NEWSದೇಶ-ವಿದೇಶರಾಜಕೀಯ

ಶೇ.14ರಷ್ಟು ವೇತನ ಹೆಚ್ಚಳ ಒಪ್ಪದ ಸಮಾನ ಮನಸ್ಕರ ವೇದಿಕೆ : ಎಂಡಿಗಳ ಜತೆ ನಡೆದ ಸಭೆ ವಿಫಲ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳ ಜತೆ ವೇತನ ಹೆಚ್ಚಳದ ಬಗ್ಗೆ ಬುಧವಾರ ಚರ್ಚೆ ನಡೆಯಿತು. ಈ ವೇಳೆ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯಮಂತ್ರಿಯವರು ಹಾಗೂ ಸಾರಿಗೆ ಸಚಿವರ ಜತೆಯಲ್ಲಿ ದೂರವಾಣಿ ಮೂಲಕ ಪಡೆದ ಮೌಖಿಕ ಆದೇಶದ ಮೇರೆಗೆ 1-1-2020ರ ಬೇಸಿಕ್ ಮೇಲೆ 14% ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದರು.

ಅದಕ್ಕೆ ನಾವು ಒಪ್ಪದ ಕಾರಣ ಸಭೆ ವಿಫಲವಾಗಿದೆ. ಹೀಗಾಗಿ ಮತ್ತೊಮ್ಮೆ ವ್ಯವಸ್ಥಾಪಕ ನಿರ್ದೇಶಕರು ಸಿಎಂ ಅವರಿಗೆ ನಿಮ್ಮ ಮನವಿ ವಿವರಿಸಿ ಅವರು ಏನು ಆದೇಶ ಮಾಡುತ್ತಾರೋ ಅದನ್ನು ನಿಮಗೆ ತಿಳಿಸುತ್ತೇವೆ ಎಂದು ಹೇಳಿದರು.

ಇದರ ನಡುವೆ ಸಭೆಯಲ್ಲಿ ನಡೆದ ಚರ್ಚೆಗಳು: ತಾಳಶಾಸನ ಮೋಹನ್ ಮಾತನಾಡಿ ಅಗ್ರಿಮೆಂಟ್ ಪದ್ದತಿಯಲ್ಲಿ 39 ಸಾವಿರ‌ ಕೋಟಿ ರೂ. ನಷ್ಟದಲ್ಲಿ ಇರುವ KPTCL ನೌಕರರಿಗೆ ಸರ್ಕಾರ 20% ನೀಡಿದೆ ಮತ್ತು ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಜಾರಿಗೆ ಮುನ್ನವೇ 17% ಮಧ್ಯಂತರ ಪರಿಹಾರವಾಗಿ ನೀಡಿದೆ.

ಹೀಗಾಗಿ ಇವೆರಡರಲ್ಲಿ ಒಂದನ್ನು ಕಡ್ಡಾಯವಾಗಿ ಜಾರಿಗೆ ತನ್ನಿ. ಅದಕ್ಕಿಂತ ಹೆಚ್ಚಿನದಾಗಿ 6-4-2021 ರ ಯಥಾಸ್ಥಿತಿ ಕಾಪಾಡಬೇಕು ಮತ್ತು ಕಾರ್ಮಿಕ ಸಂಘಟನೆಗಳಿಗೆ ಚುನಾವಣೆ ನಡೆಯಬೇಕು ಇದರ ಬಗ್ಗೆ ಆದೇಶದ ಕಾಪಿ ನಮಗೆ ಬೇಕು ಎಂದು ಒತ್ತಾಯಿಸಿದರು.

ಅದಕ್ಕೆ ದನಿಗೂಡಿಸಿದ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಅದೇ ವಿಷಯಗಳನ್ನು ಪುನರ್ ಮಂಡಿಸಿ ಕಳೆದ 2020ರ ಸಂಧಾನ ಸಭೆಯಲ್ಲಿ ಬಸವರಾಜ ಬೋಮ್ಮಾಯಿ ಅವರು ಗೃಹಮಂತ್ರಿಗಳಾಗಿ ಭಾಗವಹಿಸಿದ್ದರು. ಇವಾಗ ಅವರೆ ಮುಖ್ಯಮಂತ್ರಿ ಆಗಿರುವುದರಿಂದ ಸರ್ಕಾರದ ಮುಂದೆ ಇರುವ ವೇತನ ಆಯೋಗ ನೀಡುವ ಪ್ರಸ್ತಾಪದ ಫೈಲ್ ಮುಂದುವರಿಸಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈತರದ ಅವೈಜ್ಞಾನಿಕ ಪದ್ಧತಿ ಮರುಕಳಿಸುವುದು ಬೇಡ ಶಾಶ್ವತ ಪರಿಹಾರ ನೀಡಬೇಕು. HRA, DA ಮಾದರಿಯಲ್ಲಿ ವೇತನ ಹೆಚ್ಚಳ ಜಾರಿಗೆ ತನ್ನಿ ಎಂದರು.

KBNN ನಾಗರಾಜ್ ಅವರು ಮಾತನಾಡಿ, ಸಭೆಗಳ ಮೇಲೆ ಸಭೆ ನಡೆಯುತ್ತಿದೆ. ಆದರೆ ಬಹುಪಾಲು ನೌಕರರ ವಿಷಯದಲ್ಲಿ ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಸಂಘಗಳಿಗೆ ಚುನಾವಣೆ ನಡೆಯದಿರುವುದೆ ಆಗಿದೆ. ಹೀಗಾಗಿ ಮೊದಲು ಚುನಾವಣೆ ಮಾಡಲು‌ ಗಮನಕೊಡಿ ಎಂದರು.

ಸಭೆಯಲ್ಲಿ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳಾದ ಚಂಪಕಾವತಿ, ಸತೀಶ್, ತಿಪ್ಪೇಸ್ವಾಮಿ, ಓಂಕಾರ್, ಬೆಟ್ಟರಾಜು, ಕೃಷ್ಣಯ್ಯ ಇತರರು ಇದ್ದು ಈ ವಿಷಯಗಳಿಗೆ ಸಹಮತ ವ್ಯಕ್ತಪಡಿಸಿದರು. ನಂತರ ಮಾತನಾಡಿದ ವ್ಯವಸ್ಥಾಪಕರು ನಿಮ್ಮ ಎಲ್ಲ ವಿಷಯಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅವರ ಆದೇಶದ ಮೇರೆಗೆ ತೀರ್ಮಾನವನ್ನು ತಿಳಿಸುವುದಾಗಿ ಹೇಳಿದರು.

ಒಟ್ಟಾರೆ ಬುಧವಾರ ಕರೆದಿದ್ದ ಸಭೆ ವಿಫಲವಾಗಿದ್ದು, ಹೀಗಾಗಿ ಮುಂದಿನ ಹೋರಾಟದ ಬಗ್ಗೆ ಸಭೆ ಕರೆದು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...