ಬೆಂಗಳೂರು: ಮಚ್ಚು ಹಿಡಿದು ಮಾಡಿದ ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಷರತ್ತುಗಳನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇರೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರ ಪೊಲೀಸರು ಮತ್ತೆ ರಜತ್ನನ್ನು ಬಂಧಿಸಿದ್ದು, ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ರಜತ್ಗೆ ನೋಟಿಸ್ ನೀಡಿದ್ದರು. ಜತೆಗೆ ರೀಲ್ಸ್ಗ ಬಳಸಿದ ಮಚ್ಚು ಪತ್ತೆಯಾಗಿಲ್ಲ. ಆ ಬಳಿಕ ಎರಡು ಬಾರಿ ನೋಟಿಸ್ ನೀಡಲಾಗಿದೆ. ಆದರೆ, ಪೊಲೀಸರ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾಣ ವ್ಯಕ್ತಪಡಿಸಿರುವ ನ್ಯಾಯಾಲಯವು NBW ಜಾರಿ ಮಾಡಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ರಜತ್ನನ್ನು ಬಂಧಿಸಲಾಗಿದೆ. ಇನ್ನು ರಜತ್ ಬಂಧನದ ನಂತರ, ಪೊಲೀಸರು ವಿನಯ್ ಗೌಡ ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಆ ನಂತರ, ಪೊಲೀಸರು ಇಬ್ಬರನ್ನೂ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಬಂಧನ ಭೀತಿ ಶುರುವಾಗುತ್ತಿದ್ದಂತೆ ವಿನಯ್ ಗೌಡ ಪ್ರತಿಕ್ರಿಯಿಸಿದ್ದು, ನಾನು ಸಿನಿಮಾ ಚಿತ್ರೀಕರಣದಲ್ಲಿದ್ದೇನೆ, ನಿನ್ನೆ ಪೊಲೀಸ್ ಠಾಣೆಗೆ ಹೋಗಿದ್ದೆ, ವಾರಂಟ್ ಜಾರಿಯಾಗಿದೆಯೋ ಇಲ್ಲವೋ ನನಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಸದ್ಯಕ್ಕೆ ಮನೆಯಲ್ಲಿಲ್ಲ, ನನಗೆ ಯಾವುದೇ ಕರೆ ಬಂದಿಲ್ಲ ಎಂದು ಹೇಳಿದ್ದಾರೆ.
Related

You Might Also Like
KSRTC ನೌಕರರಿಗೆ ವೇತನ ಆಯೋಗದಂತೆ ಸಂಬಳ ಹೆಚ್ಚಳಕ್ಕೆ ಕ್ರಮವಹಿಸಿ: ನೂತನ ಎಂಡಿಗೆ APSSWA ಸಂಘ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ನೌಕರರಿಗೆ ಬಿಡಿಎ ಹಾಗೂ ಡಿಎ ಕೊಡಲು ಆದೇಶಿಸಿದಕ್ಕೆ ಸಂಸ್ಥೆಯ ಲೆಕ್ಕಪತ್ರ...
NWKRTC-ಬ್ರೇಕ್ ಹಿಡಿಯದ ಬಸ್ಕೊಟ್ಟು ತಪ್ಪುಮಾಡಿದ ನಾಲಾಯಕ್ ಡಿಸಿ, ಡಿಎಂಇ: ತಪ್ಪಿನಿಂದ ಪಾರಾಗಲು ಹಾರಹಾಕಿ ಚಾಲಕರ ಅವಮಾನಿಸಿ ದರ್ಪ ಮೆರೆದ ದುರಹಂಕಾರಿಗಳು
ಅಧಿಕಾರ ಮದದಲ್ಲಿ ತೇಲುತ್ತಿರುವ ಅಧಿಕಾರಿಗಳ ಅಮಾನತಿಗೆ ಆಗ್ರಹ ಅಮಾನತು ಮಾಡದಿದ್ದರೆ ಕೇಂದ್ರ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಎಚ್ಚರಿಕೆ ಕೊಟ್ಟ ಕೂಟ ಧಾರವಾಡ: ಬ್ರೇಕ್ ಹಿಡಿಯದ ಬಸ್ಗಳನ್ನು...
KSRTC ನೌಕರರ ವೇತನ ಹೆಚ್ಚಳ ಸಂಬಂಧದ ಪ್ರಕರಣ: ಜು.16ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ನಂದಿ ಬೆಟ್ಟದಲ್ಲಿ 14ನೇ ಸಚಿವ ಸಂಪುಟ ಸಭೆ: ಇನ್ನು ಮುಂದೆ ಬೆಂಗಳೂರು ಉತ್ತರ ಜಿಲ್ಲೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ
ಎತ್ತಿನಹೊಳೆ ಯೋಜನೆಗೆ ಒಟ್ಟು 23,251 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿದ್ದು, ಇಲ್ಲಿಯವರೆಗೂ 17,147 ಕೋಟಿ ರೂ. ಖರ್ಚಾಗಿದೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ...
KSRTC ಬಸ್ ಪಲ್ಟಿ: ಯುವತಿಗೆ ಕೈ ಮುರಿತ- ಒಬ್ಬರ ತಲೆಗೆ ಗಂಭೀರ ಪೆಟ್ಟು ಸೇರಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದರೆ, 20ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ...
ಕರ್ನಾಟಕ ವಿಕಾಸ ರಂಗದ ಕೊಡಗು ಜಿಲ್ಲಾಧ್ಯಕ್ಷರಾಗಿ KSRTC ನಿವೃತ್ತ ನೌಕರ, ಸಾಹಿತಿ ವೈಲೇಶ್ ನೇಮಕ
ಕೊಡಗು: ಕರ್ನಾಟಕ "ವಿಕಾಸ ರಂಗ"ವು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ, ನೆಲ-ಜಲದ ರಕ್ಷಣೆಗಾಗಿ ಶ್ರಮಿಸುವ ಧ್ಯೇಯೋದ್ಧೇಶಗಳೊಂದಿಗೆ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೊಡಗು...
ನಂದಿಗಿರಿಯ ಯೋಗ – ಭೋಗ ನಂದೀಶ್ವರರ ಸನ್ನಿಧಿಯಲಿ ಸಚಿವ ಸಂಪುಟ ಸಭೆ
ನಂದಿ ಗಿರಿಯಲ್ಲಿ ನಡೆಯುತಿರುವ ವೈಭೋಗವ ಕಂಡ ಬೆಳಗಿನ ಚುಮು ಚುಮು ಚಳಿಯಿಂದ ಮೈಮುದುರಿ ಮಲಗಿದ್ದ ಸೂರ್ಯದೇವ ತನ್ನ ಕಿರಣಗಳನು ನಿಧಾನವಾಗಿ ಪಸರಿಸಲು ಪ್ರಯತ್ನಿಸಿದರೂ ಬೆಟ್ಟಕ್ಕೆ ಹೊದಿಕೆಯಾಗಿದ್ದ ಮಂಜು...
BMTC ನೌಕರರಿಗೆ ಸಾರಿಗೆ ಸಚಿವರಿಂದ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಯೋಗದೊಂದಿಗೆ ಜೂನ್-2025ರ ಮಾಹೆಯ ಸಂಸ್ಥೆಯ 100ಕ್ಕೂ ಹೆಚ್ಚು ಅರ್ಹ ನೌಕರರಿಗೆ ಪ್ರಯಾಸ್ ಯೋಜನೆಯಡಿ...
KKRTC ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ತಾತ್ಕಾಲಿಕ ನೇಮಕ
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (CPM)...