NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ

ನನ್ನ ತಂದೆ ಅಗಲಿ ಏ.28ಕ್ಕೆ ಮೂರು ತಿಂಗಳುಗಳಾದವು ಆದರೂ ನಮ್ಮ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು 38 ತಿಂಗಳ ವೇತನ ಹಿಂಬಾಕಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ ಎಂದು ಅನಂತಸುಬ್ಬರಾವ್ ಅವರ ಪುತ್ರಿ ಹಾಗೂ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ಫೆಡರೇಷನ್ ನೂತನ ಅಧ್ಯಕ್ಷರೂ ಆದ ಜ್ಯೋತಿ ಅನಂತಸುಬ್ಬರಾವ್   ಅಸಮಾಧಾನ ವ್ಯಕ್ತಪಡಿಸಿದ್ದಾರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನನ್ನ ತಂದೆ ಕಾಮ್ರೇಡ್ ಎಚ್.ವಿ. ಅನಂತಸುಬ್ಬರಾವ್ ನಮ್ಮನ್ನಗಲಿ ಇಂದಿಗೆ ಮೂರು ತಿಂಗಳುಗಳಾದವು. ಜನವರಿ 29ರಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಬೃಹತ್ ಹೋರಾಟದ ತಯಾರಿಯಲ್ಲಿದ್ದ ಅವರು ದಿಢೀರನೆ ಹೃದಯ ಸ್ತಂಭನಕ್ಕೆ ಒಳಗಾಗಿ ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ.

ಅವರನ್ನು ತೀವ್ರವಾಗಿ ಕೊರೆಯುತ್ತಿದ್ದ ನಮ್ಮ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು 38 ತಿಂಗಳ ವೇತನ ಹಿಂಬಾಕಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ ಎಂದು ಅನಂತಸುಬ್ಬರಾವ್ ಅವರ ಪುತ್ರಿ ಹಾಗೂ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ಫೆಡರೇಷನ್ ನೂತನ ಅಧ್ಯಕ್ಷರೂ ಆದ ಜ್ಯೋತಿ ಅನಂತಸುಬ್ಬರಾವ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಏ.29ರಂದು ಸಂಧಾನ ಮಾತುಕತೆಗೆ ಕೆಎಸ್‌ಆರ್‌ಟಿಸಿ ಆಡಳಿತ ವರ್ಗ ಸಚಿವರ ಅಧ್ಯಕ್ಷತೆಯಲ್ಲಿ ಜಂಟಿ ಕ್ರಿಯಾ ಸಮಿತಿಯನ್ನು ಕರೆದಿದೆ. ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ಫೆಡರೇಷನ್ ಅಧ್ಯಕ್ಷರಾಗಿದ್ದ ಮತ್ತು ತಮ್ಮ ಬದುಕಿನ ಪ್ರತಿ ಕ್ಷಣವೂ ಸಾರಿಗೆ ಸಂಸ್ಥೆಯನ್ನೇ ಉಸಿರಾಡುತ್ತಿದ್ದ ನನ್ನೊಲವಿನ ತಂದೆಯೂ ಆಗಿದ್ದ ಕಾಮ್ರೇಡ್ ಎಚ್.ವಿ. ಅನಂತಸುಬ್ಬರಾವ್ ಅವರನ್ನು ಯಾವ ಗಳಿಗೆಯೂ ನಾವೂ ಮರೆಯಲಾಗದು ಎಂದಿದ್ದಾರೆ.

ಯಾರು ಏನೇ ಹೇಳಲಿ, ಅವರು ಸಾರಿಗೆ ನೌಕರರ ಹೋರಾಟದ ಇತಿಹಾಸದಲ್ಲಿ ಮಾತ್ರವಲ್ಲ, ಸಂಸ್ಥೆಯ ಸುದೀರ್ಘ ಚರಿತ್ರೆಯ ಪುಟಗಳಲ್ಲೂ ದಂತಕತೆಯಾಗಿ ಅಚ್ಚಳಿಯದೆ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ನನಗೆ ಪ್ರತಿ ತಿಂಗಳ 28ರ ಸಂಜೆ ಒಂದು ಕರಾಳ ರಾತ್ರಿಯಾಗಿ ಭಾಸವಾಗುತ್ತದೆ. ನನ್ನ ತಂದೆಯ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆ, ನಿರ್ಮಲ ಮತ್ತು ನಿಷ್ಕಲ್ಮಶ ಮನಸ್ಸು, ಸೈದ್ಧಾಂತಿಕ ಬದ್ಧತೆ, ನುಡಿದಂತೆ ನಡೆಯುವ ವ್ಯಕ್ತಿತ್ವ, ನಿಷ್ಠುರತೆ, ಶಿಸ್ತಿನ ಹಾಗೂ ಎಲ್ಲರನ್ನೂ ಪ್ರೀತಿಸುವ ಮಾನವೀಯ ಗುಣಗಳು ನಮ್ಮನ್ನು ರೂಪಿಸಿವೆ.

ಕಾಮ್ರೇಡ್ ಅನಂತಸುಬ್ಬರಾವ್, ಅಣ್ಣಾ, ನಿನ್ನನ್ನು ತುಂಬಾ… ತುಂಬಾ… ಮಿಸ್ ಮಾಡಿಕೊಳ್ಳುತ್ತಿದ್ದೇನೆ… ಪ್ರತಿ ಕ್ಷಣವೂ… ನಿನ್ನ ಕಾಯಕವೇ ನನ್ನದೂ… ಅದನ್ನು ಶ್ರದ್ಧೆಯಿಂದ ಮುಂದುವರೆಸುತ್ತೇನೆ ಎಂದು ಜ್ಯೋತಿ ಅನಂತಸುಬ್ಬರಾವ್ ಸಾಮಾಜಿಕ ಜಾಲತಾಣದ ಮೂಲಕ ಭರವಸೆಯ ಸ್ಫೂರ್ತಿದಾಯಕ ಆಶಯ ವ್ಯಕ್ತಪಡಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ