NEWSಕೃಷಿನಮ್ಮರಾಜ್ಯ

ಮೈಸೂರು: ಹೆಚ್ಚುವರಿ ಹಣ 100 ರೂ. ಪಾವತಿಗೆ ಆಗ್ರಹಿಸಿ ರೈತರ ಅಹೋರಾತ್ರಿ ಧರಣಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ರಾಜ್ಯ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣ ನೂರು ರೂಪಾಯಿಯನ್ನು ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿಲ್ಲ ಎಂದು ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸುತ್ತಾ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಕೆಲಕಾಲ ರೈತರು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದು ಕಚೇರಿಯ ಪೂರ್ಟಿಕೋದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರು.

ಲೀಡ್ ಬ್ಯಾಂಕ್ ಮುಖ್ಯಸ್ಥ ಕೃಷ್ಣಮೂರ್ತಿಯವರು ಈ ಚಳವಳಿ ಜಾಗಕ್ಕೆ ಬಂದು ಚಿನ್ನ ಗಿರವಿ, ಸಾಲಕ್ಕೆ ಸಿಬಿಲ್ ಸ್ಕೋರ್ ಕೇಳಬಾರದು, ಚಿನ್ನ ಪರೀಕ್ಷೆ ಮಾಡುವ ಶುಲ್ಕ150 ರಿಂದ 200 ಪಡೆದುಕೊಳ್ಳಬಹುದು ಹೆಚ್ಚುವರಿ ಪಡೆದುಕೊಂಡರೆ ದೂರು ನೀಡಬಹುದು ಎಂದು ತಿಳಿಸಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ಪ್ರಮೋದ್ ನೋನಿ ಮಾತನಾಡಿ, ots ಸಾಲ ತಿರುವಳಿ ಬಗ್ಗೆ ಮೇ 8 ರಂದು ರಾಜ್ಯಮಟ್ಟದ ಕಾರ್ಯನಿರ್ವಹಕ ವವ್ಯಸ್ಥಾಪಕರು ಮೈಸೂರಿನಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವರು ಎಂದು ಹೇಳಿದರು.

ಜಿಲ್ಲೆಯ ವಿದ್ಯುತ್ ಸಮಸ್ಯೆಗಳಿಗೆ ಶೀಘ್ರದಲ್ಲಿ ರೈತ ಮುಖಂಡರ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದರು.

ಇದೇ ವೇಳೆ ಪ್ರತಿಭಟನಾಕಾರವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ರೈತರ ಸಂಕಷ್ಟ ಅರಿಯದ ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರನ್ನು ನಿರಂತರ ಶೋಷಣೆ ಮಾಡುತ್ತಿದೆ. ಪ್ರತಿ ವರ್ಷವು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಲೇ ರೈತರನ್ನು ವಂಚಿಸುತ್ತ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಬಣ್ಣಾರಿ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದರು.

ಇನ್ನು ಇಂತಹ ಉಪಟಳದಿಂದಲೇ ರೈತರು ಕಬ್ಬು ಬೆಳೆಯನ್ನು ಕಡಿಮೆ ಮಾಡಿದ್ದಾರೆ. 15 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಇರುವ ಬಣ್ಣಾರಿ ಕಾರ್ಖಾನೆಗೆ ಕೇವಲ ಏಳೂವರೆ ಲಕ್ಷ ಟನ್ ಮಾತ್ರ ಸರಬರಾಜು ಮಾಡಿದ್ದಾರೆ. ಈ ಕಬ್ಬಿನ ಹೆಚ್ಚುವರಿ ಹಣ ಏಳೂವರೆ ಕೋಟಿ ರೈತರಿಗೆ ಪಾವತಿಸದೆ ನಾಟಕವಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಗೋಧಾಮನ್ನು ವಶಕೆ ಪಡೆದು ಸಕ್ಕರೆ ಮಾರಾಟ ಮಾಡಿ ರೈತರ ಬಾಕಿ ಹಣ ಕೂಡಿಸಬೇಕು ಎಂದು ಒತ್ತಾಯಿಸಿದರು.

ಚಳವಳಿ ನಿರತ ರೈತರು ಕಬ್ಬಿನ ಹಣ ಕೊಡಿಸುವ ತನಕ ನಿರಂತರ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಪಟ್ಟುಹಿಡಿದು ಧರಣಿಯನ್ನು ಮುಂದುವರಿಸಿದ್ದಾರೆ.

ಧರಣಿಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಹದೇವಸ್ವಾಮಿ, ಕೆಂಡಗಣ್ಣಪ್ಪ, ನಾಗೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ, ಗೌರಿಶಂಕರ್, ಗುರುಸ್ವಾಮಿ, ಅಂಬಳೆ ಮಂಜುನಾಥ್, ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ, ಸುಂದರಪ್ಪ, ಸತೀಶ್, ದೇವನೂರು ಮಹಾದೇವಪ್ಪ, ರಂಗರಾಜು, ಕೆಂಡಗಣಸ್ವಾಮಿ, ಶಿವಸ್ವಾಮಿ, ರವಿಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಕಮಲಮ್ಮ ಸೇರಿದಂತೆ 250ಕ್ಕೂ ಹೆಚ್ಚು ರೈತರು ಇದ್ದಾರೆ.

Megha
the authorMegha

Leave a Reply

error: Content is protected !!
Latest news
ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು: ಸಿಎಂ ಡಿಕೆಶಿ ನೂತನ ಸಿಎಂ ಡಿಕೆಶಿಗೆ ಶುಭಾಶಯ ಕೋರಿದ ಮಲೇಷಿಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ KKRTC: ನೌಕರರ ಮೇ ತಿಂಗಳ ವೇತನ ನಾಳೆ ಆಗುತ್ತದೆ, ಗೊಂದಲ ಬೇಡ: ಸಿಎಒ ಸ್ಪಷ್ಟನೆ KSRTC: ಮೂರು ವರ್ಷಕ್ಕೂ ಹೆಚ್ಚುಕಾಲ ಒಂದೇ ಕಡೆ ಬೇರುಬಿಟ್ಟಿರುವ ನೌಕರರ ವರ್ಗಾವಣೆಗೆ ಆದೇಶ ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕ್‌ ಕೊಟ್ಟ ಕೇಂದ್ರ ಸರ್ಕಾರ: ಗೃಹಬಳಕೆ ಗ್ಯಾಸ್‌ ಸಿಂಡರ್‌ಗೆ 29 ರೂ. ಏರಿಕೆ, ಇಂದಿನಿಂದ... ರಾಮಲಿಂಗಾರೆಡ್ಡಿ: ರಾಜೀನಾಮೆ ವಾಪಸ್‌ -ಡಿಕೆಶಿ ಸರ್ಕಾರದಲ್ಲಿದ್ದ ಭಿನ್ನಮತ ಶಮನ ಸರ್ಕಾರದ ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಯೋಜನೆಯ "ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನಕ್ಕೆ ಉತ್ತಮ ಸ್ಪಂದನೆ ಪಾರ್ಕ್‌ಗಳ ನಡಿಗೆದಾರರ ಸ್ನೇಹಿಯನ್ನಾಗಿ ರೂಪಿಸಿ: ನೂತನ ಆಯುಕ್ತ ಜಗದೀಶ್ ಕರೆ 100 ವರ್ಷವಾದರೂ ಸಾಧನೆಗಳ ಮೂಲಕ ಅರಸು ಜೀವಂತ: ಸಿಎಂ ಡಿ.ಕೆ.ಶಿವಕುಮಾರ್‌ ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ನೈರ್ಮಲ್ಯ ಇಲಾಖೆ ಆಯುಕ್ತೆ ಫೌಜಿಯಾ