CRIMENEWSದೇಶ-ವಿದೇಶ

308 ಗ್ರಾಂ ಮಾದಕ ದ್ರವ್ಯ ವಶ: ಇಬ್ಬರು ಯುವತಿಯರು ಸೇರಿ ಏಳು ಮಂದಿ ಬಂಧನ

ಪಾಲಕ್ಕಾಡ್ ಜಿಲ್ಲೆಯ ಮುತ್ತಾಲಮಡಾದ ರೆಸಾರ್ಟ್‌ವೊಂದರಲ್ಲಿ ಡ್ರಗ್ ಪಾರ್ಟಿ ಮುಗಿಸಿ ತ್ರಿಶೂರ್‌ಗೆ ಹಿಂತಿರುಗುತ್ತಿದ್ದ ನಾಲ್ವರನ್ನು ವಾಣಿಯಂಪಾರಾ ಎಂಬಲ್ಲಿ ಪೊಲೀಸರು ಅನುಮಾನದ ಆಧಾರದ ಮೇಲೆ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಒಬ್ಬ ಯುವತಿಯು ರಹಸ್ಯವಾಗಿ ಬಚ್ಚಿಟ್ಟುಕೊಂಡಿದ್ದ 2 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈ ಬಗ್ಗೆ ತೀವ್ರ ತನಿಖೆ ನಡೆಸಿದಾಗ ಇಡೀ ಜಾಲ ಬೆಳಕಿಗೆ ಬಂದಿದೆ.

ವಿಜಯಪಥ ಸಮಗ್ರ ಸುದ್ದಿ

ತ್ರಿಶೂರ್: ಜಿಲ್ಲೆಯ ಪೊಲೀಸರು ಭಾರಿ ಡ್ರಗ್ಸ್ ಜಾಲವನ್ನು ಭೇದಿಸಿದ್ದು, ಈ ಕಾರ್ಯಾಚರಣೆಯಲ್ಲಿ ಒಟ್ಟು 308 ಗ್ರಾಂ ಎಂಡಿಎಂಎ (MDMA – ಮಾದಕ ದ್ರವ್ಯ) ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಇಬ್ಬರು ಯುವತಿಯರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಆಪರೇಷನ್ ಟೈಫೂನ್’ (Operation Typhoon) ಕಾರ್ಯಾಚರಣೆಯ ಭಾಗವಾಗಿ ಪಾಲಕ್ಕಾಡ್ ಜಿಲ್ಲೆಯ ಮುತ್ತಾಲಮಡಾದ ರೆಸಾರ್ಟ್‌ವೊಂದರಲ್ಲಿ ಡ್ರಗ್ ಪಾರ್ಟಿ ಮುಗಿಸಿ ತ್ರಿಶೂರ್‌ಗೆ ಹಿಂತಿರುಗುತ್ತಿದ್ದ ನಾಲ್ವರನ್ನು ವಾಣಿಯಂಪಾರಾ ಎಂಬಲ್ಲಿ ಪೊಲೀಸರು ಅನುಮಾನದ ಆಧಾರದ ಮೇಲೆ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಒಬ್ಬ ಯುವತಿಯು ರಹಸ್ಯವಾಗಿ ಬಚ್ಚಿಟ್ಟುಕೊಂಡಿದ್ದ 2 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈ ಬಗ್ಗೆ ತೀವ್ರ ತನಿಖೆ ನಡೆಸಿದಾಗ ಇಡೀ ಜಾಲ ಬೆಳಕಿಗೆ ಬಂದಿದೆ.

ಪೊಲೀಸರು ತನಿಖೆ, ವಿಚಾರಣೆ ಬಳಿಕ ಶಿಫಾಸ್ (26), ಜಿಷ್ಣು (27), ವಿದ್ಯಾ (28) ಮತ್ತು ಶ್ರೀಲಕ್ಷ್ಮಿ (20) ಎಂಬುವರನ್ನು ಬಂಧಿಸಿದ್ದಾರೆ.

ತನಿಖೆ ತೀವ್ರಗೊಂಡಾಗ ಸಿಕ್ಕಿದ ಡ್ರಗ್ಸ್ ಆಧಾರದ ಮೇರೆಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಜಿಲ್ಲಾ ಡ್ರಗ್ಸ್ ವಿರೋಧಿ ವಿಶೇಷ ಕಾರ್ಯಪಡೆ (DANSAF) ಕಣಕ್ಕಿಳಿಯಿತು. ಆ ಬಳಿಕ ಶಿಫಾಸ್ ಬಾಡಿಗೆಗೆ ಇದ್ದ ಮನೆಗೆ ದಾಳಿ ಮಾಡಿತು. ಅಲ್ಲಿ 13 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಇನ್ನು ಪೊಲೀಸರು ಇಲ್ಲಿಗೆ ಬರುತ್ತಾರೆ ಎಂದು ಮೊದಲೇ ಅರಿತಿದ್ದ ಆತನ ಸ್ನೇಹಿತ ಸುಮೇಶ್ ಎಂಬಾತ ಅಲ್ಲಿಂದ ಭಾರಿ ಪ್ರಮಾಣದ ಡ್ರಗ್ಸ್ ತೆಗೆದುಕೊಂಡು ಪರಾರಿಯಾಗಿದ್ದ ಎಂಬುದು ಗೊತ್ತಾಯಿತು.

ತಕ್ಷಣ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಚಾವಕ್ಕಾಡ್ ಬಳಿಯ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ವರ್ಕ್‌ಶಾಪ್ ಮೇಲೆ ದಾಳಿ ನಡೆಸಿ, ಅಲ್ಲಿ ಅಡಗಿಸಿಟ್ಟಿದ್ದ 288 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಂಡರು. ಈ ವೇಳೆ ಸುಮೇಶ್, ಶಬೀರ್ ಮತ್ತು ಅನ್ಸಾದ್ ಎಂಬುವವರನ್ನು ಬಂಧಿಸಲಾಯಿತು.

ವಶಪಡಿಸಿಕೊಂಡಿರುವ ಒಟ್ಟು ಎಂಡಿಎಂಎ ಮೌಲ್ಯ 15 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರೆಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಜಾಲದ ಹಿಂದೆ ದೊಡ್ಡ ಗ್ಯಾಂಗ್ ಇರುವ ಶಂಕೆಯಿದ್ದು, ಪೊಲೀಸರು ಆರೋಪಿಗಳ ಫೋನ್ ಕರೆಗಳು ಮತ್ತು ಚಾಟ್ ಹಿಸ್ಟರಿಯನ್ನು ಪರಿಶೀಲಿಸುತ್ತಿದ್ದಾರೆ.

Deva
the authorDeva

Leave a Reply

error: Content is protected !!
Latest news
ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! ಕೊರಟಗೆರೆ: ಸರ್ಕಾರಿ ಬಸ್‌ನಲ್ಲಿ ಪುಟ್ಟ ಮಗು ಅಸ್ವಸ್ಥ- ಪ್ರಾಣ ಉಳಿಸಲು ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋದ ಚಾಲಕ ಶರಣ... ನಾಳೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್- ಡೀಸೆಲ್ ಮಾರಾಟದ ಎಲ್ಲ ನಿರ್ಬಂಧಗಳ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ SIR ಪೂರ್ಣಗೊಂಡ ಬಳಿಕವೇ ಗೃಹಲಕ್ಷ್ಮೀ ಯೋಜನೆಯ ಪರಿಷ್ಕರಣೆ- ಮತದಾರರ ಪಟ್ಟೀಲಿ ಮನೆ ಯಜಮಾನಿ ಹೆಸರು ಕಡ್ಡಾಯ! ಓದಿನ ನೆಪದಲ್ಲಿ ಮಹಾನಗರಗಳ ಮಾಯಾಲೋಕಕ್ಕೆ ಬಂದು ಹಾದಿ ತಪ್ಪುತ್ತಿರುವ ಯುವತಿಯರು! KSRTC ಬಸ್ ಟೈಯರ್ ಸ್ಫೋಟ: ನಿವೃತ್ತ ಶಿಕ್ಷಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ- ಆಸ್ಪತ್ರ... 308 ಗ್ರಾಂ ಮಾದಕ ದ್ರವ್ಯ ವಶ: ಇಬ್ಬರು ಯುವತಿಯರು ಸೇರಿ ಏಳು ಮಂದಿ ಬಂಧನ ಗೃಹಜ್ಯೋತಿ ಯೋಜನೆ ದುರ್ಬಳಕೆ ತಡೆಗಾಗಿ ಮತ್ತೆ ಅರ್ಜಿ: ಸಿಎಂ ಡಿಕೆಶಿ ಅಧಿಕೃತ ಘೋಷಣೆ ರಾಜ್ಯಾದ್ಯಂತ ನಾಳೆಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಮನೆಗೆ ಬರುವ ಬಿಎಲ್ಒಗಳಿಗೆ ಸಹಕರಿಸಲು ಡಿಸಿಗಳು ಕರೆ ರಾಜ್ಯಾದ್ಯಂತ ಶೇ.61 ರಷ್ಟು ಮಳೆ ಕೊರತೆ: ಕಾವೇರಿ ನದಿ ಸೇರಿದಂತೆ ಬರಿದಾಗುತ್ತಿವೆ ಎಲ್ಲ ನದಿಗಳ ಒಡಲು- ಆತಂಕದಲ್ಲಿ ಅನ್...