ಚನ್ನಪಟ್ಟಣ: ಬೆಂಗಳೂರಿಗೆ ತೆರಳಲು ಬಸ್ ಸಮಸ್ಯೆ ಇದೆ ಎಂದು ಆರೋಪಿಸಿ ಕೆಎಸ್‌ಆರ್‌ಟಿಸಿ ಸಂಸ್ಥೆ ವಿರುದ್ಧ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬಸ್ ಬಿಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ಚನ್ನಪಟ್ಟ ಬಸ್ ನಿಲ್ದಾಣದಲ್ಲಿ ಜರುಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಸ್ ನಿಲ್ದಾಲ್ಧಾಣದಲ್ಲಿ ಪ್ರತಿ ಭಾನುವಾರ ಇದೇ ಸಮಸ್ಯೆ ಆಗುತ್ತಿದೆ. ನಾವು ಸಂಬಂಧಪಟ್ಟ ನಿಲ್ದಾಣದ ನಿಯಂತ್ರಣಾಧಿಕಾರಿಗಳನ್ನು ಕೇಳಿದರೆ ಅವರು ಸ್ಪಂದಿಸುತ್ತಿಲ್ಲ ಎಂದು ಕುಪಿತಗೊಂಡ ಶಿವಲಿಂಗೇಗೌಡ ಸೇರಿ ಇತರ ಪ್ರಯಾಣಿಕರು ನಿಲ್ದಾಣದಲ್ಲೇ ಪ್ರತಿಭಟನೆ ಮಾಡಿದರು.
ನಾವು 2ಗಂಟೆಗಿಂತಲು ಹೆಚ್ಚು ಸಮಯ ಬಸ್‌ಗಾಗಿ ಕಾಯುತ್ತಿದ್ದೇವೆ ಆದರೆ ಬಸ್‌ಗಳು ಬರುತ್ತಿಲ್ಲ. ಇನ್ನು ಮೈಸೂರಿನಿಂದ ಬರುತ್ತಿರುವ ಬಸ್‌ಗಳು ತುಂಬಿದ್ದು, ಕಾಲಿಡುವುದಕ್ಕೂ ಜಾಗವಿಲ್ಲ. ಹೀಗಾಗಿ ಚನ್ನಪಟ್ಟಣದಿಂದ ಬಸ್ ವ್ಯವಸ್ಥೆ ಮಾಡಿಸಿ ಎಂದು ಕೇಳಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಇನ್ನು ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ನಿವಾರಿಸಿದರು ಎಂದು ಸಾರ್ವಜನಿಕರು ತಿಳಿಸಿದ್ದು, ಮತ್ತೆ ಮುಂದಿನ ಭಾನುವಾರ ಇದೇ ರೀತಿ ಆದರೆ, ನಮ್ಮ ಪ್ರತಿಭಟನೆ ಬೇರೆ ರೀತಿಯೇ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.