ನ್ಯೂಡೆಲ್ಲಿ: ಪ್ರಪಂಚವನ್ನೇ ಎಡೆಬಿಡದೆ ಕಾಡುತ್ತಿದರುವ ಕೊರೊನಾ ಸೋಂಕಿಗೆ ಭಾರತದಲ್ಲಿ ಇದುವರೆಗೆಗೆ 7 ಬಲಿಯಾಗಿವೆ. ಭಾನುವಾರ ಬೆಳಗ್ಗೆ ಮಹಾರಾಷ್ಟ್ರದಲ್ಲಿ, ಮಧ್ಯಾಹ್ನದ ವೇಳೆಗೆ ಬಿಹಾರ ಮತ್ತು ಗುಜರಾತ್‌ನಲ್ಲಿ ಒಬ್ಬೊಬ್ಬರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಮುಂಬೈನಲ್ಲಿ 65 ವರ್ಷದ ಮಹಿಳೆ, ಬಿಹಾರದ ಪಾಟ್ನಾದಲ್ಲಿ 63ವರ್ಷದ ಮತ್ತು ಗುಜರಾತಿನ ಸೂರತ್ ಮೂಲದ 67ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ. ಇವರು ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಕೊರೋನಾ ಶಂಕಿತರನ್ನು ಆಸ್ಪತ್ರೆಯಲ್ಲಿರಿಸಿ ನಿಗಾ ವಹಿಸಲು ಸಾಧ್ಯವಾಗದ ಕಾರಣ ಅವರನ್ನು ಮನೆಯಲ್ಲೇ ಇರಿಸಿ, 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಮನೆಯಲ್ಲೇ ಸ್ವನಿರ್ಬಂಧಕ್ಕೆ ಆದೇಶಿಸಲಾಗಿರುವ ಕೊರೋನಾ ಶಂಕಿತರ ಕೈ ಮೇಲೆ ಕ್ವಾರಂಟೈನ್ ಸ್ಟಾಂಪ್ ಹಾಕಲು ಸರ್ಕಾರ ಆದೇಶ ಹೊರಡಿಸಿದೆ.
ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾ.22 ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಒಂದು ದಿನ ಜನಸಂಪರ್ಕ ತಡೆಯುವ ಮೂಲಕ ವೈರಸ್ ಹರಡುವಿಕೆ ತಡೆಯುವುದು ಜನತಾ ಕರ್ಫ್ಯೂ ಉದ್ದೇಶವಾಗಿತ್ತು. ಪ್ರಧಾನ ಮಂತ್ರಿಯ ಕರೆಗೆ ಇಡೀ ದೇಶವೇ ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇಶದಲ್ಲಿ ಇಂದಿನವರೆಗೆ (ಮಾ22) ಮೃತಪಟ್ಟರು
ನ್ಯೂಡೆಲ್ಲಿ– 1
ಕರ್ನಾಟಕ– 1
ಮಹಾರಾಷ್ಟ್ರ– 2
ಪಂಜಾಬ್ – 1
ಗುಜರಾತ್ – 1
ಬಿಹಾರ್– 1