NEWSಬೆಂಗಳೂರು

ಬೆಂಗಳೂರು: GBA ಉತ್ತರ ನಗರ ಪಾಲಿಕೆ -87 ಟನ್ ತ್ಯಾಜ್ಯ ತೆರವು: ಆಯುಕ್ತ P.S.ಕುಮಾರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಗರವನ್ನು ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವ ಉದ್ದೇಶದಿಂದ ಹಾಗೂ ನಾಗರಿಕರಲ್ಲಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರ ಪಾಲಿಕೆಯ 7 ವಿಭಾಗಗಳಲ್ಲಿ 01.03.2026ರಿಂದ ಒಂದು ವಾರದ ಕಾಲ “ಸುಂದರ ನಗರ ಪಾಲಿಕೆಗಾಗಿ ಸಾಮೂಹಿಕ ಮಹಾ ಸ್ವಚ್ಛತಾ ಅಭಿಯಾನ”ವನ್ನು ಏರ್ಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮೂರನೇ ದಿನವಾದ ಇಂದು, 03.03.2026ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಟ್ಟು 1263 ಮಂದಿ (RWAs, ಸಾರ್ವಜನಿಕರು ಹಾಗೂ ಸ್ವಯಂ ಸೇವಕರ) ಸಹಯೋಗದೊಂದಿಗೆ 67 GVP ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮಗಳ ಮೂಲಕ ಒಟ್ಟು 87 ಟನ್ ತ್ಯಾಜ್ಯ ತೆರವು ಮಾಡಲಾಯಿತು ಎಂದು ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್  ತಿಳಿಸಿದ್ದಾರೆ.

ನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಈ ಅಭಿಯಾನದಡಿ 67 GVP ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಸ್ವಚ್ಛತಾ- ಕಾರ್ಯ ನಿರ್ವಹಿಸಲಾಯಿತು. ತ್ಯಾಜ್ಯ, ಸಿಲ್ಟ್, ಡೆಬ್ರಿಸ್, ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಯಿತು ಎಂದು ಹೇಳಿದರು.

ಇನ್ನು ಬ್ಯಾಟರಾಯನಪುರ ವಿಭಾಗ-07 ವಾರ್ಡ್‌- 9 (GVP) ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮ- 220 ಮಂದಿ- 6 ಟನ್ ತ್ಯಾಜ್ಯ, ದಾಸರಹಳ್ಳಿ ವಿಭಾಗದಲ್ಲಿ 12 ವಾರ್ಡ್‌- 17 GVP ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮ -15 ಟನ್‌ ಹಾಗೂ ಹೆಬ್ಬಾಳ ವಿಭಾಗ- 8 ವಾರ್ಡ್‌- 7 GVP ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮ -375 ಮಂದಿ 9.5 ಟನ್ ತ್ಯಾಜ್ಯ ತೆರವು ಮಾಡಲಾಗಿದೆ.

ಪುಲಿಕೇಶಿನಗರ ವಿಭಾಗ- 7 ವಾರ್ಡ್‌- 7 (GVP) ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮ- 150 ಮಂದಿ- 9 ಟನ್ ತ್ಯಾಜ್ಯ ಹಾಗೂ ಆರ್.ಆರ್. ನಗರ ವಿಭಾಗ- 3 ವಾರ್ಡ್- 4(GVP) ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮ 60 ಮಂದಿ- 1.5 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ.

ಇನ್ನು ಯಲಹಂಕ ವಿಭಾಗ- 4 ವಾರ್ಡ್‌- 4 (GVP) ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮ- 108 ಮಂದಿ- 1 ಟನ್ ತ್ಯಾಜ್ಯ ಮತ್ತು ಸರ್ವಜ್ಞನಗರ ವಿಭಾಗ- 8 ವಾರ್ಡ್‌- 18 (GVP) ನಿರ್ಮೂಲನೆ / ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಕಾರ್ಯಕ್ರಮ- 270 ಮಂದಿ- 45 ಟನ್ ತ್ಯಾಜ್ಯ ತೆರವು ಮಾಡಲಾಯಿತು ಎಂದು ತಿಳಿಸಿದರು.

ಈ ಮಹಾ ಸ್ವಚ್ಛತಾ ಅಭಿಯಾನದಲ್ಲಿ  ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್ ಮತ್ತು ಪಲ್ಲವಿ ಅವರ ಮಾರ್ಗದರ್ಶನದಲ್ಲಿ DGM ರಶ್ಮಿ ಹಾಗೂ ಎಲ್ಲ ವಿಭಾಗದ AGM ಗಳು, ಆರೋಗ್ಯ ಪರಿವೀಕ್ಷಕರು, ಮಾರ್ಷಲ್ ಗಳು, ಮೇಲ್ವಿಚಾರಕರು, ಲಿಂಕ್ ವರ್ಕರ್ಸ್ ಮತ್ತು ಪೌರಕಾರ್ಮಿಕರು ಸೇರಿದಂತೆ ನಗರ ಪಾಲಿಕೆಯ ಎಲ್ಲ ವಿಭಾಗದ ಸಿಬ್ಬಂದಿಗಳೊಂದಿಗೆ ಸ್ವಯಂ ಸೇವಕರು ಹಾಗೂ ಸ್ಥಳೀಯ ಸಂಘಟನೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರು.

Megha
the authorMegha

Leave a Reply

error: Content is protected !!
Latest news
KSRTC: ನೌಕರರ ವೇತನ ಹೆಚ್ಚಳ ಸಂಬಂಧದ ಹೋರಾಟ ನಿಲ್ಲುವುದಿಲ್ಲ ಹೈ ಕೋರ್ಟ್‌ ನಿರ್ದೇಶನದಂತೆ ಮುಂದುವರಿಯಲಿದೆ- ಚಂದ್ರಶೇಖರ... ಏ.29ರಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ 2024ರ ಜ.1ರಿಂದ ನೌಕರರ ವೇತನ ಹೆಚ್ಚಳ, ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ... ಏ.29ರ ಒಳಗೆ ರೈತರ ಖಾತೆಗೆ ಬಾಕಿ ಹಣ ಜಮಾ ಡಿಸಿ ಭರವಸೆ ಹಿನ್ನೆಲೆ ಧರಣಿ ತಾತ್ಕಾಲಿಕ ಮುಂದೂಡಿಕೆ: ಕುರುಬೂರು ಶಾಂತಕುಮಾರ್... ಇದ್ದಲ್ಲಿಂದಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೀರುವ ಸಾರಿಗೆ ನೌಕರರು: ಧರ್ಮ ಸಂಕಟದಲ್ಲಿ ಪೊಲೀಸರು ಮೈಸೂರು: ಹೆಚ್ಚುವರಿ ಹಣ 100 ರೂ. ಪಾವತಿಗೆ ಆಗ್ರಹಿಸಿ ರೈತರ ಅಹೋರಾತ್ರಿ ಧರಣಿ KSRTC: ಪ್ರಣಾಳಿಕೆ ಭರವಸೆ ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ... KSRTC: ಅರಿಸಿನಕುಂಟೆಯಲ್ಲಿ ಪಾದಯಾತ್ರೆ ತಡೆದಿದ್ದ ಪೊಲೀಸರು ಸದ್ಯ ಫ್ರೀಡಂ ಪಾರ್ಕ್‌ನತ್ತ ಹೊರಟ ಸಾರಿಗೆ ನೌಕರರು ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ, ಸಾರಿಗೆ ಸಚಿವರಿಗೆ ಮಾರ್ಗದರ್ಶನ ನೀಡುವಂತೆ ಹೈ ಕೋರ್ಟ್‌ ಸಿಜೆಗೆ ಲಿಖಿತ ಮನವ... KSRTC: ಬೆಂಗಳೂರಿಗೆ ಪಾದಯಾತ್ರೆ ಬರುತ್ತಿರುವ ಸಾರಿಗೆ ನೌಕರರ ಅರಿಸಿನಕುಂಟೆ ಬಳಿ ತಡೆದ ಪೊಲೀಸರು KSRTC: ಮುಂದಿನ ಚಕ್ರದ ಮುಡಿ ಕಟ್ಟಾಗಿ ಬಸ್‌ ಪಲ್ಟಿ- ಸಣ್ಣಪುಟ್ಟಗಾಯಗಳೊಂದಿಗೆ 74 ಪ್ರಯಾಣಿಕರು ಪಾರು