NEWSVideosನಮ್ಮರಾಜ್ಯ

ಕೊರಟಗೆರೆ: ಸರ್ಕಾರಿ ಬಸ್‌ನಲ್ಲಿ ಪುಟ್ಟ ಮಗು ಅಸ್ವಸ್ಥ- ಪ್ರಾಣ ಉಳಿಸಲು ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋದ ಚಾಲಕ ಶರಣಪ್ಪ

ಇದು ಬಿಎಂಟಿಸಿ ಘಟಕ-45 ರ ಚಾಲಕ ಶರಣಪ್ಪ ಎಂಬುವರು ಈ ಮಾನವೀಯ ಕಾರ್ಯ ಮಾಡುವ ಮೂಲಕ 2-3 ವರ್ಷ ಮಗುವಿನ ಜೀವನ ಉಳಿಸಿದ್ದಾರೆ. ಈಗಾಗಿ ಚಾಲಕರ ಬಗ್ಗೆ ಅದೇ ಬಸ್ಸಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬರು ಪ್ರಯಾಣಿಕರು ವಿಡಿಯೋ ಮಾಡುವ ಮೂಲಕ ಚಾಲಕರಿಗೆ ಧನ್ಯವಾದಗಳು ತಿಳಿಸಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಕೊರಟಗೆರೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( BMTC) ಬಸ್‌ ಬೆಂಗಳೂರು – ಪಾವಗಡ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾಗ ಕೊರಟಗೆರೆ ಸಮೀಪದಲ್ಲಿ ಬಸ್ಸಿನಲ್ಲಿದ್ದ ಒಂದು ಮಗುವಿಗೆ ಫಿಟ್ಸ್ ಬಂದು ಹುಷಾರು ತಪ್ಪಿದ ಕಾರಣ ಅಲ್ಲೇ ಸ್ಥಳೀಯ ಆಸ್ಪತ್ರೆಗೆ ಬಸ್ ತೆಗೆದುಕೊಂಡು ಹೋಗಿ ಆ ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಅಡ್ಮಿಟ್ ಮಾಡಿ ಚಾಲಕರು ಮಾನವೀಯತೆ ಮೆರೆದಿದ್ದಾರೆ.

ಇದು ಬಿಎಂಟಿಸಿ ಘಟಕ-45 ರ ಚಾಲಕ ಶರಣಪ್ಪ ಎಂಬುವರು ಈ ಮಾನವೀಯ ಕಾರ್ಯ ಮಾಡುವ ಮೂಲಕ 2-3 ವರ್ಷ ಮಗುವಿನ ಜೀವನ ಉಳಿಸಿದ್ದಾರೆ. ಈಗಾಗಿ ಚಾಲಕರ ಬಗ್ಗೆ ಅದೇ ಬಸ್ಸಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬರು ಪ್ರಯಾಣಿಕರು ವಿಡಿಯೋ ಮಾಡುವ ಮೂಲಕ ಚಾಲಕರಿಗೆ ಧನ್ಯವಾದಗಳು ತಿಳಿಸಿದ್ದಾರೆ.

ಹೌದು! ಸಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಂಡು, ಮಾನವೀಯತೆ ಮೆರೆದ BMTC ಚಾಲಕರು ತೀವ್ರ ಅಸ್ವಸ್ಥಗೊಂಡಿದ್ದ ಮಗುವಿನ ಪ್ರಾಣ ಉಳಿಸುವ ಮೂಲಕ ಸಾರ್ವಜನಿಕರ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

​ಇಂದು ಬಿಎಂಟಿಸಿ ಘಟಕ 45ರ ಬಸ್ ಬೆಂಗಳೂರಿನಿಂದ ಪಾವಗಡ ಮಾರ್ಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಬಸ್‌ನಲ್ಲಿ ಪ್ರಯಾಣಿಕರು ತಮ್ಮ ತಮ್ಮ ನಿಲ್ದಾಣಗಳನ್ನು ತಲುಪುವ ಧಾವಂತದಲ್ಲಿದ್ದರು. ಬಸ್ ಕೊರಟಗೆರೆಯಿಂದ ಮುಂದೆ ಬರುತ್ತಿದ್ದಂತೆ ಈ ಅನಿರೀಕ್ಷಿತ ಘಟನೆಯೊಂದು ನಡೆದಿದೆ.

ಅದು ​ಬಸ್‌ನಲ್ಲಿದ್ದ ಕೇವಲ ಎರಡರಿಂದ ಮೂರು ವರ್ಷದ ಪುಟ್ಟ ಮಗುವಿಗೆ ದಿಢೀರನೆ ಫಿಟ್ಸ್ (ಮೂರ್ಛೆ ರೋಗ) ಕಾಣಿಸಿಕೊಂಡಿದೆ. ಮಗು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ, ದೇಹ ನಡುಗಲು ಆರಂಭಿಸಿದಾಗ ತಾಯಿ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಸ್‌ನಲ್ಲಿ ಕ್ಷಣಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

​ಮಗುವಿನ ಪರಿಸ್ಥಿತಿಯನ್ನು ಕಂಡು ಗಾಬರಿಯಾದ ಪ್ರಯಾಣಿಕರೊಬ್ಬರು ತಕ್ಷಣವೇ ಚಾಲಕ ಶರಣಪ್ಪ ಅವರ ಬಳಿ ಬಂದು ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಂತೆ ಅತ್ಯಂತ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಚಾಲಕ ಶರಣಪ್ಪ ಕ್ಷಣಾರ್ಧದಲ್ಲಿ ಅರಿತುಕೊಂಡು (​ಸಾಮಾನ್ಯವಾಗಿ ನಿಗದಿತ ಮಾರ್ಗ ಬಿಟ್ಟು ಬಸ್ ಚಲಾಯಿಸಲು ನಿಯಮಗಳಿವೆ). ಆ ಕ್ಷಣದಲ್ಲಿ ಶರಣಪ್ಪ ಅವರು ನಿಯಮಗಳಿಗಿಂತ ಮಗುವಿನ ಜೀವ ಮುಖ್ಯ ಎಂದು ಅರಿತು, ಅವರು ಕಿಂಚಿತ್ತೂ ತಡಮಾಡದೆ, ಬಸ್ ಅನ್ನು ನೇರವಾಗಿ ಆಸ್ಪತ್ರೆಯತ್ತ ತಿರುಗಿಸಿದರು.

​ಅಲ್ಲಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ತಲುಪಲು ಶರಣಪ್ಪ ಅವರು ಅತ್ಯಂತ ಜಾಗರೂಕತೆಯಿಂದ ಮತ್ತು ಅಷ್ಟೇ ವೇಗವಾಗಿ ಬಸ್ ಚಲಾಯಿಸಿದರು. ರಸ್ತೆಯ ಟ್ರಾಫಿಕ್ ಹಾಗೂ ಸಮಯದ ಮಿತಿಯ ನಡುವೆಯೂ ಸುರಕ್ಷಿತವಾಗಿ ಆಸ್ಪತ್ರೆಯ ಆವರಣಕ್ಕೆ ಬಸ್ ತಂದು ನಿಲ್ಲಿಸಿದರು.

​ಬಸ್ ಆಸ್ಪತ್ರೆಗೆ ತಲುಪುತ್ತಿದ್ದಂತೆ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಕೂಡ ತಕ್ಷಣವೇ ಸ್ಪಂದಿಸಿದರು. ಪರಿಸ್ಥಿತಿ ಅರಿತು ಮಗುವನ್ನು ತಕ್ಷಣವೇ ಚಿಕಿತ್ಸಾ ಘಟಕಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ವೈದ್ಯಕೀಯ ಆರೈಕೆ ಮಾಡಿದರು.

​ವೈದ್ಯರ ಸಕಾಲಿಕ ಚಿಕಿತ್ಸೆಯಿಂದಾಗಿ ಮಗು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. “ಇನ್ನೂ ಸ್ವಲ್ಪ ತಡವಾಗಿದ್ದರೂ ಮಗುವಿನ ಜೀವಕ್ಕೆ ಅಪಾಯವಾಗುವ ಸಂಭವ ಹೆಚ್ಚಾಗಿತ್ತು.

​ಚಾಲಕ ಶರಣಪ್ಪ ಅವರ ಈ ಸಮಯಪ್ರಜ್ಞೆ ಮತ್ತು ಮಾನವೀಯ ನಡೆಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಮನಸಾರೆ ಶ್ಳಾಗಿಸಿದ್ದಾರೆ. “ಸೇವೆಯ ಜತೆಗೆ ಮಾನವೀಯತೆಯೇ ದೊಡ್ಡದು ಎಂಬುದನ್ನು ಶರಣಪ್ಪ ಅವರು ಸಾಬೀತುಪಡಿಸಿದ್ದಾರೆ” ಎಂದು ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

​ನಿಗದಿತ ಕರ್ತವ್ಯದ ನಡುವೆಯೂ ಒಂದು ಪುಟ್ಟ ಮಗುವಿನ ಪ್ರಾಣ ಉಳಿಸಲು ಶ್ರಮಿಸಿದ ಬಿಎಂಟಿಸಿ ಚಾಲಕ ಶರಣಪ್ಪ ಅವರ ಕಾರ್ಯವು ಸಾರಿಗೆ ಸಂಸ್ಥೆಗೆ ಹೆಮ್ಮೆಯಾಗಿದೆ. ಅವರ ಈ ನಿಸ್ವಾರ್ಥ ಸೇವೆಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

Deva
the authorDeva

Leave a Reply

error: Content is protected !!
Latest news
ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! ಕೊರಟಗೆರೆ: ಸರ್ಕಾರಿ ಬಸ್‌ನಲ್ಲಿ ಪುಟ್ಟ ಮಗು ಅಸ್ವಸ್ಥ- ಪ್ರಾಣ ಉಳಿಸಲು ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋದ ಚಾಲಕ ಶರಣ... ನಾಳೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್- ಡೀಸೆಲ್ ಮಾರಾಟದ ಎಲ್ಲ ನಿರ್ಬಂಧಗಳ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ SIR ಪೂರ್ಣಗೊಂಡ ಬಳಿಕವೇ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ- ಮತದಾರರ ಪಟ್ಟೀಲಿ ಮನೆ ಯಜಮಾನಿ ಹೆಸರು ಕಡ್ಡಾಯ! ಓದಿನ ನೆಪದಲ್ಲಿ ಮಹಾನಗರಗಳ ಮಾಯಾಲೋಕಕ್ಕೆ ಬಂದು ಹಾದಿ ತಪ್ಪುತ್ತಿರುವ ಯುವತಿಯರು! KSRTC ಬಸ್ ಟೈಯರ್ ಸ್ಫೋಟ: ನಿವೃತ್ತ ಶಿಕ್ಷಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ- ಆಸ್ಪತ್ರ... 308 ಗ್ರಾಂ ಮಾದಕ ದ್ರವ್ಯ ವಶ: ಇಬ್ಬರು ಯುವತಿಯರು ಸೇರಿ ಏಳು ಮಂದಿ ಬಂಧನ ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಗಾಗಿ ಮತ್ತೆ ಅರ್ಜಿ: ಸಿಎಂ ಡಿಕೆಶಿ ಅಧಿಕೃತ ಘೋಷಣೆ ರಾಜ್ಯಾದ್ಯಂತ ನಾಳೆಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಮನೆಗೆ ಬರುವ ಬಿಎಲ್ಒಗಳಿಗೆ ಸಹಕರಿಸಲು ಡಿಸಿಗಳು ಕರೆ ರಾಜ್ಯಾದ್ಯಂತ ಶೇ.61 ರಷ್ಟು ಮಳೆ ಕೊರತೆ: ಕಾವೇರಿ ನದಿ ಸೇರಿದಂತೆ ಬರಿದಾಗುತ್ತಿವೆ ಎಲ್ಲ ನದಿಗಳ ಒಡಲು- ಆತಂಕದಲ್ಲಿ ಅನ್...