CRIMENEWSನಮ್ಮರಾಜ್ಯ

KSRTC ಮೈಸೂರು: ಆಕಸ್ಮಿಕವಾಗಿ ಮನೆ ಮೇಲಿಂದ ಬಿದ್ದು ಮೃತಪಟ್ಟ ನೌಕರನ ಕುಟುಂಬಕ್ಕೆ ಸಿಗುವ ₹1 ಕೋಟಿ ವಿಮೆಯಲ್ಲಿ ₹20 ಲಕ್ಷಕ್ಕೆ ಬೇಡಿಕೆ ಇಟ್ಟ  ನೀಚ ಮುಖಂಡರು

ನೊಂದವರಿಗೆ ಹೆಗಲು

ಮೈಸೂರು: ಮನೆಯ ಮೇಲೆ ಇಟ್ಟಿದ್ದ ನೀರಿನ ಟ್ಯಾಂಕ್‌ ತುಂಬಿದಿದೆಯೆ ಎಂದು ನೋಡಲು ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಮನೆಯ ಮೇಲಿದ್ದ ಬಿದ್ದು ಮೃತಪಟ್ಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರನ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ವಿಮೆ ಮೊತ್ತ ಸಿಗಲಿದೆ.

ಆದರೆ, ಸಾರಿಗೆ ಸಂಸ್ಥೆಯ ನೌಕರರ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡಿರುವ ಕೆಲ ನೀಚರು ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ನೌಕರನ ಕುಟುಂಬಸ್ಥರಿಗೆ ಶಾಂತ್ವನ ಹೇಳುವ ನೆಪದಲ್ಲಿ ಹೋಗಿ ಆ ನೌಕರನ ಕುಟುಂಬಕ್ಕೆ ಬರುವ1 ಕೋಟಿ ರೂಪಾಯಿ ಪರಿಹಾರ ವಿಮೆ ಮೊತ್ತದಲ್ಲಿ ಶೇ.20-25ರಷ್ಟು ಹಣವನ್ನು ಅಂದರೆ 20 ರಿಂದ 25ಲಕ್ಷ ರೂಪಾಯಿವರೆಗೆ ನಮಗೆ ಕಮಿಷನ್‌ಕೊಟ್ಟರೆ ಅತೀ ಶೀಘ್ರವಾಗಿ ಈ ವಿಮೆ ಹಣ ಬರುವಂತೆ ಜತೆಗೆ ಅಧಿಕಾರಿಗಳಿಂದ ತುರ್ತಾಗಿ ನಿಮ್ಮ ಕೆಲಸ ಮಾಡಿಸಿಕೊಡುತ್ತೇವೆ ಎಂದು ಹೇಳಿ ದುಂಬಾಲು ಬಿದ್ದಾರೆ.

ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ಭಾಗದಲ್ಲಿ ಡ್ಯೂಟಿ ಮಾಡುತ್ತಿದ್ದ ನೌಕರನೊಬ್ಬ ಈ ಅಪಘಾತದಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇದು ಸುಮಾರು ಒಂದು ತಿಂಗಳ ಹಿಂದೆ ಜರುಗಿರುವ ಘಟನೆ. ಆದರೆ, ಆ ನೌಕರನ ಕುಟುಂಬಕ್ಕೆ ಸಂಸ್ಥೆ ಮತ್ತು ಬ್ಯಾಂಕ್‌ ನಡುವೆ ಆಗಿರುವ ಒಪ್ಪಂದದಂತೆ ಪರಿಹಾರ ವಿಮೆ ಮೊತ್ತ 1ಕೋಟಿ ರೂಪಾಯಿ ಬರಬೇಕಿದೆ.

ಈ ಒಂದು ಕೋಟಿ ರೂಪಾಯಿಯಲ್ಲಿ ಈ ಕಿಡಿಗೇಡಿಗಳು 20ರಿಂದ25 ಲಕ್ಷ ರೂಪಾಯಿ ಲಪಟಾಯಿಸಲು ಮುಗ್ದ ಕುಟುಂಬಸ್ಥರನ್ನು ಯಾಮಾರಿಸುವ ಪ್ಲಾನ್‌ ಮಾಡಿಕೊಂಡು ಅವರ ಮನೆಗೆ ಹೋಗುವುದು ಬರುವುದು ಮಾಡುತ್ತಿದ್ದಾರೆ.

ಅಲ್ಲದೆ ಈ ಮೈಸೂರು ಭಾಗದ ಒಬ್ಬ ಅಧಿಕಾರಿಗಳ ಚೇಳ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರು ತುಂಬ ಆಪ್ತರು ಎಂದು ಹೇಳಿಕೊಂಡು ಡ್ಯೂಟಿಯನ್ನೇ ಮಾಡದೆ ತಿಂಗಳಿಗೆ ಸರಿಯಾಗಿ ಸಂಬಳ ಪಡೆಯುತ್ತಿರುವ ನೀಚ  ಈ ಕಿಡಿಗೇಡಿಗಳ ಜತೆ ಕೈ ಜೋಡಿಸಿ ಇದರಲ್ಲಿ ಭಾಗಿದಾರನಾಗಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಗನ, ಪತಿಯ, ಅಪ್ಪನ ಕಳೆದುಕೊಂಡಿರುವ ಕುಟುಂಬದ ಎಲ್ಲ ಸದಸ್ಯರು ದುಃಖದಲ್ಲಿದ್ದಾರೆ.  ಈ ವೇಳೆ ಈ ಕುಟುಂಬಕ್ಕೆ ಸಂಸ್ಥೆಯಿಂದ ಏನು ಸೌಲಭ್ಯ ಸಿಗಬೇಕೋ ಅದನ್ನು ಕೊಡಿಸುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಘಟನೆಯೊಂದರ ಮುಖಂಡರು ಈ ರೀತಿ ಸಾವಿನ ಮನೆಯಲ್ಲಿ ಹಣಮಾಡಿಕೊಳ್ಳುವುದಕ್ಕೆ ಹವಣಿಸುತ್ತಿದ್ದಾರೆ ಎಂದರೆ ಇಂಥ ನೀಚರಿಗೆ ಏನು ಮಾಡಬೇಕು?

ಇನ್ನು ಕಾನೂನಾತ್ಮವಾಗಿ ಏನನ್ನು ತಿಳಿಯದ ಕುಟುಂಬ ಈ ದುರುಳರು ಇಟ್ಟಿರುವ 20-25 ಲಕ್ಷ ರೂಪಾಯಿ ಬೇಡಿಕೆಗೆ ಒಪ್ಪಿದೆ ಎಂದು ತಿಳಿದು ಬಂದಿದೆ. ಹೌದು ಈ ನೀಚರು ಈ ರೀತಿ ಮಾಡುತ್ತಿದ್ದಾರೆ ಎಂದರೆ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುವುದು ಕೂಡ ಹಲವು ಅನುಮಾನನಗಳಿಗೆ ಎಡೆಮಾಡಿಕೊಡುತ್ತಿದೆ.

ಸಂಸ್ಥೆಯಲ್ಲಿ ಡ್ಯೂಟಿ ಮಾಡುತ್ತಿದ್ದ ಒಬ್ಬ ನೌಕರ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ ಎಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹೋಗಿ ನಡೆದ ಘಟನೆಯ ವಿವರವನ್ನು ಕಲೆಹಾಕಿ ಬಳಿಕ ಆ  ಕುಟುಂಬದವರಿಗೆ ಬರಬೇಕಿರುವ ವಿಮೆ ಪರಿಹಾರ ಮೊತ್ತವನ್ನು ಬ್ಯಾಂಕ್‌ನಿಂದ ಕೊಡಿಸುವ ಬಗ್ಗೆ ಕಾಳಜಿ ವಹಿಸಿಲ್ಲವೇ? ಜತೆಗೆ ನೀವು ಯಾರಿಗೂ ಒಂದು ರೂಪಾಯಿಯನ್ನು ಕೊಡಬೇಡಿ ಇದು ಅಪಘಾತ ವಿಮೆಯಡಿ ನಿಮಗೆ 1ಕೋಟಿ ಪರಿಹಾರ ಸಿಗುತ್ತದೆ ಎಂಬ ಬಗ್ಗೆ ತಿಳಿವಳಿಕೆ ನೀಡಿಲ್ಲವೆ?

ಒಂದು ವೇಳೆ ಅಧಿಕಾರಿಗಳು ಹೋಗಿ ತಿಳಿವಳಿಕೆ ನೀಡಿದ್ದರೆ ಆ ಕುಟುಂಬ ಈ ನೀಚರ ಬೇಡಿಕೆಗೆ ಏಕೆ ಸ್ನ್ನುಪಂದಿಸುತ್ತಿತ್ತು.  ಇದನ್ನು ಗಮನಿಸಿದರೆ ಈ ಅಧಿಕಾರಿಗಳು ಕೂಡ ಈ ಕಿಡಿಗೇಡಿಗಳ ಜತೆ ಸೇರಿಕೊಂಡಿದ್ದಾರೆ ಎಂಬ ಅನುಮಾನ ಇನ್ನಷ್ಟು ಹೆಚ್ಚಾಗುತ್ತಿದೆ. ಒಂದು ವೇಳೆ ಅಧಿಕಾರಿಗಳು ಈ ನೀಚರ ಜತೆ ಕೈ ಜೋಡಿಸಿರುವುದ ಆಗಿದ್ದರೆ ಅವರನ್ನು ಮೊದಲು ಕೆಲಸದಿಂದ ವಜಾ ಮಾಡಬೇಕು. ಅಲ್ಲದೆ ಈ ರೀತಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಸಂಘಟನೆಯನ್ನು ರದ್ದು ಮಾಡಬೇಕು ಜತೆಗೆ ಆ ಸಂಘಟನೆಯ ಮುಖಂಡರನ್ನು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳಪಡಿಸಲು ಸಾರಿಗೆ ಸಚಿವರು ತನಿಖೆ ನಡೆಸಬೇಕು ಎಂಬುವುದು ವಿಜಯಪಥದ ಮನವಿ ಕೂಡ ಆಗಿದೆ.

ಯಾರಿಗೆ ಅಪಘಾತ ವಿಮೆ ಪರಿಹಾರ ಸಿಗುತ್ತದೆ?: ವಾಹನದಿಂದಾಗುವ ಅಪಘಾತ, ಮನೆ, ಮರದ ಮೇಲಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟರೆ, ಹಾವು ಕಡಿದು ಮೃತಪಟ್ಟರು, ಗ್ಯಾಸ್‌ ಗೀಸರ್‌ನಿಂದ ಎಂಬುವುದು ಸೇರಿದಂತೆ ಇತರೆ ಅಫಘಾತ ಎಂದು ದೃಢಪಡುವ ಎಲ್ಲ ಪ್ರಕರಣಗಳಿಗೂ ವಿಮೆ ಮೊತ್ತ ಒಂದು ಕೋಟಿ ರೂಪಾಯಿ ಸಿಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ವಿಜಯಪಥಕ್ಕೆ ತಿಳಿಸಿದ್ದಾರೆ.

ಹೀಗಾಗಿ ಏನು ಮನೆಯ ಮೇಲಿಂದ ಆಕಸ್ಮಿಕವಾಗಿ ಬಿದ್ದು ನೌಕರ ಮೃತಪಟ್ಟಿದ್ದಾನೋ ಅವರ ಕುಟುಂಬದವರು ಈ ನೀಚರಿಗೆ 20-25 ಲಕ್ಷ ರೂ.ಗಳನ್ನು ಯಾವುದೇ ಕಾರಣಕ್ಕೂ ಕೊಡಬೇಡಿ. ಜತೆಗೆ ನೀವು ಕೂಡ ಕಾನೂನಿನ ಅರಿವು ಪಡೆದುಕೊಳ್ಳಿ ಎಂಬುವುದು ನಮ್ಮ ಕಾಳಜಿ.

Megha
the authorMegha

Leave a Reply

error: Content is protected !!
Latest news
KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ... ಸಾರಿಗೆ ನೌಕರರಿಗೆ ಸಮಾನ ವೇತನ ಸೇರಿದಂತೆ 3 ಬೇಡಿಕೆಗಳ ಈಡೇರಿಕೆಗೆ ಕೂಟ ಒತ್ತಾಯ: ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್‌ಗೆ ಮ... ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಇಂದಿನಿಂದ ಎರಡು ತಿಂಗಳ ಕಾಲ: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಬರಲಿದ್ದಾರೆ ಇಲಾಖಾ ಸಿಬ್ಬಂದಿ KSRTC: 50 ಹೊಸ ಬಸ್ ನೀಡಿ ಜತೆಗೆ ಆರ್‌ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ: ಸಾರಿಗೆ ಸಚಿವರಿಗೆ ರಾಜಣ್ಣ ಮ... ದಂಪತಿಗಳ ಏಕಾಂತದಿಂದ ಕಾಂತಿಯುತ ತ್ವಚೆ, ಯುವಕರಾಗಿಡುವ ಮೋಡಿ ಅಡಗಿದೆ! ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ