NEWSದೇಶ-ವಿದೇಶರಾಜಕೀಯ

ರಕ್ತ ಬಸಿಯುವ ಸರ್ಕಾರಗಳ ನಿರ್ಧಾರಕ್ಕೆ ಧಿಕ್ಕಾರ: ಇಲ್ಲಿ ಆಧಾರ್, ಪ್ಯಾನ್‌ ಲಿಂಕ್ ಆಗುವಾಗ ಕಣ್ಣೀರು ತುಂಬಿದ ಬಡವನ ಕಣ್ಣುಗಳು ಬ್ಲಿಂಕ್ ಆಗುತ್ತಿದ್ದವು..!

ವಿಜಯಪಥ ಸಮಗ್ರ ಸುದ್ದಿ

ಅದು ಡಿಜಿಟಲ್ ಸೈಬರ್ ಕೇಂದ್ರ ಕುಟುಂಬದ ಒಟ್ಟು 7 (ತನ್ನದ್ದು, ಹೆಂಡತಿದ್ದು,ಅಪ್ಪ, ಅಮ್ಮ, ಹೆಂಡತಿಯ, ತಂದೆ ತಾಯಿ ತಂಗಿಯದ್ದು) ಮಂದಿಯ ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಬೇಕಿತ್ತು ಬಾಬಣ್ಣ ನಿಗೆ (ಹೆಸರು ಬದಲಿಸಿದೆ).. ಎಲ್ಲ ದಾಖಲೆ ಕೊಟ್ಟ ಒಂದೊಂದೇ ಪ್ಯಾನ್ ಆಧಾರ್ ಲಿಂಕ್ ಆಗುತಿತ್ತು.

ಒಟ್ಟು 7 ಸಾವಿರ ರೂಪಾಯಿ ಕೇಳಿದಾಗ ಕಿಸೆಯಿಂದ ತೆಗೆದ, ಆ ವೇಳೆ ಕಿಸೆಯಿಂದ ಪಿಂಕ್ ಬಣ್ಣದ ಚೇಟಿಯೊಂದು ಬಿತ್ತು, ಸೈಬರ್ ಅಂಗಡಿಯವ ಓದಿದ. ಹೆಂಡತಿಯ ಮಾಂಗಲ್ಯ ಸರವನ್ನು 10 ಸಾವಿರ ರೂಪಾಯಿಗೆ ಅಡವಿಟ್ಟಿದ್ದ ಬ್ಯಾಂಕ್ ಅಲ್ಲಿ.

ಅಂಗಡಿಯಾತನಿಗೂ ಬೇಸರವಾಗಿತ್ತು “ಮಾಂಗಲ್ಯ ಅಡವಿಟ್ಟು ಹಣ ತಂದ್ಯಾ?” ಕೇಳಿದಾಗ. ಮುಚ್ಚಿಟ್ಟಿದ್ದ ಒಳಗಿನ ವಿಷಯ ತಿಳಿದ ದುಃಖ ಬಾಬಣ್ಣನ ಮುಖದಲ್ಲಿತ್ತು,” ಹೌದು ಸ್ವಾಮಿ ಏನು ಮಾಡುವುದು ಹೇಳಿ ಈ ಉರಿಬಿಸಿಲಲ್ಲೂ ಬೆಳಗ್ಗೆಯಿಂದ ಸಂಜೆ ದುಡಿಯುವ ದಿನಕೊಲಿ ಕಾರ್ಮಿಕರು ನಾವು.

ಕೆಲವು ದಿನ ಕೆಲಸ ಇದ್ದರೆ ಕೆಲವು ದಿನ ಇರುವುದಿಲ್ಲ. ಸಂಜೆ ತನಕ ದುಡಿದರೆ 800 ರೂ. ಸಿಗುತ್ತದೆ.. ಮನೆ ಖರ್ಚು, ಅಕ್ಕಿ, ಬೇಳೆ, ಮಕ್ಕಳ ಶಾಲೆ, ಹಾಲು, ತರಕಾರಿ, ಸಾಲದ ಕಂತು ತುಂಬುವಾಗ ತಿಂಗಳ ಕೊನೆಯಲ್ಲಿ ಏನೇನೂ ಉಳಿಯುದಿಲ್ಲ.. ಮತ್ತೆ 7000 ಎಲ್ಲಿಂದ ತರೋದು ಸ್ವಾಮಿ?

ಇವತ್ತು ಕೆಲಸ ಬಿಟ್ಟು ಬಂದೆ ಅಲ್ಲೂ 800 ರೂ. ಹೋಯ್ತು, ಒಟ್ಟು 7 ಜನ ಬಸ್ ಚಾರ್ಜ್ ಬೇರೆ, ಮನೇಲಿ ಅಡವಿಡೋಕೆ ಕರಿಮಣಿ ಮಾತ್ರ ಉಳಿದಿತ್ತು… ಉಳಿದಿದ್ದೆಲ್ಲ ಕೊರೊನಾ ಸಮಯದಲ್ಲಿ ಇಟ್ಟಾಗಿದೆ ಎನ್ನುವಾಗ ಅಲ್ಲೇ ಇದ್ದ ಆತನ ಹೆಂಡತಿ ಸೆರಗು ಹೊದ್ದು ನಿಲ್ಲುತ್ತಾಳೆ.

ಅರಶಿಣ ಕೊಂಬಿಗೆ ದಾರ ಕಟ್ಟಿದ ಕರಿಮಣಿ ತೋರಬಾರದು ಎಂಬುದು ಅವಳ ಉದ್ದೇಶವಾಗಿತ್ತು. ಅಲ್ಲ ಸ್ವಾಮಿ ಇವತ್ತಾಗಿದ್ದಕ್ಕೆ ಬಚಾವ್ ಆಯ್ತು ನೋಡಿ ಇನ್ನು ಮುಂದಿನ ತಿಂಗಳಾಗಿದ್ದರೆ..7 ಜನಕ್ಕೆ ತಲಾ 10 ಸಾವಿರ ಊ.ಗಳಂತೆ 70 ಸಾವಿರ ರೂ.ಗಳನ್ನು ಕಟ್ಟಬೇಕು, ಅದಕ್ಕೆ ನಮ್ಮ ಮನೆಯ ಆರ್‌ಟಿಸಿ ಇಡಬೇಕಿತ್ತು ನೋಡಿ ಎನ್ನುವಾಗ ಬಾಬಣ್ಣನ ಕಣ್ಣಲ್ಲಿ ಅವನಿಗರಿವಾಗದಂತೆ ಕಣ್ಣೀರ ಹನಿಯೊಂದು ಮಿಂಚಿ ಮಾಯವಾಯಿತು.

ಅಲ್ಲಿ ಆಧಾರ್, ಪ್ಯಾನ್‌ಗಳು ಲಿಂಕ್ ಆಗುವಾಗ ಕಣ್ಣೀರು ತುಂಬಿದ ಬಡವನ ಕಣ್ಣುಗಳು ಬ್ಲಿಂಕ್ ಆಗುತ್ತಿದ್ದವು. ಆದರೆ ಇದಾವುದು ಈ ಸರ್ಕಾರವನ್ನು ನಡೆಸುವ ಜನಪ್ರತಿನಿಧಿಗಳು ಎನಿಸಿಕೊಂಡ ಮಹಾಶಯರ ಅರಿಗೆ ಬರುವುದೇ ಇಲ್ಲ. ಇವರು ನಮ್ಮನ್ನಾಳು ಜನ ಇವರಿಗೆ ನಾವೇ ಓಟ್‌ಹಾಕಿ ಗೆಲ್ಲಿಸಿ ಕಳುಹಿಸಿರೋದು. ಆದರೂ ಇದಾವುದು ಅವರಿಗೆ ಲೆಕ್ಕಕ್ಕೆ ಇಲ್ಲ. ಇರುವುದು ಒಂದೇ ಸುಲಿಗೆ.. ಸುಲಿಗೆ.. ಸುಲಿಗೆ..

ನೋಡಿ ನಾನೊಬ್ಬ ಭಕ್ತನೂ ಅಲ್ಲ ಗುಲಾಮನೂ ಅಲ್ಲ ದೇಶದ ಪ್ರಜ್ಞಾವಂತ ಪ್ರಜೆ. ಮತದಾರ ಅಷ್ಟೇ, ಪ್ರಶ್ನಿಸುವುದು ಸಂವಿಧಾನ ನನಗೆ ಕೊಟ್ಟ ಹಕ್ಕು. ಇಲ್ಲಿ ವಿಷಯ ಸರಳವಾಗಿದೆ ಪಾನ್ ಆಧಾರ್ ಲಿಂಕ್ ಮಾಡುವುದು ಅತೀ ಅವಶ್ಯ, ಓಕೆ ಒಪ್ಪುವ, ಹಾಗೆಂದು ಬಡ ಜನರನ್ನು ಬಲಿ ಪಶು ಮಾಡುವುದನ್ನು ಒಪ್ಪಲಾಗದು.

ಬನ್ನಿ ಬಿಪಿಎಲ್ ಕಾರ್ಡ್ ದಾರರನ್ನು ಈ ರೀತಿಯ ಸುಲಿಗೆ ಇಂದ ರಕ್ಷಿಸೋಣ.. ನೆನಪಿರಲಿ ಬಡವನ ಕಣ್ಣಲ್ಲಿ ಕಣ್ಣೀರಿಗೆ ನಿಮ್ಮ ನೀತಿ ನಿಯಮಗಳು ಕಾರಣವಾದರೆ… ಆ ಕಣ್ಣೀರು ನಿಮಗೆ ಶಾಪ ವಾಗಬಲ್ಲುದು..1 ಸಾವಿರ ಮತ್ತು 10ಸಾವಿರ ರೂ.ಗಳ ವಸೂಲಾತಿ ತಕ್ಷಣ ನಿಲ್ಲಿಸಿ.

ಹೀಗೆ ನನ್ನ ವಾಟ್ಸ್‌ಆಪ್‌ಗೆ ಮೆಸೆಜ್‌ ಬಂದಿತ್ತು. ಅದನ್ನು ನೋಡಿ ನನ್ನ ಮನಸ್ಸಿಗೂ ನೋವಾಯಿತು. ಹಾಗಾಗಿ ಇದನ್ನು ನಿಮಗೂ ಮುಟ್ಟಿಸಬೇಕು ಎಂದು ಹಾಕ್ಕಿದ್ದೇವೆ.

Leave a Reply

error: Content is protected !!
LATEST
KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು? 8ಕಿಮೀ BMTC ಬಸ್‌ ಹಿಂಬಾಲಿಸಿಕೊಂಡು ಬಂದು ಚಾಲಕನ ಮೇಲೆ ಹಲ್ಲೆಮಾಡಿ ಪೊಲೀಸರ ಅತಿಥಿಯಾದ ಬೈಕ್‌ ಸವಾರ ಸರಿ ಸಮಾನ ವೇತನಕ್ಕೆ ಅಡ್ಡಗಾಲು ಹಾಕುವುದನ್ನು ಈಗಲಾದರೂ ಬಿಡಿ- ಸಾರಿಗೆ ಅಧಿಕಾರಿಗಳು-ನೌಕರರ ಆಗ್ರಹ ತೆರಿಗೆ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗಹಾಕಿ ವಸೂಲಿ ಮಾಡಿ: ತುಷಾರ್ ಗಿರಿನಾಥ್