NEWSಬೆಂಗಳೂರುರಾಜಕೀಯ

ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಈಶ್ವರಪ್ಪ ವಿರುದ್ಧ ಲಕ್ಷ್ಮಣ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ ಕಾರಿದ್ದಾರೆ.

ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಕರ್ನಾಟಕದಲ್ಲಿ ಚುನಾವಣೆ ನೀತಿ ಸಂಹಿತೆ ಮಾ.29 ರಂದು ಜಾರಿಗೆ ಬಂದಿದೆ‌. ಆದರೆ, ಅಂದು ಸಿದ್ದರಾಮಯ್ಯ ಅಂದು ಮಧ್ಯಾಹ್ನ 1.10ಕ್ಕೆ ವಾಲಗದವರಿಗೆ 1ಸಾವಿರ ರೂ. ಸಂಭಾವನೆ ನೀಡಿದ್ದಾರೆ. ಕಾರಣ ಬಿಳುಗಲಿ ಗ್ರಾಮದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮವಿತ್ತು.

ಆದರೆ, 1 ಸಾವಿರ ರೂ. ಸಂಭಾವನೆ ನೀಡಿರುವುದಕ್ಕೆ ಅವರ ಮೇಲೆ ಎಫ್‌ಐಆರ್ ಆಗಿದೆ. ವಾಲಗದವರು ಆ ಕ್ಷೇತ್ರದ ಮತದಾರರಲ್ಲ. ಅ ಕಾರ್ಯಕ್ರಮದಲ್ಲಿ ಬಿಜೆಪಿ ವೈಪಲ್ಯಗಳ ಬಗ್ಗೆ ಮಾತನಾಡಿದ್ದಾರೆ. ಈಶ್ವರಪ್ಪ ಗುತ್ತಿಗೆದಾರರ ಮೂಲಕ ಹಣವನ್ನು ಪಡೆದರು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಗುತ್ತಿಗೆದಾರನ ಮೂಲಕ 40% ಕಮೀಷನ್ ಪಡೆದ ಆರೋಪವಿದೆ. ಅಲ್ಲದೆ ಈಶ್ವರಪ್ಪ ದಡ್ಡ ಎಂದಿದ್ದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಹೇಳಿದರು.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಗ್ಗೆ ಅಕ್ಷೇಪ ಇಲ್ಲ. ಒತ್ತಡ ಇದೆ. ಎಫ್‌ಐಆರ್ ಹಾಕಿದ್ದಾರೆ ಸ್ವಾಗತಿಸುತ್ತೇವೆ. 24ಗಂಟೆಯ ಒಳಗೆ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗ ಅದರ ಕೆಲಸ ಮಾಡುತ್ತಿದೆ. ಆಯೋಗ 24 ಗಂಟೆ ಒಳಗೆ ಕ್ರಮ ತೆಗೆದುಕೊಂಡಿದೆ. ಆದರೆ, ನಾವು ದೂರು ಕೊಟ್ಟರೆ ಕ್ರಮವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇರೆ ದೇಶದ ವಂಶ ಕಾಂಗ್ರೆಸ್, ಭಾರತೀಯರ ವಂಶ ಉದ್ದಾರವಾಗಬೇಕಾದರೆ ಬಿಜೆಪಿ ಮತ ನೀಡಿ ಎಂಬ ಶ್ರುತಿ ಹೇಳಿಕೆ ಕುರಿತು ಮಾತನಾಡಿದ ಎಂ.ಲಕ್ಷ್ಮಣ್, ಸ್ಮೃತಿ ಇರಾನಿ ವಂಶಸ್ಥರೇ ಸ್ಪಷ್ಟಪಡಿಸಿ, ಈ ಬಗ್ಗೆ ಚುನಾವಣೆ ಆಯೋಗ ನೋಟಿಸ್ ನೀಡಿಲ್ಲ ಉತ್ತರ ಕೊಡಬೇಕು. ನಾವು ಇವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಎಫ್‌ಐಆರ್ ಮಾಡಬೇಕು. ಈ ಬಗ್ಗೆ ಕೇಸ್ ದಾಖಲು ಮಾಡದಿರುವುದು, ಇದು ರಾಜ್ಯದ, ದೇಶದ ದುರಂತ ಎಂದು ಕಿಡಿಕಾರಿದರು.

ಹೊಸ ಯೋಜನೆ ಮಾಡಿದ್ದಾರೆ, 80 ವರ್ಷ ಮೇಲ್ಪಟ್ಟವರು ಕುಂತಲ್ಲೆ ಮತದಾನ ಮಾಡಬಹುದು.ಅವರ ಮನೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇದು ಒಂದು ತರಹ ಮಾಲ್ ಪ್ರಾಕ್ಟೀಸ್ ಇದಂತೆ. ಮತದಾರರು ಬುಕ್ ಮಾಡುವ ಕೆಲಸವನ್ನು ಮಾಡುತ್ತಿದ್ದೀರಿ. ಇದನ್ನು ರದ್ದುಪಡಿಸಿ ಎಂದು ಆಗ್ರಹಿಸಿದರು.

ಸೆಲೆಬ್ರಿಟಿಗಳನ್ನು ಕರೆದುಕೊಂಡು ಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ಬಿಗ್ ಬಾಸ್, ಕಿರುತೆರೆ, ಜಾಹೀರಾತು, ಚಿತ್ರವನ್ನು ಚುನಾವಣಾ ಮುಗಿಯವರೆಗೂ ಬ್ಯಾನ್ ಮಾಡಬೇಕು ಎಂದು ಎಂ.ಲಕ್ಷ್ಮಣ್ ಒತ್ತಾಯಿಸಿದರು.

2023ರಂದು ಮಹಾವೀರ, ಅಕ್ಕಮಹಾದೇವಿ, ಬಸವಣ್ಣ, ಭಗಿರಥ ಶಂಕರಾ ಚಾರ್ಯ, ಹೇಮರೆಡ್ಡಿ ಮಲ್ಲಮ್ಮ ಅಚರಣೆ ಮಾಡಬಹುದು ಎಂದು ಆದೇಶ ಮಾಡಿದ್ದಾರೆ. ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ನಿಷೇಧಿಸಿದ್ದೀರಾ, ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ