NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಪ್ರತಿ ತಿಂಗಳು 1ರಂದೇ ವೇತನ ಆಗುತ್ತಿತ್ತು- ಈ ಬಾರಿ ಮೇ ತಿಂಗಳ ವೇತನ ಇನ್ನೂ ಆಗಿಲ್ಲ, ಗೊಂದಲದಲ್ಲಿ ನೌಕರರು!

ಈ ಬಗ್ಗೆ ವಿಚಾರಿಸಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ. ಸುಶೀಲಾ ಅವರಿಗೂ ಪೋನ್‌ ಮಾಡಲಾಯಿತು. ಅವರು ಕೂಡ ಫೋನ್‌ ಪಿಕ್‌ ಮಾಡಿಲ್ಲ. ಈ ರೀತಿ ಫೋನ್‌ಗಳನ್ನು ಪಿಕ್‌ ಮಾಡುತ್ತಿಲ್ಲ. ಇಲ್ಲ ನೌಕರರಿಗೆ ವೇತನ ಕೊಡುವುದಕ್ಕೆ ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿಯನ್ನು ಕೊಡುತ್ತಿಲ್ಲ ಎಂದರೆ ನೌಕರರು ಏನು ತಿಳಿದುಕೊಳ್ಳಬೇಕು?

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿಗೆ ವೇತನವಾಗುತ್ತಿತ್ತು. ಆದರೆ, ಈ ಬಾರಿ ಮೇ ತಿಂಗಳ ವೇತನ ಜೂನ್‌ 5ನೇ ತಾರೀಖು ಬಂದರೂ ಇನ್ನು ಆಗಿಲ್ಲ.

ಈ ಬಗ್ಗೆ ನೌಕರರಿಗೆ ಯಾವುದೇ ಮಾಹಿತಿ ನೀಡದ ಕಾರಣ ವೇತನ ಯಾವಾಗ ಆಗುತ್ತದೆ?  ಯಾರನ್ನು ಕೇಳಬೇಕು ಎಂಬ ಗೊಂದಲದಲ್ಲಿ ಸಂಸ್ಥೆಯ 9 ವಿಭಾಗದ ನೌಕರರು ಇದ್ದಾರೆ.

ಅಲ್ಲದೆ ಪ್ರತಿ ತಿಂಗಳು ಶನಿವಾರ ಭಾನುವಾರ 1ನೇ ತಾರೀಖು ಬಂದರೆ ಅದರ ಮಾರನೇದಿನ ಅಂದರೆ 2 ಅಥವಾ 3ನೇ ತಾರೀಖಿಗೆ ವೇತನ ಪಾವತಿಸಲಾಗುತ್ತಿತ್ತು. ಆದರೆ, ಈ ಬಾರಿ ಒಂದನೇ ತಾರೀಖು ಸೋಮವಾರವೇ ಬಂದಿದ್ದರೂ ಈವರೆಗೂ ವೇತನ ಪಾವತಿಸಲಾಗಿಲ್ಲ.

ಈ ಸಂಬಂಧ ನಿಗಮದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಉಪ ಮುಖ್ಯ ಲೆಕ್ಕಾಧಿಕಾರಿಗಳಿಗೆ ಫೋನ್‌ ಮಾಡಿದರೆ ಅವರು ಫೋನ್‌ ಪಿಕ್‌ ಮಾಡುತ್ತಿಲ್ಲ.

ಇನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ. ಸುಶೀಲಾ ಅವರಿಗೂ ಪೋನ್‌ ಮಾಡಲಾಯಿತು. ಅವರು ಕೂಡ ಫೋನ್‌ ಪಿಕ್‌ ಮಾಡಿಲ್ಲ. ಈ ರೀತಿ ಫೋನ್‌ಗಳನ್ನು ಪಿಕ್‌ ಮಾಡುತ್ತಿಲ್ಲ. ಇಲ್ಲ ನೌಕರರಿಗೆ ವೇತನ ಕೊಡುವುದಕ್ಕೆ ವಿಳಂಬವಾಗುತ್ತಿರುವ ಬಗ್ಗೆ ಮಾಹಿತಿಯನ್ನು ಕೊಡುತ್ತಿಲ್ಲ ಎಂದರೆ ನೌಕರರು ಏನು ತಿಳಿದುಕೊಳ್ಳಬೇಕು?

ಏಕೆ ಸಂಸ್ಥೆಯಲ್ಲಿ ಆರ್ಥಿಕ ಸಮಸ್ಯೆಯಾಗಿದೆಯೇ? ಒಂದುವೇಳೆ ಆರ್ಥಿಕ ಸಮಸ್ಯೆ ಆಗಿದ್ದರೆ ಈ ಬಾರಿ ನಾವು 1ನೇ ತಾರೀಖಿಗೆ ವೇತನ ಹಾಕಲು ಆಗುತ್ತಿಲ್ಲ ಎಂದು ನೌಕರರಿಗೆ ಮಾಹಿತಿ ನೀಡಬಹುದಿತ್ತಲ್ಲವೇ. ಅದನ್ನು ಮಾಡದೆ ನೌಕರರಿಗೆ ವೇತನವನ್ನು ಹಾಕದೆ ಗೊಂದಲದಲ್ಲಿ ದೂಡಿರುವುದು ಸರಿಯೆ?ಇದಕ್ಕೆ ಸಂಬಂಧಪಟ್ಟ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಾ ಅವರು ಉತ್ತರ ಕೊಡಬೇಕು.

ಈ ಹಿಂದೆ ಬಿಎಂಟಿಸಿಯಲ್ಲೂ ಇದೇ ರೀತಿ ತಮಗೆ ಇಷ್ಟ ಬಂದಾಗ ವೇತನ ಹಾಕುವ ಪದ್ಧತಿಯನ್ನು ಅಧಿಕಾರಿಗಳು ರೂಢಿಸಿಕೊಂಡಿದ್ದರು. ಅದು 2023-24ರ ಆ ವೇಳೆ ಇದ್ದ ಖಡಕ್‌ ಐಎಎಸ್‌ ಅಧಿಕಾರಿ ಜಿ. ಸತ್ಯವತಿ ಅವರು ಈ ರೀತಿ ವೇತನವನ್ನು ಇಷ್ಟಬಂದ ದಿನ ಕೊಡುವುದರಿಂದ ನೌಕರರು ಗೊಂದಲಕ್ಕೆ ಸಿಲುಕುತ್ತಾರೆ. ಹಾಗಾಗಿ ಈ ಪದ್ಧತಿ ಹೋಗಬೇಕು ನೀವು ಎಂದು ವೇತನ ಕೊಡುತ್ತೀರಿ ಎಂದು ಒಂದು ನಿಗದಿತ ದಿನಾಂಕವನ್ನು ನಮಗೆ ಕೊಡಿ ಎಂದು ಕೇಳಿದ್ದರು.

ಆ ವೇಳೆ ಸಂಸ್ಥೆಯಲ್ಲಿದ್ದ ಮುಖ್ಯ ಲೆಕ್ಕಾಧಿಕಾರಿಗಳು ಪ್ರತಿ ತಿಂಗಳ 5ನೇ ತಾರೀಖಿಗೆ ವೇತನ ಕೊಡುತ್ತೇವೆ ಎಂದು ಲಿಖಿತವಾಗಿ ತಿಳಿಸಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳು 5ನೇ ತಾರೀಖಿಗೆ ವೇತನವಾಗುತ್ತಿದೆ. ಈ ರೀತಿ ಕೆಕೆಆರ್‌ಟಿಸಿ ಎಂಡಿ ಸುಶೀಲಾ ಅವರು ಏಕೆ ಅಧಿಕಾರಿಗಳಿಗೆ ಒಂದು ಖಡಕ್‌ ಎಚ್ಚರಿಕೆ ಸಂದೇಶ ಕೊಡಬಾರದು ಎಂಬುವುದು ನೌಕರರ ಒತ್ತಾಯವಾಗಿದೆ.

ಇನ್ನಾದರೂ ಈ ರೀತಿ ಇಷ್ಟಬಂದಂತೆ ವೇತನವನ್ನು ಕೊಡುವುದಕ್ಕೆ ಪೂರ್ಣವಿರಾಮಹಾಕಿ ಒಂದು ನಿಗದಿತ ತಾರೀಖಿನಂದು ನೌಕರರ ಬ್ಯಾಂಕ್‌ ಖಾತೆಗೆ ವೇತನ ಹಾಕುವ ಪದ್ಧತಿಯನ್ನು ನಿಗಮದ ಅಧಿಕಾರಿಗಳು ರೂಢಿಸಿಕೊಳ್ಳಬೇಕು ಎಂದು ನೌಕರರ ಆಗ್ರಹಿಸಿದ್ದಾರೆ.

 

Megha
the authorMegha

Leave a Reply

error: Content is protected !!
Latest news
ವಿದೇಶದಲ್ಲಿ ಕನ್ನಡ ಕಲಿಕೆ: ‘ಕರ್ನಾಟಕ ಸಂಘ ಕತಾರ್’ನ ಅಧ್ಯಕ್ಷ ಸುಬ್ರಮಣ್ಯ ಅಭಯ KARNATAKA- ಸರ್ಕಾರಿ ನೌಕರರಿಗೆ ಇನ್ನು ಮುಂದೆ ಬಯೋಮೆಟ್ರಿಕ್‌ ಬದಲಿಗೆ AI ಜಿಪಿಎಸ್‌ ಆಧರಿತ ಹಾಜರಾತಿ ಕಡ್ಡಾಯ: ಸಿಎಸ್‌... ಸಚಿವ ಸ್ಥಾನಕ್ಕೆ ಅಧಿಕೃತ ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ: ಸಿಎಂ ಡಿಕೆಶಿ ಕೊಟ್ಟ ಮಾತು ತಪ್ಪಿದ್ದಕ್ಕೆ ಈ ನಿರ್ಧಾರ ಎ... KSRTC ನಾಲ್ಕೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಮೇ, ಜೂನ್‌ ತಿಂಗಳುಗಳ 860 ಕೋಟಿ ರೂ. ಅನುದಾನ ಬಿಡುಗಡೆ KKRTC: ಪ್ರತಿ ತಿಂಗಳು 1ರಂದೇ ವೇತನ ಆಗುತ್ತಿತ್ತು- ಈ ಬಾರಿ ಮೇ ತಿಂಗಳ ವೇತನ ಇನ್ನೂ ಆಗಿಲ್ಲ, ಗೊಂದಲದಲ್ಲಿ ನೌಕರರು! ರಾಜ್ಯದ ಎಲ್ಲ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌: ಹೊರಬಿದ್ದ ಸರ್ಕಾರದ ಅಧಿಕೃತ ಆದೇಶ ಕೊಟ್ಟ ಮಾತು ತಪ್ಪಿದ ಸಿಎಂ ಡಿಕೆಶಿ: ಅಸಮಾಧಾನಗೊಂಡ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ! ಸರ್ಕಾರದ 2 ಸಾವಿರ ರೂ. ಪಡೆಯಲು ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್‌ ಕಡ್ಡಾಯ ಡ್ಯೂಟಿ ರೋಟಾ ಸಂಬಂಧ  ಜೂನ್‌ 20ರಿಂದ ಸಾರಿಗೆ ನೌಕರರ ಕೌನ್ಸೆಲಿಂಗ್: ಸಿಟಿಎಂ ಆದೇಶ ಹೃದಯಾಘಾತದಿಂದ ಪಾರಾಗಲು ನಿಮಗೆ ಬಾದಾಮಿ ಅಥವಾ ಬಡವರ ಬಾದಾಮಿ ಕಡಲೆಕಾಯಿ ಯಾವುದು ಹಿತ?