NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ !

ಕರ್ನಾಟಕ ಸರ್ಕಾರವು ಸಾರಿಗೆ ನಿಗಮಗಳ ನೌಕರರ 26 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಪಾವತಿಗಾಗಿ ಮೊದಲ ಹಂತವಾಗಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದು ಸಾರಿಗೆಯ ನಾಲ್ಕೂ ನಿಗಮಗಳ 1.20 ಲಕ್ಷ ನೌಕರರಿಗೆ ಈ ನಿರ್ಧಾರದಿಂದ ಆರ್ಥಿಕ ನೆರವು ದೊರೆತಿದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ನೌಕರರಿಗೆ ಕರ್ನಾಟಕ ಸರ್ಕಾರವು 38 ತಿಂಗಳ ಹಿಂಬಾಕಿ ಬದಲು 26 ತಿಂಗಳ ಹಿಂಬಾಕಿ ನೀಡುವ ನಿರ್ಧಾರ ಮಾಡಿ ಇಂದು (ಏ.29) ಮೊದಲ ಹಂತವಾಗಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ನೌಕರರ ದೀರ್ಘಕಾಲದ ಬೇಡಿಕೆಯಾಗಿದ್ದ ವೇತನ ಪರಿಷ್ಕರಣೆಯ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ (Arrears) ಪಾವತಿಸಬೇಕಿತ್ತು. ಆದರೆ 12 ತಿಂಗಳ ಹಿಂಬಾಕಿ ಪಾವತಿಸಲು ಆಗುವುದಿಲ್ಲ ಎಂದು ಸದ್ಯ 26 ತಿಂಗಳ ಹಿಂಬಾಕಿ ಪಾವತಿಗೆ ನೌಕರರು ಹಾಗೂ ಸಂಘಟನೆಗಳ ವಿರೋಧದ ನಡುವೆಯೂ ಏಕಪಕ್ಷೀಯವಾಗಿ ನಿರ್ಧರಿಸಿದೆ.

ಆ ಭಾಗವಾಗಿ ಇಂದು 450 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಲಕ್ಷಾಂತರ ನೌಕರರಿಗೆ ಆರ್ಥಿಕ ನೆರವು ಸಿಕ್ಕಂತಾಗಿದೆ. ಆದರೆ, ನ್ಯಾಯಯುತವಾಗಿ ಸಿಗಬೇಕಿರುವ ಹಿಂಬಾಕಿಯಿಂದ ವಂಚಿತರಾಗುತ್ತಿದ್ದಾರೆ.

26 ತಿಂಗಳ ವೇತನ ಬಾಕಿ ಪಾವತಿಗೆ ಕ್ರಮ: 01.01.2020ರಿಂದ 28.02.2023 ರವರೆಗಿನ ಒಟ್ಟು 36 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಪಾವತಿಸಲು ನೌಕರರು ಸತತವಾಗಿ ಒತ್ತಾಯಿಸುತ್ತಿದ್ದರು. ಆದರೆ ಸರ್ಕಾರ 01.01.2021 ರಿಂದ 28.02.2023 ಒಟ್ಟು 26 ತಿಂಗಳ ಹಿಂಬಾಕಿ ಪಾವತಿಸಲು ಆದೇಶ ನೀಡಿದ್ದು, ಈ ಬಾಕಿ ಮೊತ್ತದ ಒಟ್ಟು ಬೇಡಿಕೆ 1271.92 ಕೋಟಿ ರೂಪಾಯಿಯಾಗಿದೆ. ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಮೊದಲ ಹಂತವಾಗಿ 450 ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನದಡಿ ಬಿಡುಗಡೆಗೊಳಿಸಿ ಆದೇಶಿಸಿದೆ.

ಯಾವ ನಿಗಮಕ್ಕೆ ಎಷ್ಟು ಅನುದಾನ? (ಕೋಟಿ ರೂ.ಗಳಲ್ಲಿ): ಸರ್ಕಾರದ ಆದೇಶದಂತೆ ಬಿಡುಗಡೆಯಾದ 450 ಕೋಟಿ ರೂ.ಗಳನ್ನು ನಾಲ್ಕೂ ನಿಗಮಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC): 143.85 ಕೋಟಿ ರೂ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC): 137.24 ಕೋಟಿ ರೂ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC): 87.00 ಕೋಟಿ ರೂ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC): 81.91 ಕೋಟಿ ರೂ.
ಒಟ್ಟು ಮೊತ್ತ: 450.00 ಕೋಟಿ ರೂ.

ಕಟ್ಟುನಿಟ್ಟಿನ ಷರತ್ತುಗಳು: ಅನುದಾನ ಬಿಡುಗಡೆ ಮಾಡುವ ವೇಳೆ ಸರ್ಕಾರವು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ.

ಬಿಡುಗಡೆ ಮಾಡಲಾದ ಈ ಮೊತ್ತವನ್ನು ಕೇವಲ ನೌಕರರ ವೇತನ ಬಾಕಿ ಪಾವತಿಸಲು ಮಾತ್ರ ಬಳಸತಕ್ಕದ್ದು.
ಯಾವುದೇ ವಿಳಂಬವಿಲ್ಲದೆ ತಕ್ಷಣವೇ ನೌಕರರ ಖಾತೆಗೆ ಈ ಹಣವನ್ನು ತಲುಪಿಸಬೇಕು.
ಅನುದಾನ ಬಳಕೆಯ ನಂತರ ಸಾರಿಗೆ ಸಂಸ್ಥೆಗಳು ಕಡ್ಡಾಯವಾಗಿ ಬಳಕೆಯ ಪ್ರಮಾಣ ಪತ್ರವನ್ನು (Utilization Certificate) ಸರ್ಕಾರಕ್ಕೆ ಸಲ್ಲಿಸಬೇಕು.

ನೌಕರರ ಸಂಘಟನೆಗಳ ಹರ್ಷ: ಕಳೆದ ಹಲವು ವರ್ಷಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಾರಿಗೆ ನೌಕರರಿಗೆ ಈ ನಿರ್ಧಾರವು ದೊಡ್ಡ ಸಮಾಧಾನ ತಂದಿರದಿದ್ದರೂ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಕ್ಷೀಣಿಸಿರುವ ಹಿನ್ನೆಲೆಯಲ್ಲಿ, ಸರ್ಕಾರವು ಮಧ್ಯಪ್ರವೇಶಿಸಿ ಈ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ಎಂದು ನೌಕರರ ಸಂಘಟನೆಗಳು ಅಭಿಪ್ರಾಯಪಟ್ಟಿವೆ. 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಹಂತ ಹಂತವಾಗಿ ಬಾಕಿ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.

ಈ ಆದೇಶಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರು ಸಹಿ ಮಾಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಿದ್ದಾರೆ. ಈ ನಿರ್ಧಾರದಿಂದಾಗಿ ಸಾರಿಗೆ ನೌಕರರಲ್ಲಿ ತುಸು ಸಂತಸ ಮನೆ ಮಾಡಿದೆ ಎಂದು ಹೇಳಬಹುದಾದರೂ ಮುಂದಿನ ದಿನಗಳಲ್ಲಿ ಉಳಿದ 12 ತಿಂಗಳ ಹಿಂಬಾಕಿಯನ್ನು ಪಡೆಯುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಸರ್ಕಾರ ಮುಂದಾಗಲಿದೆ ಎಂಬ ಆಶಾಭಾನೆ ಹೊಂದಿದ್ದಾರೆ.

ಇನ್ನು ಒಂದು ವೇಳೆ 12 ತಿಂಗಳ ಹಿಂಬಾಕಿ ಕೊಡದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧವಿರುವುದಾಗಿ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

Megha
the authorMegha

Leave a Reply

error: Content is protected !!
Latest news
ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!