KSRTC ನಾಲ್ಕೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಮೇ, ಜೂನ್ ತಿಂಗಳುಗಳ 860 ಕೋಟಿ ರೂ. ಅನುದಾನ ಬಿಡುಗಡೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 328 ಕೋಟಿ 69 ಲಕ್ಷದ 20 ಸಾವಿರ ರೂ.ಗಳನ್ನು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 156 ಕೋಟಿ 86ಲಕ್ಷದ 60 ಸಾವಿರ ರೂ.ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 210 ಕೋಟಿ 70 ಲಕ್ಷದ 60 ಸಾವಿರ ರೂ.ಗಳನ್ನು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 163 ಕೋಟಿ 65 ಲಕ್ಷದ 80 ಸಾವಿರ ರೂ.ಗಳನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ ನಾಲ್ಕೂ ಸಾರಿಗೆ ನಿಗಮಗಳಿಗೆ 860 ಕೋಟಿ ರೂ.ಗಳನ್ನು ಬಿಡುಗಡೆಮಾಡಲಾಗಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಿಗೆ “ಶಕ್ತಿ ಯೋಜನೆ”ಯಡಿ ಮೇ-2026 ಮತ್ತು ಜೂನ್-2026ರ ಮಾಹೆಗಳ ಅನುದಾನ 860 ಕೋಟಿ ರೂ.ಗಳನ್ನು ಸರ್ಕಾರ ಇಂದು ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 328 ಕೋಟಿ 69 ಲಕ್ಷದ 20 ಸಾವಿರ ರೂ.ಗಳನ್ನು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 156 ಕೋಟಿ 86ಲಕ್ಷದ 60 ಸಾವಿರ ರೂ.ಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 210 ಕೋಟಿ 70 ಲಕ್ಷದ 60 ಸಾವಿರ ರೂ.ಗಳನ್ನು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 163 ಕೋಟಿ 65 ಲಕ್ಷದ 80 ಸಾವಿರ ರೂ.ಗಳನ್ನು ಬಿಡುಗಡೆ ಮಾಡಿದ್ದು, ಒಟ್ಟಾರೆ ನಾಲ್ಕೂ ಸಾರಿಗೆ ನಿಗಮಗಳಿಗೆ 860 ಕೋಟಿ ರೂ.ಗಳನ್ನು ಬಿಡುಗಡೆಮಾಡಲಾಗಿದೆ.
ಈ ನಾಲ್ಕೂ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ “ಶಕ್ತಿ ಯೋಜನೆಯಡಿ ಅವಕಾಶ ಕಲ್ಪಿಸಿರುವ ಸಾರಿಗೆ ನಿಗಮಗಳ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಿ ಆದೇಶಿಸಲಾಗಿದೆ ಮತ್ತು ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆಯ ಅವಧಿಯನ್ನು 11.06.2023 ರಿಂದ 10.03.2026 ರವರೆಗೆ ವಿಸ್ತರಿಸಿ, ಈ ಕಾಲಾವಧಿಯೊಳಗಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು ಎಂದು ಈ ಹಿಂದೆ ಸಹ ಆದೇಶಿಸಲಾಗಿದೆ.
ಸರ್ಕಾರದ ಆದೇಶದಲ್ಲಿ ರಾಜ್ಯದ 4 ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಭವಿಷ್ಯದಲ್ಲಿ ಪಾಲ್ಗೊಳ್ಳಬಹುದಾದ ಇತರ ಪಾಲುದಾರರುಗಳನ್ನೊಳಗೊಂಡಂತೆ (ಬಿಎಂಆರ್‌ಸಿಎಲ್, ಕೆ-ರೈಡ್, ಪಾರ್ಕಿಂಗ್ ಪ್ರಾಧಿಕಾರಗಳು ಇತ್ಯಾದಿ) ಶಕ್ತಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ಮತ್ತು ಲಿಂಗ ಅಲ್ಪಸಂಖ್ಯಾತರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಉಚಿತವಾಗಿ ಒದಗಿಸುವ ಷರತ್ತಿಗೊಳಪಟ್ಟು ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ.
ಸರ್ಕಾರದ ಆದೇಶದಲ್ಲಿ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 2026-27ನೇ ಸಾಲಿನಲ್ಲಿ ಶಕ್ತಿ ಯೋಜನೆಯ ಅನುಷ್ಠಾನಕ್ಕಾಗಿ 50000 ಲಕ್ಷ ರೂ.ಗಳನ್ನು ಮುಂಗಡವಾಗಿ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸುತ್ತಾ, ಸಾರಿಗೆ ನಿಗಮಗಳಲ್ಲಿ ಏಪ್ರಿಲ್-2026ರ ಮಾಹೆಯಲ್ಲಿ ಶಕ್ತಿಯೋಜನೆಯ ವಾಸ್ತವಿಕ ವೆಚ್ಚ ಮತ್ತು ಬಿಡುಗಡೆಗೊಳಿಸಿರುವ ಅನುದಾನ ಮೊತ್ತದಲ್ಲಿನ ಒಟ್ಟಾರೆ ಕೊರತೆ ಮೊತ್ತ ರೂ.176.46 ಕೋಟಿಗಳಾಗಿದ್ದು, ಮೇ-2026ರ ಮಾಹೆಯಲ್ಲಿ ನಾಲ್ಕು ಸಾರಿಗೆ ನಿಗಮಗಳ ವಾಸ್ತವಿಕ ವೆಚ್ಚ 700 ಕೋಟಿ ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ.
ರಾಜ್ಯ ಸಾರಿಗೆ ನಿಗಮಗಳು ನಿರಂತರವಾಗಿ ನಗದು ಕೊರತೆಯನ್ನು ಅನುಭವಿಸುತ್ತಿರುವುದರಿಂದ, ನೌಕರರ ವೇತನ ಹಾಗೂ ಇತರೆ ಅತ್ಯಾವಶ್ಯಕ ತುರ್ತು ಪಾವತಿಗಳಿಗೆ ಸರ್ಕಾರವು ನೀಡುವ ಅನುದಾನದ ಮೇಲೆಯೇ ಅವಲಂಬಿತವಾಗಿವೆ. ಆದ್ದರಿಂದ, ಸರ್ಕಾರವು 2026-27ನೇ ಸಾಲಿನಲ್ಲಿ ಶಕ್ತಿ ಯೋಜನೆಗೆ ಆಯವ್ಯಯದಲ್ಲಿ ಹಂಚಿಕೆಯಾದ 5300 ಕೋಟಿ ರೂ. ಅನುದಾನವನ್ನು ನಾಲ್ಕು ಸಾರಿಗೆ ನಿಗಮಗಳಿಗೆ ಮಾಹೆಯಾನ ಮುಂಗಡವಾಗಿ ಬಿಡುಗಡೆಗೊಳಿಸುವಂತೆ ಕೋರಿದ್ದಾರೆ.
ಆ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು 04-06-2026 ರಂದು ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾರಿಗೆಗಳಲ್ಲಿ ಶಕ್ತಿ ಯೋಜನೆಯಡಿ ಮೇ-2026 ಮತ್ತು ಜೂನ್-2026ರ ಮಾಹೆಯಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ವಿತರಿಸಲಾಗಿರುವ / ವಿತರಿಸಲಾಗುವ ಶೂನ್ಯ ಟಿಕೇಟ್‌ಗಳ ವೆಚ್ಚಕ್ಕೆ 86000 ಲಕ್ಷ ರೂ.ಗಳನ್ನು (ಎಂಬತ್ತಾರು ಸಾವಿರ ಲಕ್ಷ ರೂಪಾಯಿಗಳು ಮಾತ್ರ) ಷರತ್ತುಗಳಿಗೊಳಪಟ್ಟು ಶೇಕಡವಾರು ಅನುಪಾತದನ್ವಯ ನಿಗಮವಾರು ಬಿಡುಗಡೆಗೊಳಿಸಿ ಆದೇಶಿಸಿದೆ. ಬಿಡುಗಡೆಯಾಗಿರುವ ಅನುದಾನದ ಪೂರ್ಣ ಮಾಹಿತಿ: 4 June 2026 KSRTC Shathi yojane money 860 cr
Related









