ರಾಮಲಿಂಗಾರೆಡ್ಡಿ: ರಾಜೀನಾಮೆ ವಾಪಸ್ -ಡಿಕೆಶಿ ಸರ್ಕಾರದಲ್ಲಿದ್ದ ಭಿನ್ನಮತ ಶಮನ
ನಾನಾಗಿ ಯಾವ ಖಾತೆಯನ್ನೂ ಕೇಳಿಲ್ಲ. ಖಾತೆ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ. ಸದ್ಯಕ್ಕೆ ಎಲ್ಲ ಗೊಂದಲಗಳೂ ಬಗೆಹರಿದಿವೆ -ರಾಮಲಿಂಗಾರೆಡ್ಡಿ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮನವೊಲಿಕೆ ಬಳಿಕ ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಮಲಿಂಗಾರೆಡ್ಡಿ ಅವರು ವಾಪಸ್ ಪಡೆಯುವ ಮೂಲಕ ಕೊಟ್ಟಿರುವ ಖಾತೆಯನ್ನೇ ನಿಭಾಯಿಸುವ ಸೂಚನೆ ನೀಡಿದ್ದಾರೆ.
ಸದ್ಯ ಇದು ಖಾತೆ ಹಂಚಿಕೆ ವಿಷಯವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾಗಿದ್ದ ಗೊಂದಲ, ಭಿನ್ನಮತ ಶಮನಗೊಂಡಂತಿದೆ.
ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಮನವೊಲಿಕೆ, ಸಂಧಾನದ ಬಳಿಕ ರಾಜಿನಾಮೆ ವಾಪಸ್ ಪಡೆದಿದ್ದಾರೆ.
ಹೈಕಮಾಂಡ್ ನಾಯಕ ರಣ್ದೀಪ್ ಸುರ್ಜೆವಾಲ ಅವರೊಂದಿಗೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಿನ್ನೆ ಸಿಎಂ ಜತೆ ಎಲ್ಲ ಮಾತನಾಡಿದ್ದೇನೆ. ಅವರು ನಾನು ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ, ಅಂದಮೇಲೆ ಅದು ವಾಪಸ್ ಅಂತಾನೆ ಅರ್ಥ. ಸದ್ಯಕ್ಕೆ ಯಾವ ಗೊಂದಲವೂ ಇಲ್ಲ ಎಂದು ತಿಳಿಸಿದರು.
ನಾನಾಗಿ ಯಾವ ಖಾತೆಯನ್ನೂ ಕೇಳಿಲ್ಲ. ಖಾತೆ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ. ಸದ್ಯಕ್ಕೆ ಎಲ್ಲ ಗೊಂದಲಗಳೂ ಬಗೆಹರಿದಿವೆ ಎಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.
Related









