2021 ಏ.7-21ರ ಆ ದಿನ ಸಾರಿಗೆ ಸಂಸ್ಥೆಯಲ್ಲಿ ಇತಿಹಾಸ ಸೃಷ್ಟಿಸಿದ ದಿನ- ಅಧಿಕಾರಿಗಳಿಗೆ ಬಳಿಕ ಜ್ಞಾನೋದಯ ಮಾಡಿಸಿದ ದಿನ!!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2021ರ ಏಪ್ರಿಲ್ 7ರಿಂದ ಏ.21 ಮರೆಯಲಾಗದ ದಿನಗಳು. ಈ ದಿನಗಳ ನಡುವೆ ನಡೆದ ಹೋರಾಟದಲ್ಲಿ ನೌಕರರಿಗೆ ಹಲವಾರು ಪ್ರಯೋಜನಗಳಾಗಿದ್ದರೂ ಹಲವು ನೌಕರರು ಇನ್ನಿಲ್ಲದಂತ ನೋವು ಅನುಭವಿಸಿದ್ದು, ಈಗಲೂ ನೂರಾರು ನೌಕರರು ಅದೇ ನೋವಿನಲ್ಲೇ ಇದ್ದಾರೆ.
ಹೌದು! ಇದನ್ನು ನಂಬಲು ಕಷ್ಟವಾದರೂ ಇದು ಅಕ್ಷರಶಃ ಸತ್ಯ. ಆ 14ದಿನಗಳ ಹೋರಾಟದಿಂದ ಬಿಎಂಟಿಸಿ ಒಂದರಲ್ಲೇ 2500ಕ್ಕೂ ಹೆಚ್ಚು ಮಂದಿ ಅಮಾನತಾದರು, ನೂರಾರು ನೌಕರರು ವಜಾಗೊಂಡರು, ಇದೇ ರೀತಿ ಉಳಿದ ಮೂರು ನಿಗಮಗಳಲ್ಲೂ ನೌಕರರ ಮೇಲೆ ಗದಾಪ್ರಹಾರ ಅಂದು ನಡೆಯಿತು.
ಈ ಎಲ್ಲದರ ನಡುವೆ ವರ್ಗಾವಣೆ ಜತೆಗೆ ಪೊಲೀಸ್ ಪ್ರಕರಣಗಳು ಹೀಗೆ ಅಂದಿನ ಸರ್ಕಾರ ಸಂಸ್ಥೆಯ ಅಧಿಕಾರಿಗಳಿಂದ ಎಲ್ಲವನ್ನು ಮಾಡಿಸಿತು. ಜತೆಗೆ ಪ್ರತಿಯೊಬ್ಬ ನೌಕರರಿಂದಲೂ ತಲಾ 5ಸಾವಿರ ರೂ.ಗಳಿಂದ 15 ಸಾವಿರ ರೂ.ಗಳ ವರೆಗೂ ಮಾಡದ ತಪ್ಪಿಗೆ ದಂಡದರೀತಿ ಹಣ ಸುಲಿಗೆ ಮಾಡಿತು. ಅದಕ್ಕೆ ಅಂದು ಅಧಿಕಾರಿಗಳು ಬಹು ಉತ್ಸಾಹದಿಂದಲೇ ಸಾಥ್ ನೀಡಿ ನೌಕರರನ್ನು ರಣಹದ್ದುಗಳಂತೆ ಕಿತ್ತು ತಿಂದು ತೇಗಿದರು ಎಂದರೂ ತಪ್ಪಾಗಲಾರದು.
ನೌಕರರು ಇಷ್ಟೆಲ್ಲ ಕಷ್ಟಗಳನ್ನು ಅನುಭವಿಸಿದ ಬಳಿಕ ತಡವಾಗಿ ಅಂದರೆ 2ವರ್ಷಗಳ ಬಳಿಕ ಶೇ.15 ರಷ್ಟು ವೇತನ ಹೆಚ್ಚಳ ಮಾಡಿತು, ಅಂದಿನ ಬಿಜೆಪಿ ಸರ್ಕಾರ. ಇನ್ನು ಇಷ್ಟೆಲ್ಲ ಹೋರಾಟದಿಂದ ನೌಕರರು ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿಹೋದರೂ ಕೂಡ ಅಧಿಕಾರಿಗಳು ಮಾತ್ರ ಗುಲಗಂಜಿಯಷ್ಟನ್ನೂ ಸಮಸ್ಯೆ ಎದುರಿಸಲೇ ಇಲ್ಲ.
ನೌಕರರು ತಾನು ದುಡಿದ ಸಂಬಳದಿಂದ ಸಾವಿರಾರು ರೂಪಾಯಿ ದಂಡವನ್ನು ಕಟ್ಟುತ್ತಿದ್ದರೆ ಈ ಅಧಿಕಾರಿಗಳು ಕೇಕೆ ಹಾಕಿಕೊಂಡು ಅದನ್ನು ವಸೂಲಿ ಮಾಡುತ್ತಿದ್ದರು. ಆದರೆ ಇವರು ಮಾತ್ರ ಒಂದು ನಯೇಪೈಸೆಯನ್ನು ಕೂಡ ದಂಡಕಟ್ಟಲಿಲ್ಲ ಹಾಗೂ ಆರ್ಥಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಕುಗ್ಗಲಿಲ್ಲ. ಜತೆಗೆ ವೇತನದ ಶೇ.15ರಷ್ಟು ಹೆಚ್ಚಾಗಿದ್ದನ್ನು ಎಂಜಾಯ್ ಮಾಡಿದರು.
ಆದರೆ, ಬೀದಿಗಿಳಿದು ಹೋರಾಡಿದ ತಮ್ಮ ಸಹೋದ್ಯೋಗಿಗಳನ್ನೇ ಅಥವಾ ಅಧೀನ ನೌಕರರನ್ನೇ ತುಳಿದು ಹಾಕಿದ್ದು ಮಾತ್ರ ಈ ಅಧಿಕಾರ ಎಂಬ ದರ್ಪದ ಮಂದಿ ಎಂಬುವುದನ್ನು ಮರೆಯಲಾಗುತ್ತಿಲ್ಲ. ಈಗಲೂ ನೋಡಿ ಈ ನೌಕರರು ನಮಗೂ ಅಧಿಕಾರಿಗಳಿಗೆ ಆದಂತೆಯೇ ಆಗಲಿ ಎಂದು ಯಾವುದೇ ಹೋರಾಟ ಮಾಡದೆ ತಮ್ಮ ಪಾಡಿಗೆ ತಾವು ಡ್ಯೂಟಿ ಮಾಡಿಕೊಂಡಿರುವುದಕ್ಕೆ ಇವರಿಗೂ ಈವರೆಗೂ ಸಿಗಬೇಕಿರುವ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಈವರೆಗೂ ಇವರಿಂದ ಮಾಡಿಸಿಕೊಳ್ಳುವುದಕ್ಕೆ ಆಗೇ ಇಲ್ಲ.
ಆದರೆ, ಉತ್ತರನ ಪೌರುಷ ಒಲೆಮುಂದೆ ಎಂಬಂತೆ ನೌಕರರ ಮುಂದೆ ತಮ್ಮ ದರ್ಪ ದೌರ್ಜನ್ಯವನ್ನು ಮಾತ್ರ ತೋರಿಸುವುದರಲ್ಲಿ ಈಗಲೂ ನಿಸ್ಸೀಮರು ಈ ಅಧಿಕಾರಿಗಳು ಎಂದರೆ ಅದು ತಪ್ಪಾಗುವುದಿಲ್ಲ. ಈ ಎಲ್ಲ ನೋವುಗಳನ್ನು ಸಹಿಸಿಕೊಂಡ ನೌಕರರು 2021ರ ಏಪ್ರಿಲ್ ಮುಷ್ಕರದಿಂದ ಸಮಸ್ತ ಸಾರಿಗೆ ಅಧಿಕಾರಿಗಳು/ನೌಕರರಿಗೂ ಹಲವು ಪ್ರಯೋಜನಗಳನ್ನು ಮಾಡಿಕೊಟ್ಟಿದ್ದಾರೆ. ಅವುಗಳ ಬಗ್ಗೆ ನೋಡುತ್ತಾ ಹೋದರೆ…
ಈ ಮೊದಲೇ ಹೇಳಿದಂತೆ ಆ ದಿನ ಒಂದು ಸಾರಿಗೆ ಸಂಸ್ಥೆಯಲ್ಲೇ ಮರೆಯಲಾರದ ದಿನ. 2021 ಏಪ್ರಿಲ್ 7 ಅಂದ್ರೆ ಎಲ್ಲರಿಗೂ ನೆನಪು ಆಗುವುದು 2021 ಇಡೀ ರಾಜ್ಯ ಸ್ತಬ್ದ ವಾದದಿನ. ಅದು ದೊಡ್ಡ ಇತಿಹಾಸ ಸೃಷ್ಟಿಸಿದ ದಿನ. ಸಾರಿಗೆ ನೌಕರರು ಸರ್ಕಾರಿ ನೌಕರರ ಸೌಲಭ್ಯಗಳಿಗಾಗಿ ಹೋರಾಟ ಮಾಡಿದ ದಿನ.
ಅಂದು ಸಾವಿರಾರು ನೌಕರರ ವರ್ಗಾವಣೆ ಮಾಡಿದ ಆ ದಿನ. ಆದರೆ ಆ ಯಾವೊಂದು ವರ್ಗಾವಣೆಗೆ ತಲೆ ಕೆಡಿಸಿಕೊಳ್ಳದ ನೌಕರರು 15 ದಿನ ಯಶಸ್ವಿ ಮುಷ್ಕರ ಮಾಡಲು ಬುನಾದಿಯಾಕಿದ್ದು ಆದಿನ. ಅಂದು ಅಧಿಕಾರಿಗಳು ಮಾಡಿದ ಸಾವಿರಾರು ವರ್ಗಾವಣೆ, ವಜಾ, ಅಮಾನತು ಹಾಗೂ ಪೊಲೀಸ್ ಪ್ರಕರಣ ಸೇರಿದಂತೆ ಇನ್ನಿತರ ಸಂಕಷ್ಟಗಳ ನಡುವೆಯೂ ಮುಷ್ಕರ ಯಶಸ್ವಿಯಾಗಬೇಕು ಎಂದು ಪಣತೊಟ್ಟ ಆ ದಿನ. ಆ ದಿನ ಅವಿಸ್ಮರಣೀಯ.
ಹಾಗೆಯೇ ಸಾರಿಗೆ ನೌಕರರ ಜೀವನ ಇರುವವರೆಗೂ ಮರೆಯಲಾರದ ಆ ದಿನ. ಆಡಳಿತ ವರ್ಗ ಇಷ್ಟೆಲ್ಲ ಮಾಡಿದರು ಕೂಡ ನೌಕರರು ಇಂದಿಗೂ ಅಂದರೆ ಸುಮಾರು 4 ವರ್ಷ ಕಳೆದರೂ ಕೂಡ ಹೋರಾಟ ಬಿಟ್ಟಿಲ್ಲದ, ಜತೆಗೆ ಸಾರಿಗೆ ಸಂಸ್ಥೆಯಲ್ಲೇ ಒಂದು ದೊಡ್ಡ ಇತಿಹಾಸ ಸೃಷ್ಟಿಸಿದ ಆ ದಿನ.
ಅಂದಿನ ಆ ಮುಷ್ಕರದ ಫಲವಾಗಿ ಇಂದು ಸಂಸ್ಥೆಯಲ್ಲಿ HRMS ಜಾರಿಯಾಗಿದೆ. ಜತೆಗೆ ಅಂತರ್ ನಿಗಮ ವರ್ಗಾವಣೆ ಪ್ರತಿವರ್ಷ ನಡೆಯುವಂತಾಗಿದೆ. ಇನ್ನು ತರಬೇತಿ ಅವಧಿ 2ವರ್ಷದಿಂದ 1 ವರ್ಷಕ್ಕೆ ಇಳಿದಿದೆ.
ಪ್ರಮುಖವಾಗಿ ಅಲ್ಲಿಇಲ್ಲಿ ಸ್ವಲ್ಪ ಸಮಸ್ಯೆ ಎದುರಾದರೂ ಕೂಡ ಕ್ಯಾಶ್ ಲೆಸ್ ಆರೋಗ್ಯ ಯೋಜನೆ ಜಾರಿಯಾಗಿದೆ. ಹೀಗೆ ಇನ್ನು ಹತ್ತು ಹಲವಾರು ಸೌಲಭ್ಯಗಳು ಇಂದು ಸಿಕ್ಕಿದ್ದು ಅಂದಿನ ಮುಷ್ಕರದ ಫಲವಾಗಿ ಎಂಬುವುದನ್ನು ಮರೆಯದಂತೆ ಮಾಡಿದ ಆ ದಿನ. ಅದರಂತೆ ಒಮ್ಮೆ ಭೂಮಿಗೆ ಹಾಕಿದ ಬೀಜ ಫಲ ಕೊಡದೆ ಇರುತ್ತದೆಯೇ ಎಂಬುವುದಕ್ಕೆ ಸಾಕ್ಷಿಯಾಗಿದೆ ಆ ದಿನ.
ಆ ದಿನ ಮುಷ್ಕರಕ್ಕೆ ಇಳಿದು ಯಶಸ್ವಿ ಮುಷ್ಕರಕ್ಕೆ ಕಾರಣರಾದ ಸಮಸ್ತ ಸಾರಿಗೆ ನೌಕರರಿಗೆ ಒಂದು ಸಲಾಂ. ಈಗ ಮತ್ತೆ ಇದು ಏಪ್ರಿಲ್, ಮತ್ತೆ ಅಂದಿನ ಏ.7- 21 ಏಪ್ರಿಲ್ ಮತ್ತೆ ಬರುವುದು ಬೇಡ. ಹೀಗಾಗಿ ಇದೇ 2025ರ ಏ.15ರಂದು ಸಿಎಂ ಕರೆದಿರುವ ಸಭೆ ಫಲಪ್ರದವಾಗಲಿ ಎಂದು ಬಯಸುತ್ತಿದ್ದೇವೆ.
ಜತೆಗೆ ಅಧಿಕಾರಿಗಳಿಗೊಂದು ಕಿವಿಮಾತು: ಇನ್ನಾದರೂ ನೀವು ನೌಕರರ ಹೋರಾಟ ನಮಗಾಗಿ ನಾವು ನೌಕರರಿಗಾಗಿ ಎಂಬುದನ್ನು ಅರಿತು ನಡೆದರೆ ಇಲ್ಲಿ ಸರ್ಕಾರದ ಮುಂದೆ ಇಡುವ ಬೇಡಿಕೆಗಳು ಈಡೇರುವುದಕ್ಕೆ ವಾರಗಟ್ಟಲೆಯೂ ಕಾಯಬೇಕಿಲ್ಲ. ಇದನ್ನು ಅಧಿಕಾರಿ ವರ್ಗ ಅರಿತರೆ ಲಂಚದಿಂದ ನಡೆಸುತ್ತಿರುವ ಜೀವನ ಸ್ವಾವಲಂಬಿಯಾಗಿ ಬದಲಾಗುವುದರಲ್ಲಿ ಅನುಮಾನವೇ ಇಲ್ಲ. ಇತರೆ ನಿಗಮ ಮಂಡಳಿಗಳ ಅಧಿಕಾರಿಗಳಂತೆ ನೀವು ಎಚ್ಚೆತ್ತುಕೊಳ್ಳಿ ಎಂಬುವುದೇ ನಮ್ಮ ಕಿವಿ ಮಾತು.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...