NEWSನಮ್ಮಜಿಲ್ಲೆಬೆಂಗಳೂರು

ಪಾರ್ಕ್‌ಗಳ ನಡಿಗೆದಾರರ ಸ್ನೇಹಿಯನ್ನಾಗಿ ರೂಪಿಸಿ: ನೂತನ ಆಯುಕ್ತ ಜಗದೀಶ್ ಕರೆ

ಎಂ.ಜಿ. ರಸ್ತೆಯ ಪಿಯುಬಿ ಕಟ್ಟಡದ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, ನಾವೆಲ್ಲರೂ ಸಾರ್ವಜನಿಕರ ಸೇವಕರಾಗಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಮೂಲಕ ನಮ್ಮ ಡ್ಯೂಟಿ ಮಾಡೋಣ ಎಂದು ಕಿವಿಮಾತು ಹೇಳಿದರು.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪಾರ್ಕ್ ಗಳನ್ನು ನಡಿಗೆದಾರರ ಸ್ನೇಹಿಯನ್ನಾಗಿ ರೂಪಿಸಿ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಿ. ಜಗದೀಶ್ ಅಧಿಕಾರಿಗಳಿಗೆ ಕರೆ ನೀಡಿದರು.

ಇಂದು ಎಂ.ಜಿ. ರಸ್ತೆಯ ಪಿಯುಬಿ ಕಟ್ಟಡದ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿ, ನಾವೆಲ್ಲರೂ ಸಾರ್ವಜನಿಕರ ಸೇವಕರಾಗಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಮೂಲಕ ನಮ್ಮ ಡ್ಯೂಟಿ ಮಾಡೋಣ ಎಂದು ಕಿವಿಮಾತು ಹೇಳಿದರು.

ಅಧಿಕಾರ ಸ್ವೀಕರಿಸಿ ಅಧಿಕಾರಿಗಳ ಪರಿಚಯ ಹಾಗೂ ಕೇಂದ್ರ ನಗರ ಪಾಲಿಕೆಯ ವಿವಿಧ ವಿಭಾಗವಾರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ, ನಾಗರೀಕರಿಗೆ ನೀಡಲಾಗುತ್ತಿರುವ ಸೇವೆಗಳ ಗುಣಮಟ್ಟ, ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರವಾಗಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಇಲಾಖೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಬಲಪಡಿಸಿ, ಸಾರ್ವಜನಿಕರಿಗೆ ತ್ವರಿತ ಹಾಗೂ ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ಎಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸೂಚಿಸಿದರು.

ಆಯುಕ್ತರು ನೀಡಿದ ಪ್ರಮುಖ ನಿರ್ದೇಶನಗಳು: * ಪಾರ್ಕ್ ಗಳಿಗೆ ಮಕ್ಕಳು, ಹಿರಿಯ ನಾಗರೀಕರು, ಮಹಿಳೆಯರು, ಸಾರ್ವಜನಿಕರು ವಾಯುವಿಹಾರಕ್ಕೆ ಆಗಮಿಸುತ್ತಾರೆ. ಅವರಿಗೆ ನಡಿಗೆದಾರರ ಸ್ನೇಹಿ (Walker friendly) ಪಾರ್ಕ್ ಗಳನ್ನಾಗಿ ರೂಪಿಸುವುದು.

* ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಶೇ. 100% ರಷ್ಟು ಗುರಿ ಸಾಧನೆಗೆ ತ್ವರಿತ ಕ್ರಮ ವಹಿಸುವುದು ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ಏರ್ಪಡಿಸಲು ಸೂಚನೆ. * ಮಾರುಕಟ್ಟೆ ಸೇರಿದಂತೆ ಬಾಡಿಗೆ ಪಾವತಿ ಮಾಡದ ಮಳಿಗೆಗಳನ್ನು / ಸ್ವತ್ತುಗಳನ್ನು ಖಾಲಿ ಮಾಡಿಸಿ ಬೀಗ ಹಾಕಬೇಕು.

* ತ್ಯಾಜ್ಯ ನಿರ್ವಹಣೆಗೆ ಸ್ವಚ್ಛತ ಸಿಬ್ಬಂದಿಗಳಿಗೆ ಹಾಜರಾತಿ ಕಡ್ಡಾಯಗೊಳಿಸಲು ಸೂಚನೆ. * ಪ್ರತಿ ದಿನ ಮನೆ ಮನೆ ತ್ಯಾಜ್ಯ ಸಂಗ್ರಹಣೆ ಶೇ. 100 ಪ್ರಗತಿ ಸಾಧಿಸುವುದು. * ತ್ಯಾಜ್ಯ ಕಪ್ಪು (ಬ್ಲ್ಯಾಕ್ ಸ್ಪಾಟ್) ಚುಕ್ಕೆಗಳ ಶಾಶ್ವತವಾಗಿ ನಿರ್ಮೂಲನೆಗೆ ಕ್ರಮ ತೆಗೆದುಕೊಳ್ಳಬೇಕು.

* ನಾವೆಲ್ಲರೂ ಸಾರ್ವಜನಿಕರ ಸೇವಕರಾಗಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಲು ಹಾಗೂ ಅವರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಸೂಚನೆ ನೀಡಿದರು.

ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಕಂದಾಯ ಅಪರ ಆಯುಕ್ತ ಕೆ. ರಂಗನಾಥ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಹೇಮಲತಾ, ನಗರ ಯೋಜನೆ ಜಂಟಿ ನಿರ್ದೇಶಕರು, ಆರೋಗ್ಯಾಧಿಕಾರಿ ಶಿವಕುಮಾರ್, ಹಣಕಾಸು ಉಪ ನಿಯಂತ್ರಕರಾದ ವಿಜಯಲಕ್ಷ್ಮಿ, ಅರಣ್ಯ, ತೋಟಗಾರಿಕೆ, ಪಶು ಸಂಗೋಪನೆ, ಶಿಕ್ಷಣ, ಕಂದಾಯ, ವಿಭಾಗದ ಅಧಿಕಾರಿಗಳು ಇದ್ದರು.

Deva
the authorDeva

Leave a Reply

error: Content is protected !!
Latest news
ರಾಮಲಿಂಗಾರೆಡ್ಡಿ: ರಾಜೀನಾಮೆ ವಾಪಸ್‌ -ಡಿಕೆಶಿ ಸರ್ಕಾರದಲ್ಲಿದ್ದ ಭಿನ್ನಮತ ಶಮನ ಸರ್ಕಾರದ ಮಹತ್ವಾಕಾಂಕ್ಷಿ ಭೂ ಗ್ಯಾರಂಟಿ ಯೋಜನೆಯ "ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನಕ್ಕೆ ಉತ್ತಮ ಸ್ಪಂದನೆ ಪಾರ್ಕ್‌ಗಳ ನಡಿಗೆದಾರರ ಸ್ನೇಹಿಯನ್ನಾಗಿ ರೂಪಿಸಿ: ನೂತನ ಆಯುಕ್ತ ಜಗದೀಶ್ ಕರೆ 100 ವರ್ಷವಾದರೂ ಸಾಧನೆಗಳ ಮೂಲಕ ಅರಸು ಜೀವಂತ: ಸಿಎಂ ಡಿ.ಕೆ.ಶಿವಕುಮಾರ್‌ ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ನೈರ್ಮಲ್ಯ ಇಲಾಖೆ ಆಯುಕ್ತೆ ಫೌಜಿಯಾ ನಾಳೆ ಇಪಿಎಸ್-95, BMTC-KSRTC ನಿವೃತ್ತ ನೌಕರರ ಸಂಘದ 101ನೇ ಮಾಸಿಕ ಸಭೆ ಸಾರಿಗೆ ನೌಕರರ ವೇತನ ಹೆಚ್ಚಳ ವಿಷಯ: ಜೂ.23ರ ಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ: ಸಚಿವ ಮುನಿಯಪ್ಪ ಕುಣಿಹಳ್ಳಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಗಿಡ ನೆಟ್ಟು ಪರಿಸರ ಜಾಗೃತಿ ವಿದೇಶದಲ್ಲಿ ಕನ್ನಡ ಕಲಿಕೆ: ‘ಕರ್ನಾಟಕ ಸಂಘ ಕತಾರ್’ನ ಅಧ್ಯಕ್ಷ ಸುಬ್ರಮಣ್ಯ ಅಭಯ