ಹಾಸನ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಬಸ್‌ನಲ್ಲೇ ಮಗು ಜನಿಸಿದ್ದು ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ವಸಂತ ಹೇಳಿದ್ದಾರೆ.
ಚನ್ನರಾಯಪಟ್ಟಣ-ಹಾಸನ ಮಾರ್ಗವಾಗಿ ಬಸ್ ಚಲಿಸುತಿತ್ತು ಈ ವೇಳೆ ಮಾರ್ಗಮಧ್ಯೆಯೇ ಮಹಿಳೆ ಬಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ವಿವರ: ಕೂಲಿ ಕೆಲಸಕ್ಕೆಂದು ಮೂಡುಗೆರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಸೋಮವಾರ ಮಹಿಳೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಮಹಿಳೆಗೆ ಬಸ್‌ನಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಬಸ್ ಅನ್ನು ನಿಲ್ಲಿಸಿದ್ದಾರೆ. ಬಳಿಕ ಬಸ್‌ನ ನಿರ್ವಾಹಕಿ ವಸಂತ ಅವರು ಗರ್ಭಿಣಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.
ಮಹಿಳೆ ಬಸ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಳಿಕ ಅಂಬುಲೆನ್ಸ್‌ಗೆ ಕರೆ ಮಾಡಿ ತಾಯಿ ಹಾಗೂ ಮಗುವನ್ನು ಶಾಂತಿಗ್ರಾಮದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಬಳಿಕ ಬಸ್‌ನ ಚಾಲಕ, ನಿರ್ವಾಹಕರು ಹಾಗೂ ಪ್ರಯಾಣಿಕರು ಆಸ್ಪತ್ರೆಗೆ ತೆರಳಿ ಮಹಿಳೆಗೆ ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಸರಿಯಾದ ಸಮಯದಲ್ಲಿ ಮಹಿಳೆಗೆ ಬಸ್‌ನಲ್ಲಿಯೇ ಹೆರಿಗೆ ಮಾಡಿಸಿ, ಆಸ್ಪತ್ರೆಗೆ ದಾಖಲಿಸಿ, ಆಕೆಗೆ ಹಣದ ಸಹಾಯ ಮಾಡಿರುವ ಬಸ್ ಚಾಲಕ – ನಿರ್ವಾಹಕಿ ಹಾಗೂ ಪ್ರಯಾಣಿಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಬಡತನದ ಬೇಗೆಯಲ್ಲಿ ತಾನು ತುಂಬು ಗರ್ಭಿಣೆ ಎಂಬುದನ್ನು ಲೆಕ್ಕಿಸದೆ ತುತ್ತು ಕೂಳಿಗಾಗಿ ದೂರದೂರಿಗೆ ಕೂಲಿ ಅರಸಿ ಪ್ರಯಾಣಬೆಳೆಸಿದ ಮಹಿಳೆಯ ಸ್ವಾಭಿಮಾನವನ್ನು ಇಲ್ಲಿ ನಾವು ಸ್ಮರಿಸಲೇಬೇಕಿದೆ. ಇಂಥ ದಿಟ್ಟ ಮಹಿಳೆಯರು ನಾಡಿಗೆ ಹೆಮ್ಮೆ ಎಂದೇ ಹೇಳಬಹುದು.