ್ಕೆ ಮುನ್ನುಡಿ ಹಾಡೋಣ. ಏಳಿ ಎದ್ದೇಳಿ ಸಾರಿಗೆ ನೌಕರರೇ ಈಗಲಾದರೂ ಗುಲಾಮಗಿರಿ ಪದ್ಧತಿಯಿಂದ ಹೊರಬಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೂಡ ಸಾಮಾಜಿಕ ನ್ಯಾಯ ಪಡೆಯುವ ನಿಟ್ಟಿನಲ್ಲಿ ಸಂವಿಧಾನಿಕ ಅಭಿವ್ಯಕ್ತಿ ಸ್ವತಂತ್ರದ ಮುಖಾಂತರ ಹೋರಾಡೋಣ. ಎಚ್ಚೆತ್ತುಕೊಳ್ಳಿ ಇದು ನಮ್ಮ ಬದುಕಿನ ಭವಿಷ್ಯದ ಕೊನೆಯ ಅವಕಾಶ ಯಾರೂ ಕೂಡ ಅನ್ಯತಾ ಭಾವಿಸದೆ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ.

– ಇಂತಿ ನಿಮ್ಮ ಅನುಭವಿ ನಿವೃತ್ತ ನೌಕರ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ