ಏಳಿ! ಎದ್ದೇಳಿ!! ಕಾರ್ಮಿಕ ಕಲಿಗಳೇ!!!
ಮಲಗಿದ್ದು ಸಾಕಿನ್ನು, ಹೋರಾಡಬೇಕೀಗ
ಸರ್ಕಾರಿ ಜೀತ ಮುಕ್ತಿಗೆ; ಸ್ವಾರ್ಥಕ್ಕಾಗಿ ಅಲ್ಲ,
ಸ್ವಾಭಿಮಾನದ ಸುಂದರ ಬದುಕಿಗೆ||
ಓ..! ನನ್ನ ಕಾರ್ಮಿಕ ಬಂಧುವೇ!!
ನೀ ನೊಂದು-ಬೆಂದು-ಸೋತು ಸತ್ತರೂ
ನಿನ್ನ ನೋವಿನ ಕೂಗು ಕಿವಿಗೆ ಕೇಳಲಿಲ್ಲ,
ಸರ್ಕಾರದ; ಮನ ಒಂದಿನಿತೂ ಕರಗಲಿಲ್ಲ||
ಮಡದಿ-ಮಕ್ಕಳು ಕಾಣಲಿಲ್ಲ ಚೆಂದ ಬಟ್ಟೆ,
ನೀ ಮನೆ ತೊರೆದು ಹಗಲಿರುಳು ದುಡಿದರೂ
ಬಡವ; ನಿನ್ನ ಹೊಟ್ಟೆಗೆ ಹಿಟ್ಟೂ ನೀಡದೇ
ಕುಳಿತಿಹುದು ಹೀನಸರ್ಕಾರ ಕಣ್ಣ್ ಮುಚ್ಚಿ||
ಸಹಿಸಿದ್ದು ಸಾಕಿನ್ನು ಅಂಧ ಶೋಷಣೆ
ನೀ; ಪಡೆಯಬೇಕೀಗ ಸಮಾನ ವೇತನ,
ಬಿಟ್ಟುಬಿಡಬೇಕಿನ್ನು ಒಣಕೋಳಿ ಜಗಳ
ನೀ; ಮಾಡಬೇಕೀಗ ಒಗ್ಗಟ್ಟಿನ ಶಪಥ||
ಮೈದಡವಿ ಏದ್ದೇಳದಿದ್ದರೇ ನಿದಿರೆಯಿಂದ,
ಮೈಸವರಿ ಮಲಗಿಸುವರು ಎಂದೆಂದೂ..!
ಹೋರಾಟಕ್ಕಿಳಿಯದಿದ್ದರೇ ಒಮ್ಮತದಿಂದ,
ಉದ್ಧಾರವಾಗಲಾರಿರಿ ಮುಂದೆಂದೂ..!||