NEWSನಮ್ಮರಾಜ್ಯಬೆಂಗಳೂರು

ಜೈಲಿನಲ್ಲಿರುವ ಚಾಲಕನ ಕುಟುಂಬಕ್ಕೆ ಆಸರೆಯಾದ ಕೆಎಸ್‌ಆರ್‌ಟಿಸಿ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘ

ವಿಜಯಪಥ ಸಮಗ್ರ ಸುದ್ದಿ

ಎಚ್‌.ಡಿ.ಕೋಟೆ: ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋಗೆ ಸೇರಿದ ಬಸ್‌ ಮತ್ತು ಕಾರಿನ ನಡುವೆ 2010ರಲ್ಲಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ ಕಾರಿನಲ್ಲಿದ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಡಿಪೋ ಚಾಲಕ ಈರಣ್ಣ ಭದ್ರಗೊಂಡ ಅವರಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂ.ದಂಡ ವಿಧಿಸಿ ಕೋರ್ಟ್‌ ಆದೇಶಿಸಿತ್ತು. ಅದರಂತೆ ಈಗ ಚಾಲಕ ಜೈಲಿನಲ್ಲಿದ್ದಾರೆ. ಹೀಗಾಗಿ ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡುವ ಮೂಲಕ ಕುಟುಂಬಕ್ಕೆ ಆಸರೆಯಾಗಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮತ್ತು ಕುಟುಂಬ ಕ್ಷೇಮಾಭಿವೃದ್ಧಿ ಸಂಘ.

ಇಂದು ಎಚ್‌.ಡಿ.ಕೋಟೆಯಲ್ಲಿರುವ ಚಾಲಕ ಈರಣ್ಣ ಭದ್ರಗೊಂಡ ಅವರ ಪತ್ನಿ ಮಕ್ಕಳನ್ನು ಸಂಘದ ಸಂಸ್ಥಾಪಕರಾದ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಎಚ್‌.ಡಿ.ಕೋಟೆ ಡಿಪೋ ನೌಕರರು ಭೇಟಿ ಮಾಡಿ ಅವರಿಗೆ ಆರ್ಥಿಕ ನೆರವನ್ನು ನೀಡಿದ್ದಾರೆ.

ಇದರ ಜತೆಗೆ ಜನವರಿಯಿಂದ ಇಲ್ಲಿಯವರೆಗೆ ಮನೆ ಬಾಡಿಗೆಯನ್ನು ಕಟ್ಟುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಮನೆಗೆ ಬೇಕಾದ ಅಡುಗೆ ಸಾಮಗ್ರಿ, ನಿತ್ಯ ಬಳಕೆಗೆ ಬೇಕಾದ ವಸ್ತುಗಳನ್ನು ನೀಡಿದ್ದು, ಅದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಬೇಕಾದ ಆರ್ಥಿಕ ನೆರವು ಮತ್ತು ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೂ ಆರ್ಥಿಕ ನೆರವು ನೀಡಿದ್ದಾರೆ.

ಇದಿಷ್ಟೇ ಅಲ್ಲದೆ ಚಾಲಕ ಈರಣ್ಣ ಭದ್ರಗೊಂಡ ಅವರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೆಳ ನ್ಯಾಯಾಲಯ ಸೇರಿದಂತೆ ಹೈ ಕೋರ್ಟ್‌ನಿಂದಲೂ ಪಡೆದುಕೊಂಡಿದ್ದು, ಈ ವಾರದೊಳಗೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಕ್ಕೂ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಈಗಗಾಲೇ ಚಾಲಕ ಈರಣ್ಣ ಭದ್ರಗೊಂಡ ಅವರು ಜೈಲು ಸೇರಿ 4 ತಿಂಗಳು ಕಳೆಯುತ್ತಿದ್ದು, ಇನ್ನು ಉಳಿದ ಎರಡು ತಿಂಗಳ ಒಳಗಾಗಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‌ನೀಂದ ತಡೆಯಾಜ್ಞೆ ತರಬೇಕು. ಒಂದು ವೇಳೆ ತಡೆಯಾಜ್ಞೆ ತೆಗೆದುಕೊಂಡು ಬರದಿದ್ದರೆ ಅವರು ಶಿಕ್ಷೆ ಅನುಭವಿಸಿಕೊಂಡು ಹೊರ ಬಂದರೆ ಅವರ ಕೆಲಸ ಹೋಗುವುದು ನಿಶ್ಚಿತ. ಹೀಗಾಗಿ ನಾವು ತಡೆಯಾಜ್ಞೆ ತರುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತಿದ್ದೇವೆ ಎಂದು ವಕೀಲ ಎಚ್‌.ಬಿ. ಶಿವರಾಜು ತಿಳಿಸಿದ್ದಾರೆ.

ಈ ವೇಳೆ ಎಚ್‌.ಡಿ.ಕೋಟೆ ಘಟಕ ಪ್ರೇಮ್‌ಕುಮಾರ್‌, ಗೋವಿಂದರಾಜು, ಸತೀಶ್‌ ಕುಮಾರ್‌ ಇತರರು ಇದ್ದರು.

ಘಟನೆ ವಿವರ: ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋಗೆ ಸೇರಿದ ಬಸ್‌ ಮತ್ತು ಕಾರಿನ ನಡುವೆ 2010ರಲ್ಲಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ ಕಾರಿನಲ್ಲಿದ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಡಿಪೋ ಚಾಲಕ ಈರಣ್ಣ ಭದ್ರಗೊಂಡ ಅವರಿಗೆ ಒಂದು ಸಾವಿರ ರೂ.ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆಯಾಗಿದೆ.

ಈ ನಡುವೆ ಅಪಘಾತ ಬಳಿಕ ಚಾಲಕನನ್ನು ಮಡಿಕೇರಿ ಡಿಪೋನಿಂದ ಎಚ್‌.ಡಿ.ಕೋಟೆ ಡಿಪೋಗೆ ವರ್ಗಾವಣೆ ಮಾಡಿದ್ದು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಚಾಲಕನ ವಿರುದ್ಧ ತೀರ್ಪು ಬಂದಿದ್ದು, ಅದು ಕೂಡ ತಡವಾಗಿ ಚಾಲಕನಿಗೆ ಗೊತ್ತಾಗಿದೆ.

ಆ ಬಳಿಕ ಚಾಲಕ ಜಿಲ್ಲಾ ನ್ಯಾಯಾಲಯದ ಮೊರೆ ಹೋಗುತ್ತಾರೆ, ಜಿಲ್ಲಾ ನ್ಯಾಯಾಲಯದಲ್ಲೂ ಚಾಲಕನ ವಿರುದ್ಧವೆ ತೀರ್ಪು ಬರುತ್ತದೆ ಮತ್ತೆ ಅದನ್ನು ಪ್ರಶ್ನಿಸಿ ಕರ್ನಾಟಕ ಹೈ ಕೋರ್ಟ್‌ ಮೊರೆ ಹೋಗುತ್ತಾರೆ, ಹೈ ಕೋರ್ಟ್‌ನಲ್ಲೂ ಕೂಡ ಚಾಲಕನ ವಿರುದ್ಧವೇ ತೀರ್ಪು ಬಂದಿದ್ದು, ಆ ಚಾಲಕ ಕಳೆದ ಮೂರು ತಿಂಗಳಿನಿಂದ ಮಡಿಕೆರಿ ಜಿಲ್ಲಾ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

4ನೇ ತರಗತಿಯಲ್ಲಿ ಕಲಿಯುತ್ತಿರುವ ಪುಟ್ಟ ಮಗಳಿದ್ದು, ಈಗ ಚಾಲಕನ ಪತ್ನಿ ಮತ್ತು ಆತನ ಇಬ್ಬರು ಹೆಣ್ಣು ಮಕ್ಕಳು ಜೀವನ ಸಾಗಿಸುವುದಕ್ಕೂ ತುಂಬ ಕಷ್ಟಪಡುತ್ತಿದ್ದಾರೆ. ಇವರ ಕಷ್ಟವನ್ನು ಕಂಡ ಎಚ್‌.ಡಿ.ಕೋಟೆ ಘಟಕದ ವ್ಯವಸ್ಥಾಪಕರಾದ ತ್ಯಾಗರಾಜು ಅವರು ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜ್‌ ಅವರನ್ನು ಭೇಟಿ ಮಾಡಿ ಅವರು ಸಹಾಯ ಮಾಡುತ್ತಾರೆ ಎಂದು ಚಾಲಕನ ಪತ್ನಿಗೆ ಸಲಹೆ ನೀಡಿದ್ದರು.

ಅದರಂತೆ ವಕೀಲ ಶಿವರಾಜು ಅವರನ್ನು ಭೇಟಿ ಮಾಡಿದ ಕುಟುಂಬ ಅವರ ಬಳಿ ಎಲ್ಲವನ್ನು ವಿವರಿಸಿದ್ದು, ಸದ್ಯ ಚಾಲಕನ ಕುಟುಂಬಕ್ಕೆ ನೆರವು ನೀಡಿರುವ ವಕೀಲ ಶಿವರಾಜು ಮತ್ತು ಸಂಘ, ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ಸಂಬಂಧ ಅರ್ಜಿಸಲ್ಲಿಸಲು ಮುಂದಾಗಿದೆ.

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ