NEWSನಮ್ಮಜಿಲ್ಲೆನಮ್ಮರಾಜ್ಯ

ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸಾರಿಗೆ ನೌಕರರಿಂದ ಕರಾಳ ಕಾರ್ಮಿಕ ದಿನಾಚರಣೆ- ಡ್ಯೂಟಿ ಮೇಲೆ ಮೌನ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ವಿಶ್ವದ ದುಡಿಯುವ ವರ್ಗದ ಹೋರಾಟಕ್ಕೆ ಮುನ್ನುಡಿ ಬರೆದ ವಿಶ್ವ ಕಾರ್ಮಿಕ ದಿನಾಚರಣೆಯು ಕರ್ನಾಟಕ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ನಾಲ್ಕೂ ನಿಗಮಗಳ ಸಮಸ್ತ ಸಾರಿಗೆ ನೌಕರರುಗಳಿಂದ ಸರ್ಕಾರದ ಧೋರಣೆಯನ್ನು ಖಂಡಿಸಿ ಕರಾಳ ಕಾರ್ಮಿಕ ದಿನಾಚರಣೆ ಆಚರಿಸುವ ಮೂಲಕ ಸರ್ಕಾರಕ್ಕೆ ನಮ್ಮ ಶ್ರಮದ ನೋವು ತಲುಪಿಸುತ್ತಿದ್ದೇವೆ.

ನಮ್ಮ ದುಡಿಮೆಯ ಬೆವರಿಗೆ ತಕ್ಕ ವೇತನ ನೀಡಿ. 650 ಕೋಟಿ ಟಿಕೆಟ್ ಕೊಟ್ಟಿದ್ದು ನಿರ್ವಾಹಕರು, ಬಸ್ಸುಗಳನ್ನು ಚಲಾಯಿಸಿದ್ದು ಚಾಲಕರು, ಬಸ್ಸುಗಳನ್ನು ಸುಸ್ಥಿತಿಯಲ್ಲಿಟ್ಟಿದ್ದು ತಾಂತ್ರಿಕ ಸಿಬ್ಬಂದಿ, ವಾಹನ ಸ್ವಚ್ಚವಾಗಿಟ್ಚಿದ್ದು ಸ್ವಚ್ಚತಗಾರರು, ವ್ಯವಸ್ಥಿತ ವಾಹನಗಳ ಕಾರ್ಯಾಚರಣೆ ಮಾಡಿದ್ದು ಸಂಚಾರ ಸಿಬ್ಬಂದಿ, ಶಿಸ್ತು ಬದ್ಧ ಆಚರಣೆಯ ಉಸ್ತುವಾರಿ ವಹಿಸಿದ್ದು ಅಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳ ಸಿಬ್ಬಂದಿಗಳು.

ಪ್ರಶಸ್ತಿಯ ಲಾಭ ಪಡೆದದ್ದು ಸರ್ಕಾರ, ಅದು ಸಾರಿಗೆ ನೌಕರರ ಹೊಟ್ಟೆಗೆ ತಣ್ಣೀರು ಬಟ್ಟೆಹಾಕಿದೆ. ಸರ್ಕಾರಕ್ಕೆ ಕೀರ್ತಿ ತಂದುಕೊಡುತ್ತಿರುವ ನಮ್ಮನ್ನು ಕಡೆಗಣಿಸಿ ನಮಗೆ ನ್ಯಾಯಯುತವಾಗಿ ಲೊಡಬೇಕಿರುವ ವೇತನ ಹೆಚ್ಚಳ ಮಾಡದೆ ತಾರತಮ್ಯಧೋರಣೆ ತಣಳೆದಿರುವ ಸರ್ಕಾರದ ನಡೆ ಖಂಡನೀಯ.

ಹೀಗಾಗಿ ಸಾರಿಗೆ ನೌಕರರ ಕರಾಳ ಕಾರ್ಮಿಕ ದಿನಾಚರಣೆಗೆ ಯಶಸ್ಸು ದೊರೆಯಲಿ ಎಂದು ಅಧಿಕಾರಿ ವರ್ಗ ಸೇರಿದಂತೆ ಸಮಸ್ತ 1.20ಲಕ್ಷ ನೌಕರರು ಇಂದು ಸಾರಿಗೆ ನೌಕರರ ಕರಾಳ ಕಾರ್ಮಿಕ ದಿನಾಚರಣೆ ಮಾಡುತ್ತಿದ್ದೇವೆ.

ಈಗಲೂ ನಾವು ಕಪ್ಪುಪಟ್ಟಿ ಕಟ್ಟಿಕೊಂಡು ಡ್ಯೂಟಿ ಮಾಡಿದರೆ ಎಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೋ ಎಂಬ ಕಳಕಳಿಯಿಂದ ಯಾವುದೇ ಕಪ್ಪುಪಟ್ಟಿ ಕಟ್ಟಿಕೊಳ್ಳದೆ ಮೌನವಾಗಿ ಈ ಸಾರಿಗೆ ನೌಕರರ ಕರಾಳ ಕಾರ್ಮಿಕ ದಿನಾಚರಣೆ ಮಾಡುತ್ತಿದ್ದೇವೆ. ಇನ್ನಾದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರುಸುವತ್ತ ಮನಸು ಮಾಡಲಿ ಎಂಬುವುದು ನಮ್ಮ ಆಶಯ. -ಸಮಸ್ತ ಸಾರಿಗೆ ನೌಕರರು.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ