ರಾಮನಗರ: ಮತದಾರರಿಗೆ ಹಂಚಲು ತಂದಿದ್ದ ಊಟದ (ಡಿನ್ನರ್) ಸೆಟ್ಗಳನ್ನು ರಾಮನಗರ ತಾಲೂಕಿನ ಚಿಕ್ಕ ಸೂಲಿಕೆರೆ ಗ್ರಾಮದಲ್ಲಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಸತೀಶ್ ಎಂಬುವರ ಮನೆಯಲ್ಲಿ ಎಂಬತ್ತಕ್ಕೂ ಹೆಚ್ಚು ಡಿನ್ನರ್ ಸೆಟ್ಗಳನ್ನು ಇಡಲಾಗಿತ್ತು. ಆ ಡಿನ್ನರ್ ಸೆಟ್ಗಳನ್ನು ಚಿಕ್ಕ ಸೂಲಿಕೆರೆ ಗ್ರಾಮದ ಮತದಾರರಿಗೆ ಹಂಚಲು ತಂದಿಡಲಾಗಿತ್ತು ಎಂದು ಹೇಳಲಾಗಿದೆ.
ವಿಷಯ ತಿಳಿದ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಸೇರಿದ್ದು ಎನ್ನಲಾದ ಆ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.