
- ₹5 ಲಕ್ಷಕ್ಕೂ ಮೇಲ್ಪಟ್ಟು ಆಸ್ಪತ್ರೆಗಳ ಬಿಲ್ ಪೇ ಮಾಡುವ ಪರಮಾಧಿಕಾರ ಇರುವುದು ಎಂಡಿಗೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯಕ್ಕಾಗಿ ಇದೇ 2025ರ ಜನವರಿ 6ರಂದು ಎಲ್ಲರು ಒಬ್ಬರಿಗಾಗಿ ಒಬ್ಬರು ಎಲ್ಲರಿಗಾಗಿ ಎಂಬ ಧ್ಯೆಯ ವಾಕ್ಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ಚಿಕಿತ್ಸಾ ಸೌಲಭ್ಯ ಯೋಜನೆಗೆ ಚಾಲನೆ ನೀಡಿದ್ದಾರೆ.
ಆದರೆ, ಚಿಕಿತ್ಸೆ ನೀಡಲು ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಕೆಲ ಆಸ್ಪತ್ರೆಗಳಿಗೆ ಸಮಯಕ್ಕೆ ಸರಿಯಾಗಿ ಹಣ ಮಂಜೂರು ಮಾಡದೆ ಇರುವುದರಿಂದ ಆಸ್ಪತ್ರೆಯ ಆಡಳಿತ ವರ್ಗ ಪ್ರಸ್ತುತ ಕೆಎಸ್‌ಆರ್‌ಟಿಸಿ ನೌಕರರಿಗೆ ಕ್ಯಾಶ್‌ಲೆಸ್ ಸೌಲಭ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ರೋಗಿಗಳು ಮರುಪಾವತಿ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು ಎಂದು ಬೋರ್ಡ್‌ಹಾಕಿ ನೌಕರರಿಗೆ ಉಚಿತ ಚಿಕಿತ್ಸೆ ಕೊಡಲು ನಿರಾಕರಿಸುತ್ತಿದ್ದಾರೆ.
ಇದನ್ನು ಗಮನಿಸಿದರೆ ನೌಕರರು ಹಾಗೂ ಅವರ ಕುಟುಂಬದವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಬೇಕು ಆ ಮೂಲಕ ಅವರ ಜೀವ ಕಾಪಾಡಬೇಕು ಎಂಬ ಸದುದ್ದೇಶದಿಂದ ಆರಂಭವಾಗಿರುವ ಯೋಜನೆ ಎಲ್ಲೋ ಕೆಲ ಅಧಿಕಾರಿಗಳು ಮಾಡುತ್ತಿರುವ ಎಡವಟ್ಟಿನಿಂದ ಆಸ್ಪತ್ರೆಯ ಆಡಳಿತ ವರ್ಗ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಂತಾಗುತ್ತಿದೆ.
ಇನ್ನು ಯಾವ ಅಧಿಕಾರಿಗೆ ಎಷ್ಟು ಹಣ ಮಂಜೂರು ಮಾಡುವ ಅಧಿಕಾರವಿದೆ ಎಂದು ನೋಡುವುದಾದರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ₹5 ಲಕ್ಷಗಳ ಮೇಲ್ಪಟ್ಟು ಮಂಜೂರು ಮಾಡುವ ಪರಮಾಧಿಕಾರವನ್ನು ಹೊಂದಿದ್ದಾರೆ.
ಅವರಂತೆಯೇ ಸಂಸ್ಥೆಯ ಸಿಬ್ಬಂದಿ ಮತ್ತು ಜಾಗೃತಾ ವಿಭಾಗದ ನಿರ್ದೇಶಕರು ₹1 ಲಕ್ಷದಿಂದ ₹5 ಲಕ್ಷಗಳವರೆಗೆ ಹಾಗೂ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ₹1 ಲಕ್ಷದವರೆಗೆ ಆಸ್ಪತ್ರೆಗಳಿಗೆ ಬಿಲ್ ಮೊತ್ತವನ್ನು ಮಂಜೂರು ಮಾಡುವ ಅಧಿಕಾರ ಹೊಂದಿದ್ದಾರೆ. ಹೀಗಿದ್ದರೂ ಸಹ ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಚಿಕಿತ್ಸೆ ಕೊಡುವುದು ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂಬುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.
ಇನ್ನು ಒಂದು ಮತ್ತೊಂದು ಎಂದು ಆಸ್ಪತ್ರೆಗಳಿಗೆ ಅಲೆದು ಅಲೆದು ಸುಸ್ತಾಗುತ್ತಿರುವ ನೌಕರರು ಹಾಗೂ ಅವರ ಕುಟುಂಬದವರು ಭಾರಿ ಅಸಮಾಧಾನಗೊಂಡಿದ್ದು ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು, ಇಲ್ಲದಿದ್ದರೆ ನಾವು ನಮ್ಮ ಕುಟುಂಬದವರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೆ KSRTC ಉಚಿತ ಆರೋಗ್ಯ ಸ್ಕೀಮ್ ಬರಿ ಎಲ್ಲ ಸುಳ್ಳು, ಯಾವ ಆಸ್ಪತ್ರೆಗಳಿಗೆ ಹೋದ್ರು ನಮಗೆ ಬಿಲ್ ಕೊಡ್ತಿಲ್ಲ ನೀವೆ ಹಣ ಕೊಟ್ಟು ಟ್ರೀಟ್ಮೆಂಟ್ ತೊಗೋಬೇಕು ಅಂಥ ಹೇಳ್ತಾರೆ ಬರಿ ಮೋಸ ನೌಕರರಿಗೆ ಬಹಳ ಮೋಸ ಆಗುತ್ತಿದೆ. ಅದಕ್ಕೆ ತಾಜಾ ನಿದರ್ಶನ ಎಂದರೆ ಹಾಸನದ ಜನಪ್ರಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ.
ಅದೇ ಹಾಸನದ ಡೆಂಟಲ್ ಕ್ಲಿನಿಕ್ ಒಂದಕ್ಕೆ ಹೋದ್ರೆ ಬರಿ ಫೀಸ್ ಫ್ರೀ, ಟ್ರೀಟ್ಮೆಂಟ್‌ಗೆ KSRTC ದುಡ್ಡು ಕೊಡ್ತಿಲ್ಲ ನೀವೆ ಪೇ ಮಾಡಬೇಕು ಅಂಥ ಹೇಳ್ತಾರೆ. ಈ ಅನ್ಯಾಯವನ್ನು ಕೇಳುವವರು ಯಾರು ಇಲ್ವಾ? ನಮ್ ದುಡ್ಡು ಕಟ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿಲ್ಲ, ಏನು ಪ್ರಯೋಜನ ಇದರ ಬಗ್ಗೆ ಗಂಭೀರವಾಗಿ ಕ್ರಮ ಜರುಗಿಸಿ ಎಂದು ಎಂಡಿ ಅವರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಯಾವ ಆಸ್ಪತ್ರೆಗೆ ಹೋದ್ರು ಸರಿಯಾದ ರೀತಿ ಟ್ರೀಟ್ಮೆಂಟ್ ಕೊಡುತ್ತಿಲ್ಲ ಈಗ ಜನಪ್ರಿಯ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ದೊರಕುವುದಿಲ್ಲ ಅಂತ ಹೇಳುತ್ತಾರೆ. ಮಂಗಳ ಆಸ್ಪತ್ರೆಗೆ ಹೋದರೆ ಮೇಲೆ ಕರೆದುಕೊಂಡು ಹೋಗಿ ಅಲ್ಲೇ ಕೂರಿಸಿ ಬಿಡುತ್ತಾರೆ ಗಂಟೆಗಟ್ಟಲೆ ಕೂತರು ಯಾವುದೇ ರೀತಿ ಟ್ರೀಟ್ಮೆಂಟ್ ದೊರಕುತ್ತಿಲ್ಲ ಎಂದು ಹಾಸನ ವಿಭಾಗದ ನೌಕರರು ಅಳಲು ತೋಡಿಕೊಂಡಿದ್ದಾರೆ.
ಇನ್ನು ನಗದು ರಹಿತ ಆರೋಗ್ಯ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಬಯಸಿದರೆ ಇದನ್ನು ನೋಡಿ: https://ksrtc.org/arogya/about_scheme.php