
ಬೆಂಗಳೂರು: ಮಹಿಳೆಗೆ ತನ್ನ ಖಾಸಗಿ (ಗುಪ್ತಾಂಗ) ಭಾಗ ತೋರಿಸಿ ವಿಕೃತಿ ಮೆರೆದಿದ್ದ ಯುವಕನನ್ನು ಶಿವಾಜಿ ನಗರ ಪೊಲೀಸರು ಬಂಧಿಸಿ ಕಂಬಿಹಿಂದೆ ಬಿಟ್ಟಿದ್ದಾರೆ.
ಕಾರ್ತಿಕ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಊಟ ಮುಗಿಸಿ ಮಹಿಳೆ ಎರಡನೇ ಮಹಡಿಗೆ ಮಲಗಲು ಹೋಗುತ್ತಿದ್ದಳು. ಆ ಸಮಯದಲ್ಲಿ, ಎದುರಿನ ಮನೆಯಲ್ಲಿದ್ದ ಆರೋಪಿ ತನ್ನ ಪ್ಯಾಂಟ್ ಗುಂಡಿಗಳನ್ನು ಬಿಚ್ಚಿ ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ.
ಈ ವೇಳೆ ಮಹಿಳೆ ಅವನನ್ನು ಪ್ರಶ್ನಿಸಿದಾಗ, ಗಲಾಟೆ ಮಾಡಿದ್ದಾನೆ ಅಲ್ಲದೆ ಆತ ತನ್ನ ಗಂಡನ ಮೇಲೂ ಹಲ್ಲೆ ಮಾಡಿದ್ದಾನೆ. ಜತೆಗೆ ಈ ವೇಳೆ ಜಗಳ ಬಿಡಿಸಲು ಬಂದವರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಇನ್ನು ಈ ಘಟನೆ ಏಪ್ರಿಲ್ 13 ರಂದು ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ನಡೆದಿದೆ.
ಎರಡನೇ ಮಹಡಿಯಿಂದ ಒಂದು ಹಾಲೋ ಬ್ಲಾಕ್ ಮತ್ತು ಹೂವಿನ ಕುಂಡವನ್ನು ನೆಲ ಮಹಡಿಯಲ್ಲಿರುವವರ ಮೇಲೆ ಎಸೆದಿದ್ದಾನೆ. ಈ ವೇಳೆ ಬುದ್ಧಿ ಹೇಳಲು ಹೋದವರ ಮೇಲೂ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಏಳು ಜನರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸದ್ಯ ಈಗ ಶಿವಾಜಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕಾರ್ತಿಕ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಚಾರಣೆ ವೇಳೆ ಆತ ನಾನು ಮೂತ್ರ ವಿಸರ್ಜನೆ ಮಾಡುತ್ತಿದ್ದೆ ಆ ಸಮಯದಲ್ಲಿ ಮಹಿಳೆ ಬಂದಿದ್ದಾಳೆ. ಆಗ ಗಲಾಟೆ ನಡೆದಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.