NEWSನಮ್ಮಜಿಲ್ಲೆನಮ್ಮರಾಜ್ಯ

ಇಂದಿನಿಂದ ಎರಡು ತಿಂಗಳ ಕಾಲ: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಬರಲಿದ್ದಾರೆ ಇಲಾಖಾ ಸಿಬ್ಬಂದಿ

ಗೃಹ ಜ್ಯೋತಿ ಯೋಜನೆ (Gruha Jyothi Scheme) ಮೂಲಕ ರಾಜ್ಯದ ಕೋಟ್ಯಂತರ ಕುಟುಂಬಗಳು “ಉಚಿತ ವಿದ್ಯುತ್ ಸೌಲಭ್ಯ” ಪಡೆಯುತ್ತಿವೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆ ಮಹತ್ವದ ಹೊಸ ಕ್ರಮ ಕೈಗೊಂಡಿದ್ದು, ಇದಕ್ಕೆ ಯೋಜನೆಗೆ ಒಳಪಡುವ ಎಲ್ಲರೂ ಸಹಕರಿಸಬೇಕು -ಶಾಂತಾರಾಮ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ “ಗೃಹ ಜ್ಯೋತಿ ಯೋಜನೆ (Gruha Jyothi Scheme)” ಫಲಾನುಭವಿಗಳಿಗೆ “ಹೊಸ ಅಪ್‌ಡೇಟ್”. ಇಂದಿನಿಂದ (ಜುಲೈ 01) ಎಸ್ಕಾಂ (ESCOM) ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಲಿದ್ದು, ಭೇಟಿ ವೇಳೆ ಕಡ್ಡಾಯವಾಗಿ 6 ಪ್ರಮುಖ ಮಾಹಿತಿಯನ್ನು ಫಲಾನುಭವಿಗಳು ನೀಡಬೇಕು ಎಂದು ಇಂಧನ ಇಲಾಖೆಯ ಸರ್ಕಾರದ ಅಧೀಣ ಕಾರ್ಯದರ್ಶಿ ಶಾಂತಾರಾಮ್‌ ಆದೇಶ ಹೊರಡಿಸಿದ್ದಾರೆ.

ನಿನ್ನೆ ಮಂಗಳವಾರ ಆದೇಶ ಹೊರಡಿಸಿರುವ ಅವರು, ಗೃಹ ಜ್ಯೋತಿ ಯೋಜನೆ (Gruha Jyothi Scheme) ಮೂಲಕ ರಾಜ್ಯದ ಕೋಟ್ಯಂತರ ಕುಟುಂಬಗಳು “ಉಚಿತ ವಿದ್ಯುತ್ ಸೌಲಭ್ಯ” ಪಡೆಯುತ್ತಿವೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆ ಮಹತ್ವದ ಹೊಸ ಕ್ರಮ ಕೈಗೊಂಡಿದ್ದು, ಇದಕ್ಕೆ ಯೋಜನೆಗೆ ಒಳಪಡುವ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಸದ್ಯ ಯೋಜನೆಯ ಪಾರದರ್ಶಕತೆ ಮತ್ತು ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿ ಅನ್ನೋ ದೃಷ್ಟಿಯಿಂದ ಇಂಧನ ಇಲಾಖೆಯ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಲು ಈ ವೇಳೆ ನವೀನ ಮಾಹಿತಿ ಸಂಗ್ರಹಿಸಲಿದ್ದಾರೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯದ ವಿವಿಧ ಎಸ್ಕಾಂ ಸಂಸ್ಥೆಗಳು (BESCOM, HESCOM, MESCOM, GESCOM, CESC) ತಮ್ಮಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಮೀಟರ್ ರೀಡರ್‌ಗಳು ಇನ್ಮುಂದೆ ನೇರವಾಗಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಆ ವೇಳೆ ಎಲ್ಲರೂ ಪೂರ್ಣ ಮಾಹಿತಿಯನ್ನು ಕೊಡಬೇಕು ಎಂದು ತಿಳಿಸಿದ್ದಾರೆ.

ಇನ್ನು ಈಗಾಗಲೇ ಲಕ್ಷಾಂತರ ಗ್ರಾಹಕರು ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡಿದ್ದರೂ, ಮನೆ ಬದಲಾವಣೆ, ಮಾಲೀಕರ ಮರಣ, ಬಾಡಿಗೆದಾರರ ಬದಲಾವಣೆ ಅಥವಾ ಆಸ್ತಿ ಖರೀದಿ-ಮಾರಾಟದಂತಹ ಮಾಹಿತಿ ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಆಗದೇ ಇರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದ್ದಾರೆ.

ಸಿಬ್ಬಂದಿಗಳಿಗೆ ನೀಡಬೇಕಾದ 6 ಪ್ರಮುಖ ಮಾಹಿತಿ: ಸರ್ಕಾರದ ಹೊಸ ಆದೇಶದ ಪ್ರಕಾರ, ಎಸ್ಕಾಂ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳು ಈ ಕೆಳಗಿನ ವಿವರಗಳನ್ನು ನೀಡಬೇಕು.

1. ಪಡಿತರ ಚೀಟಿ ಮಾಹಿತಿ : ನೀವು ಎಪಿಎಲ್ (APL), ಬಿಪಿಎಲ್ (BPL) ಅಥವಾ ಪಡಿತರ ಚೀಟಿ ಇಲ್ಲದ ವರ್ಗಕ್ಕೆ ಸೇರುತ್ತೀರಾ ಅಥವಾ ಇದೆಯೇ ಎಂಬ ಮಾಹಿತಿ. ಬಿಪಿಎಲ್ ಕಾರ್ಡ್ ಇದ್ದರೆ ಅದರ ಸಂಖ್ಯೆಯನ್ನು ನೀಡಬೇಕು.

2. ಮತದಾರರ ಗುರುತಿನ ಚೀಟಿ (Voter ID): ಕರ್ನಾಟಕ ರಾಜ್ಯದ ನೋಂದಾಯಿತ ಮತದಾರರೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಮತದಾರರ ಚೀಟಿಯ EPIC ನಂಬರ್‌ ಕೇಳಲಾಗುತ್ತದೆ. ಕಾರಣ ಅದನ್ನು ನೀವು ಕೊಡಬೇಕು.

3. ಫಲಾನುಭವಿಯ ಫೋಟೋ : ಅರ್ಜಿದಾರರ ಲೈವ್ ಫೋಟೋ ಅಥವಾ ಇತ್ತೀಚಿನ ಭಾವಚಿತ್ರವನ್ನು ESCOM ಸಿಬ್ಬಂದಿ ಸಂಗ್ರಹಿಸಬಹುದು. ನೀವು ಲೈವ್‌ ಆಗಿಯಾದರೂ ಫೋಟೋ ನೀಡಬಹುದು.

4. ಸಾಮಾಜಿಕ ವರ್ಗದ ವಿವರ : ನೀವು SC, ST, OBC, ಅಲ್ಪಸಂಖ್ಯಾತ ಅಥವಾ ಇತರೆ ವರ್ಗಕ್ಕೆ ಸೇರಿದವರೇ ಎಂಬ ಮಾಹಿತಿ ನೀಡಬೇಕು.

5. ಆದಾಯ ತೆರಿಗೆ ಪಾವತಿದದಾರರೆ ಎಂಬ ಮಾಹಿತಿ: ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ PAN Card ಸಂಖ್ಯೆ ನೀಡುವುದು ಕಡ್ಡಾಯವಾಗಬಹುದು.

6. ವೃತ್ತಿಯ ಮಾಹಿತಿ : ನೀವು ಸರ್ಕಾರಿ ಉದ್ಯೋಗಿ, ಖಾಸಗಿ ಉದ್ಯೋಗಿ, ವ್ಯಾಪಾರಿ, ರೈತ ಅಥವಾ ದಿನಗೂಲಿ ಕಾರ್ಮಿಕರೇ ಎಂಬ ವಿವರವನ್ನು ನೀಡಬೇಕು ಈ ಮೂಲಕ ಈ ಎಲ್ಲ ಮಾಹಿತಿಯನ್ನು ಬೆಸ್ಕಾಂನಲ್ಲಿ ದಾಖಲಿಸಲಾಗುತ್ತದೆ.

ಇಂದಿನಿಂದಲೇ ಮಾಹಿತಿ ಸಂಗ್ರಹ: ಇಂಧನ ಇಲಾಖೆ ನೀಡಿರುವ ಸೂಚನೆಯಂತೆ ಈ ಮಾಹಿತಿ ಸಂಗ್ರಹ ಪ್ರಕ್ರಿಯೆ ಇಂದಿನಿಂದ ಅಂದರೆ ಜುಲೈ 1ರಿಂದ ಆರಂಭವಾಗಿದ್ದು, ಮುಂದಿನ ಎರಡು ತಿಂಗಳ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅಧಿಕಾರಿಗಳು ಸ್ಥಳದಲ್ಲೇ “Seva Sindhu App” ಮೂಲಕ ಮಾಹಿತಿಯನ್ನು ಅಪ್‌ಲೋಡ್ ಮಾಡಲಿದ್ದಾರೆ.

ಫಲಾನುಭವಿಗಳು ಆತಂಕಪಡಬೇಕಿಲ್ಲ : ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಮನೆಗೆ ಬರುವ ಅಧಿಕೃತ ಮೀಟರ್ ರೀಡರ್ ಅಥವಾ ಎಸ್ಕಾಂ ಪ್ರತಿನಿಧಿಗಳಿಗೆ ಅಗತ್ಯ ದಾಖಲೆ ಮತ್ತು ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಶಾಂತಾರಾಮ್‌ ಮನವಿ ಮಾಡಿದ್ದಾರೆ.

ಇನ್ನು ಇದು ಕೇವಲ ಡೇಟಾ ಪರಿಷ್ಕರಣೆ ಪ್ರಕ್ರಿಯೆ ಆಗಿದ್ದು, ಅರ್ಹ ಫಲಾನುಭವಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಈ ಕ್ರಮದಿಂದ ಯೋಜನೆಯ ಲಾಭ ನಿಜವಾದ ಅರ್ಹರಿಗೆ ತಲುಪುವಂತೆ ಸರ್ಕಾರ ಕ್ರಮ ಕೈಗೊಂಡಿದೆ. ಈವರೆಗೂ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ನೀಡುತ್ತಿದ್ದು, 200 ಯೂನಿಟ್‌ ಮೀರಿದವರು ಪೂರ್ಣ ಬಿಲ್‌ ಕಟ್ಟಬೇಕು ಎಂಬ ನಿಯವಿದೆ. ಈ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್‌ ಫೈಲ್‌ ನೋಡಿ: ಗೃಹ ಜ್ಯೋತಿ ಬಗ್ಗೆ

Megha
the authorMegha

Leave a Reply

error: Content is protected !!
Latest news
ಗುಟ್ಕಾ ಉಗಿಯಲು ಬಗ್ಗಿದ ವಿದ್ಯಾರ್ಥಿ ತಲೆಗೆ ಬಡಿದ ಟಿಪ್ಪರ್: ಕ್ಷಣಾರ್ಧದಲ್ಲೇ ರುಂಡ ಕಟ್‌, ಬಸ್ಸಿನಲ್ಲಿ ನೇತಾಡಿದ ಮುಂಡ... KSRTC: ನೌಕರರ ಹೆಚ್ಚಳದ ಶೇ.12.5ರಷ್ಟು ವೇತನ ಜುಲೈ ಅಂದರೆ ಈ ತಿಂಗಳ ವೇತನದಲ್ಲಿ ಅನುಷ್ಠಾನ- ಆಗಸ್ಟ್‌ನಲ್ಲಿ ಎಲ್ಲರ ಖಾತ... NWKRTC: ವಿದ್ಯಾರ್ಥಿಗಳ ಮನವಿ ಪರಿಗಣಿಸಿ ನೂತನ ಬಸ್ ಸೇವೆಗೆ ಚಾಲನೆ- ನಿಗಮದ ಉಪಾಧ್ಯಕ್ಷ ಸುನೀಲ್ ಜೆ. ಹಣಮನ್ನವರ ಇಂದಿನಿಂದ ಎರಡು ತಿಂಗಳ ಕಾಲ: ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಬರಲಿದ್ದಾರೆ ಇಲಾಖಾ ಸಿಬ್ಬಂದಿ KSRTC: 50 ಹೊಸ ಬಸ್ ನೀಡಿ ಜತೆಗೆ ಆರ್‌ಟಿಒ ಕಚೇರಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ: ಸಾರಿಗೆ ಸಚಿವರಿಗೆ ರಾಜಣ್ಣ ಮ... ದಂಪತಿಗಳ ಏಕಾಂತದಿಂದ ಕಾಂತಿಯುತ ತ್ವಚೆ, ಯುವಕರಾಗಿಡುವ ಮೋಡಿ ಅಡಗಿದೆ! ಇಂದು ಸಾರಿಗೆ ನೌಕರರ ವೇತನ ಸಂಬಂಧ ಕರೆದಿದ್ದ ರಾಜೀ ಸಂಧಾನ ಸಭೆ ಮತ್ತೆ ವಿಫಲ! 2028ರ ವೇಳೆಗೆ ಮಾದಕ ವಸ್ತು- ನಶೆ ಮುಕ್ತ ಕರ್ನಾಟಕವೇ ನಮ್ಮ ಗುರಿ: ಸಿಎಂ ಡಿಕೆಶಿ ಕೊರಟಗೆರೆ: ಸರ್ಕಾರಿ ಬಸ್‌ನಲ್ಲಿ ಪುಟ್ಟ ಮಗು ಅಸ್ವಸ್ಥ- ಪ್ರಾಣ ಉಳಿಸಲು ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋದ ಚಾಲಕ ಶರಣ... ನಾಳೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್- ಡೀಸೆಲ್ ಮಾರಾಟದ ಎಲ್ಲ ನಿರ್ಬಂಧಗಳ ತೆರವುಗೊಳಿಸಿ ಕೇಂದ್ರ ಸರ್ಕಾರ ಆದೇಶ