ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ 70 ಸ್ಥಾನ ದಾಟುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಜೆಡಿಎಸ್ ಪಕ್ಷದ ಬೆಳವಣಿಗೆ ಕಂಡು ಬಿಜೆಪಿ ಕಾಂಗ್ರೆಸ್ ಇವರು ತಳಮಳಗೊಂಡಿದ್ದಾರೆ. ಏಪ್ರಿಲ್ 28ರವರೆಗೂ ನಮ್ಮ ಪ್ರಚಾರ ಮುಂದುವರೆಯುತ್ತದೆ. ಕಾಂಗ್ರೆಸ್ ನಾಯಕರೇ 500 ರೂ ಕೊಟ್ಟು ಜನ ಸೇರಿಸ್ತೀವಿ ಎಂದಿದ್ದರು ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ಹೊಡೆದಿದ್ದು ಯಾರೆಂದು ಸರ್ಕಾರವೇ ಉತ್ತರ ಕೊಡಬೇಕು. ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿಲ್ಲ. ಈ ವಿಚಾರದಲ್ಲಿ ಮುಸ್ಲೀಂ ಸಮುದಾಯದ ತಾಳ್ಮೆ ಮೆಚ್ಚಬೇಕು. ಮುಸ್ಲೀಂ ಸಮುದಾಯ ಪ್ರತಿಭಟನೆ ಮಾಡಿದರೆ ಏನಾಗುತ್ತಿತ್ತು ಎಂದು ಎಚ್‌ಡಿಕೆ ಹೇಳಿದರು.