KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತೆಗೆ ಜಮೆ
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಿಗೆ ನೌಕರರಿಗೆ ಕೇವಲ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ, ಹಿಂದಿನ ಸರ್ಕಾರ ಮಾಡಿದ್ದ ಶೇ.15ರಷ್ಟು ವೇತನ ಪರಿಷ್ಕರಣೆಗಿಂತ ಶೇ.2.5ರಷ್ಟು ಕಡಿಮೆ ಮಾಡುವ ಮೂಲಕ ನೌಕರರಲ್ಲಿ ಅಸಮಾಧಾನ ಮೂಡಿಸಿದ್ದರು. ಆ ಬಳಿಕ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ.

ಬೆಂಗಳೂರು: ಸರ್ಕಾರ ಮೇ 12ರಂದು ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ ನಾಲ್ಕೂ ಸಾರಿಗೆ ನಿಗಮದ ನೌಕರರಿಗೆ ಇಂದಿನಿಂದ ಅಂದರೆ 01-07-2026 ರಿಂದ ಶೇ.12.50 ರಷ್ಟು ವೇತನ ಹೆಚ್ಚಳ ಜಾರಿಯಾಗಿದ್ದು, ಈ ಜುಲೈ ತಿಂಗಳ ವೇತನದೊಂದಿಗೆ ಈ ಹೊಸ ವೇತನ ಆಗಸ್ಟ್‌ನಲ್ಲಿ ನೌಕರರ ಖಾತೆಗೆ ಜಮೆ ಆಗಲಿದೆ.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಿಗೆ ನೌಕರರಿಗೆ ಕೇವಲ ಶೇ.12.5ರಷ್ಟು ವೇತನ ಹೆಚ್ಚಳ ಮಾಡಿ, ಹಿಂದಿನ ಸರ್ಕಾರ ಮಾಡಿದ್ದ ಶೇ.15ರಷ್ಟು ವೇತನ ಪರಿಷ್ಕರಣೆಗಿಂತ ಶೇ.2.5ರಷ್ಟು ಕಡಿಮೆ ಮಾಡುವ ಮೂಲಕ ನೌಕರರಲ್ಲಿ ಅಸಮಾಧಾನ ಮೂಡಿಸಿದ್ದರು. ಆ ಬಳಿಕ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ.
ಹೌದು! ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಪರಿಷ್ಕರಣೆ 2026ರ ಮೇ 12ರಂದು ಆಗಿದ್ದು, ಶೇ.12.5 ಹೆಚ್ಚಳವಾಗಿದೆ. ಸರ್ಕಾರಿ ನೌಕರರಿಗಿಂತ ಶೇ.40-45ರಷ್ಟು ಕಡಿಮೆ ವೇತನವನ್ನು ಸಾರಿಗೆ ನೌಕರರು ಪಡೆಯುತ್ತಿದ್ದರೂ ಈ ಆದೇಶ ನೌಕರರಿಗೆ ನ್ಯಾಯಕೊಡದ ತಾರತಮ್ಯತೆಯಿಂದ ಕೂಡಿದ ಆದೇಶವಾಗಿದೆ.
ಇನ್ನು ನಾಲ್ಕೂ ನಿಗಮಗಳ ನೌಕರರ ವೇತನ ನಿಯಮಿತವಾಗಿ ಪರಿಷ್ಕರಣೆಯಾಗುತ್ತಿತ್ತು. ಆದರೆ, 2020ರಲ್ಲಿ ಬಂದ ಕೊರೊನಾದಿಂದಾಗಿ ಅಂದಿನ ಬಿಜೆಪಿ ಸರ್ಕಾರ 2020ರ ಜನವರಿ 1 ಮಾಡಬೇಕಿದ್ದ ನೌಕರರ ವೇತನ ಪರಿಷ್ಕರಣೆಗೆಯನ್ನು 2023ರ ಮಾರ್ಚ್ ವೇತನಕ್ಕೆ ಶೇ.15ರಷ್ಟು ವೇತನ ಸೇರಿಸಿ ಕೊಟ್ಟಿತ್ತು.
ಇದೇ ಕಾಂಗ್ರೆಸ್ ಸರ್ಕಾರ 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶೇ.12.5ರಷ್ಟು ವೇತನ ವೇತನ ಪರಿಷ್ಕರಣೆ ಮಾಡಿದ್ದು, ಈ ಪರಿಷ್ಕಣೆಯಿಂದ ನೌಕರರು 15 ತಿಂಗಳುಗಳ ವೇತನ ಹೆಚ್ಚಳವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ನೌಕರರಿಗೆ ಲಕ್ಷಾಂತ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ಈ ಶೇ.12.5ರಷ್ಟು ವೇತನ ಪರಿಷ್ಕರಣೆ ಮಾಡಿ 2 ತಿಂಗಳು ಕಳೆದಿದ್ದು, ಶೇ.12.5ರಷ್ಟು ವೇತನ ಪರಿಷ್ಕರಣೆಗೊಂಡಿರುವುದು ಇದೇ ಜುಲೈ ತಿಂಗಳಿನ ವೇತನದೊಂದಿಗೆ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಬೇಕು ಎಂದು ಆದೇಶದಲ್ಲೇ ಸ್ಪಷ್ಟವಾಗಿ ಸೂಚಿಸಲಾಗಿದೆ.
ನೌಕರರು ಈಗಲೂ ಸಹ ಈ ಶೇ.12.5ರಷ್ಟು ವೇತನ ಪರಿಷ್ಕರಣೆ ಆಗಿರುವುದನ್ನು ಒಪ್ಪುತ್ತಿಲ್ಲ ನಮಗೆ ಸರ್ಕಾರಿ ನೌಕರರ ಮಾದರಿಯಲ್ಲಿ ವೇತನ ಹೆಚ್ಚಳ ಮಾಡಿ, ಕನಿಷ್ಠ ವೇತನದ ಪರಿಷ್ಕರಣೆ ಮತ್ತು ಬಾಕಿ ವೇತನ (Arrears) ಪಾವತಿ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಅಲ್ಲದೇ ನೌಕರರು 7ನೇ ವೇತನ ಆಯೋಗದ ಮಾದರಿಯಲ್ಲಿ ಕನಿಷ್ಠ ವೇತನ ರೂ. 36,000ಕ್ಕೆ ಏರಿಕೆ ಮಾಡಲು ಒತ್ತಾಯಿಸುತ್ತಿದ್ದಾರೆ. ಇನ್ನು ಜಂಟಿ ಕ್ರಿಯಾ ಸಮಿತಿ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸುತ್ತಿದ್ದು, ಈಗ ಇದರಲ್ಲೂ ಸ್ವಪ್ಲ ಬಿಟ್ಟುಕೊಡುತ್ತೇವೆ ಸರ್ಕಾರ ನಮ್ಮ ಸಭೆ ಕರೆಯಬೇಕು ಎಂದು ಹೇಳುತ್ತಿದ್ದಾರೆ. ಈ ನಡುವೆ ಕಾರ್ಮಿಕ ಆಯುಕ್ತರ ಬಳಿ ರಾಜೀಸಂಧಾನ ಸಭೆ ನಡೆಯುತ್ತಿದ್ದು, ಅದು ಮುಂದೂಡಿಕೆ ಆಗುತ್ತಲೇ ಇದೆ. ಹೀಗೆ ಮುಂದೂಡಿಕೆ ಆಗುತ್ತಿರುವುದರಿಂದ ನೌಕರರಿಗೆ ನ್ಯಾಯಸಿಗುವುದು ಕಷ್ಟಸಾಧ್ಯವಾಗಿದೆ.
12-05-2026ರ ಸರ್ಕಾರದ ಆದೇಶದಲ್ಲಿ ಏನಿದೆ?: ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ, 1950ರ ಸೆಕ್ಷನ್ 34(1)ರನ್ವಯ 01.04.2025ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿ/ ನೌಕರರ ವೇತನ ಪರಿಷ್ಕರಣೆಗೆ ನಿಬಂಧನೆಗೊಳಪಟ್ಟು ಸರ್ಕಾರವು ಅನುಮೋದನೆ ನೀಡಿ ಆದೇಶಿಸಿದೆ.
1. ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿಗಳು/ ನೌಕರರು 31.03.2025 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.12.50 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿ ಪರಿಷ್ಕರಿಸಬೇಕು.
2. ಪೂರ್ವ ಕಿಂಕೋ ನೌಕರರು ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳ ಅರ್ಹ ಅಧಿಕಾರಿ/ ನೌಕರರ ಉನ್ನತ ವೇತನ ಶ್ರೇಣಿ, ಮಧ್ಯಂತರ (Selection Grade) ವೇತನ ಶ್ರೇಣಿಗಳು ಸೇರಿದಂತೆ ಪ್ರಸ್ತುತ ಇರುವ ಎಲ್ಲ ವೇತನ ಶ್ರೇಣಿಗಳನ್ನು ಶೇ.12.50ರಷ್ಟು ಹೆಚ್ಚಿಸಿ ಅದಕ್ಕನುಗುಣವಾಗಿ ಪರಿಷ್ಕರಿಸಬೇಕು.
3. ಈ ವೇತನ ಪರಿಷ್ಕರಣೆಯನ್ನು 01.07.2026ರ ಮಾಹೆಯ ವೇತನದಲ್ಲಿ ಅನುಷ್ಠಾನಗೊಳಿಸಿ ಎಲ್ಲ ಅರ್ಹ ಅಧಿಕಾರಿ ಮತ್ತು ನೌಕರರಿಗೆ ಪಾವತಿಸಬೇಕು.
4. 1.04.2025 ರಿಂದ 30.06.2026ರ ಅವಧಿಯ ವೇತನ ಪರಿಷ್ಕರಣೆ ಹಿಂಬಾಕಿಯನ್ನು ಮುಂದಿನ ದಿನಗಳಲ್ಲಿ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಹಂತ ಹಂತವಾಗಿ ಪಾವತಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.







