NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ವೇತನ ಹೆಚ್ಚಳ ವಿಷಯ: ಜೂ.23ರ ಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ

ಸದ್ಯಕ್ಕೆ ವೇತನ ಹೆಚ್ಚಳದ ವಿಚಾರ ನ್ಯಾಯಾಲಯ, ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳ ನಡುವಿನ ಚರ್ಚೆಯ ಪ್ರಮುಖ ವಿಷಯವಾಗಿದ್ದು, ಜೂ.23ರ ಕೋರ್ಟ್ ವಿಚಾರಣೆಯಿಂದ ನ್ಯಾಯಸಿಗಬಹುದು ಎಂಬ ನಿರೀಕ್ಷೆಯಲ್ಲಿ ನೌಕರರು ಇದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಹಲವು ನೌಕರರು ಹಲವು ವರ್ಷಗಳಿಂದ ವೇತನ ಹೆಚ್ಚಳ ವಿಷಯದಲ್ಲಿ ಅಮಾನತು, ವಾಜಾ ಹಾಗೂ ಪೊಲೀಸ್‌ ಪ್ರಕರಣಗಳಲ್ಲಿ ಸಿಲುಕಿ ಒತ್ತಾಡುತ್ತಿದ್ದಾರೆ. ಇದಕ್ಕಿ ಪೂರ್ಣ ವಿರಾಮ ನೀಡಬೇಕಾದರೆ ನೌಕರರಿಗೆ ವೇತನ ವಿಷಯದಲ್ಲಿ ಯಾವುದೇ ಕಿರಿಕಿರಿಯಾಗಬಾರದು.

ಆದರೆ ಈ ಬಹುನಿರೀಕ್ಷಿತ ಬೇಡಿಕೆ ಇನ್ನೂ ಈಡೇರದಿರುವುದು ನೌಕರರಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿ. ಇತ್ತ ಅಧಿಕಾರಿಗಳು ವೇತನ ಸಂಬಂಧ ಹೋರಾಟಕ್ಕೆ ನೌಕರರು ಮುಂದಾದರೆ ಆ ನೌಕರರ ವಿರುದ್ಧ ಪ್ರಕರಣ ದಾಖಲಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಇದು ಆ ಅಧಿಕಾರಿಗಳ ತಪ್ಪಲ್ಲ ಆದರೆ ಅಂಥ ಒತ್ತಡಕ್ಕೆ ಅಧಿಕಾರಿಗಳು ಸಿಲುಕಿಕೊಳ್ಳುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಸಾರಿಗೆಯ ಅಧಿಕಾರಿಗಳು ನೌಕರರು ಒಗ್ಗಟ್ಟಾಗಬೇಕಿದೆ.

ಹೌದು! ಸಾರಿಗೆ ನೌಕರರು ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಪ್ರತಿದಿನ ಕೋಟಿಗೂ ಅಧಿಕ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸಮಯೋಚಿತ ಸೇವೆ ನೀಡುತ್ತಿದ್ದಾರೆ. ಆದರೂ ಹಲವು ವರ್ಷಗಳಿಂದ ವೇತನ ಹೆಚ್ಚಳ ವಿಷಯದಲ್ಲಿ ಆಗುತ್ತಿರುವ ಅನ್ಯಾಯವನ್ನು ಈವರೆಗೂ ಸರಿಪಡಿಸುವತ್ತ ಯಾವುದೇ ಸರ್ಕಾರ ಮುತುವರ್ಜಿ ವಹಿಸದಿರುವುದು ನೋವಿನ ಸಂಗತಿ.

ಈಗ ಸದ್ಯಕ್ಕೆ ವೇತನ ಹೆಚ್ಚಳದ ವಿಚಾರ ನ್ಯಾಯಾಲಯ, ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳ ನಡುವಿನ ಚರ್ಚೆಯ ಪ್ರಮುಖ ವಿಷಯವಾಗಿದ್ದು, ಜೂ.23ರ ಕೋರ್ಟ್ ವಿಚಾರಣೆಯಿಂದ ನ್ಯಾಯಸಿಗಬಹುದು ಎಂಬ ನಿರೀಕ್ಷೆಯಲ್ಲಿ ನೌಕರರು ಇದ್ದಾರೆ.

ಸಾರಿಗೆ ನೌಕರರ ವೇತನ ಹಾಗೂ ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಜೂ.236ಕ್ಕೆ ನಿಗದಿಪಡಿಸಲಾಗಿದೆ. ಕೋರ್ಟ್ ಅಂತಿಮ ಆದೇಶ ಅಥವಾ ಸ್ಪಷ್ಟ ಮಾರ್ಗಸೂಚಿ ನೀಡುವವರೆಗೆ ಸರ್ಕಾರ ಅಥವಾ ಸಾರಿಗೆ ನಿಗಮಗಳ ಆಡಳಿತ ಮಂಡಳಿ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲು ಹಿಂಜರಿಯುವ ಸಾಧ್ಯತೆ ಇದೆ.

ಇನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಎಲ್ಲರೂ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಈ ಕಾರಣದಿಂದಾಗಿ ನೌಕರರು ಮತ್ತಷ್ಟು ದಿನ ಕಾಯುವ ಪರಿಸ್ಥಿತಿ ಎದುರಾಗಿದೆ. ಅನೇಕ ನೌಕರರು ಕೋರ್ಟ್ ವಿಚಾರಣೆಯ ನಂತರವಾದರೂ ಸ್ಪಷ್ಟ ನಿರ್ಧಾರ ಹೊರಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದಲ್ಲಿ ಹೊಸ ಆಡಳಿತ ವ್ಯವಸ್ಥೆ ಜಾರಿಯಾಗಿದ್ದು, ಬೈರತಿ ಸುರೇಶ್‌ ಸಾರಿಗೆ ಸಚಿವರಾಗಿದ್ದಾರೆ. ಇವರು ಹಣಕಾಸಿನ ಸ್ಥಿತಿ, ನಿಗಮಗಳ ಆದಾಯ, ಸಾಲದ ಹೊರೆ, ನಷ್ಟ-ಲಾಭ ಹಾಗೂ ಹಿಂದಿನ ಒಪ್ಪಂದಗಳ ಕುರಿತು ಸಮಗ್ರ ಮಾಹಿತಿ ಪಡೆದು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸುವಷ್ಟರಲ್ಲೇ ತಿಂಗಳುಗಳ ನಿಮಿಷಗಳಂತೆ ಕಳೆದುಹೋಗುತ್ತವೆ.

ಇನ್ನು ಹಣಕಾಸು ಇಲಾಖೆಯ ಅನುಮೋದನೆಯೂ ಅಗತ್ಯವಾಗಿರುವುದರಿಂದ ಪ್ರಕ್ರಿಯೆ ತಕ್ಷಣ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆಯಿದೆ. ಆದರೆ ಹೊಸ ಸರ್ಕಾರದ ನಿಲುವು ಏನಿರಲಿದೆ ಎಂಬುದರ ಬಗ್ಗೆ ನೌಕರರ ದೃಷ್ಟಿನೆಟ್ಟಿದೆ. ಇತ್ತ ಜೀವನ ನಿರ್ವಹಣಾ ವೆಚ್ಚ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಗಮನಿಸಿದರೆ ವೇತನ ಹೆಚ್ಚಳ ಅನಿವಾರ್ಯ ಎಂದು ನೌಕರರ ಸಂಘಟನೆಗಳು ಹೇಳುತ್ತಿವೆ.

ಇತ್ತ ಸಾರಿಗೆ ನೌಕರರು ಹಲವು ವರ್ಷಗಳಿಂದ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದು, ಅನೇಕ ಬಾರಿ ಚರ್ಚೆಗಳು ನಡೆದಿದ್ದರೂ ಅಂತಿಮ ನಿರ್ಧಾರ ಹೊರಬಾರದಿರುವುದು ಬೇಸರ ಮೂಡಿಸಿದೆ. ಪ್ರತಿದಿನ ಸಾವಿರಾರು ಕಿಲೋಮೀಟರ್ ಡ್ಯೂಟಿ ಮಾಡಿ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ತಮ್ಮ ಸೇವೆಗೆ ತಕ್ಕ ವೇತನ ದೊರೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇದರ ಜತೆಗೆ ಇದೇ 23ರ ನ್ಯಾಯಾಲಯದ ವಿಚಾರಣೆ, ಸರ್ಕಾರದ ಮುಂದಿನ ಹೆಜ್ಜೆಗಳು ಹಾಗೂ ಸಂಘಟನೆಗಳ ನಿಲುವು ಮುಂದಿನ ಬೆಳವಣಿಗೆಗಳನ್ನು ನಿರ್ಧರಿಸಲಿವೆ. ಈ ನಡುವೆ ಸರ್ಕಾರವೂ ನೌಕರರ ಸಮಸ್ಯೆಗಳನ್ನು ಮಾನವೀಯ ದೃಷ್ಟಿಕೋನದಿಂದ ಪರಿಗಣಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ.

ಸಾರಿಗೆ ವ್ಯವಸ್ಥೆಯನ್ನು ಸದೃಢವಾಗಿ ಮುನ್ನಡೆಸುವ ನೌಕರರ ಪರಿಶ್ರಮಕ್ಕೆ ನ್ಯಾಯ ಸಿಗಬೇಕು ಎಂಬುದು ಸಾರ್ವಜನಿಕರ ಆಶಯವೂ ಆಗಿದೆ. ಆದ್ದರಿಂದ ಎಲ್ಲ ಅಡೆತಡೆಗಳು ನಿವಾರಣೆಯಾಗಿ, ನೌಕರರ ನಿರೀಕ್ಷೆಗೆ ತಕ್ಕ ವೇತನ ಹೆಚ್ಚಳ ಮಾಡಿ ಜಾರಿಮಾಡುತ್ತ ಸರ್ಕಾರ ಗಮನಹರಿಸಬೇಕಿದೆ.

Deva
the authorDeva

Leave a Reply

error: Content is protected !!
Latest news
ನಾಳೆ ಇಪಿಎಸ್-95, BMTC-KSRTC ನಿವೃತ್ತ ನೌಕರರ ಸಂಘದ 101ನೇ ಮಾಸಿಕ ಸಭೆ ಸಾರಿಗೆ ನೌಕರರ ವೇತನ ಹೆಚ್ಚಳ ವಿಷಯ: ಜೂ.23ರ ಕೋರ್ಟ್ ವಿಚಾರಣೆಯತ್ತ ಎಲ್ಲರ ಚಿತ್ತ ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ: ಸಚಿವ ಮುನಿಯಪ್ಪ ಕುಣಿಹಳ್ಳಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಗಿಡ ನೆಟ್ಟು ಪರಿಸರ ಜಾಗೃತಿ ವಿದೇಶದಲ್ಲಿ ಕನ್ನಡ ಕಲಿಕೆ: ‘ಕರ್ನಾಟಕ ಸಂಘ ಕತಾರ್’ನ ಅಧ್ಯಕ್ಷ ಸುಬ್ರಮಣ್ಯ ಅಭಯ KARNATAKA- ಸರ್ಕಾರಿ ನೌಕರರಿಗೆ ಇನ್ನು ಮುಂದೆ ಬಯೋಮೆಟ್ರಿಕ್‌ ಬದಲಿಗೆ AI ಜಿಪಿಎಸ್‌ ಆಧರಿತ ಹಾಜರಾತಿ ಕಡ್ಡಾಯ: ಸಿಎಸ್‌... ಸಚಿವ ಸ್ಥಾನಕ್ಕೆ ಅಧಿಕೃತ ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ: ಸಿಎಂ ಡಿಕೆಶಿ ಕೊಟ್ಟ ಮಾತು ತಪ್ಪಿದ್ದಕ್ಕೆ ಈ ನಿರ್ಧಾರ ಎ... KSRTC ನಾಲ್ಕೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಮೇ, ಜೂನ್‌ ತಿಂಗಳುಗಳ 860 ಕೋಟಿ ರೂ. ಅನುದಾನ ಬಿಡುಗಡೆ KKRTC: ಪ್ರತಿ ತಿಂಗಳು 1ರಂದೇ ವೇತನ ಆಗುತ್ತಿತ್ತು- ಈ ಬಾರಿ ಮೇ ತಿಂಗಳ ವೇತನ ಇನ್ನೂ ಆಗಿಲ್ಲ, ಗೊಂದಲದಲ್ಲಿ ನೌಕರರು! ರಾಜ್ಯದ ಎಲ್ಲ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌: ಹೊರಬಿದ್ದ ಸರ್ಕಾರದ ಅಧಿಕೃತ ಆದೇಶ