Friday, November 1, 2024
CrimeNEWSನಮ್ಮಜಿಲ್ಲೆ

ಬಾರ್‌ನಲ್ಲಿ ಕುಡಿದ ಹಣ ಕೇಳಿದಕ್ಕೆ ಗಲಾಟೆ: ಕ್ಯಾಶಿಯರ್‌ ಕೊಲೆಯಲ್ಲಿ ಅಂತ್ಯ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ಬಾರ್‌ನಲ್ಲಿ ಕುಡಿದ ಬಳಿಕ ಬಿಲ್‌ ಕೊಡುವ ವಿಷಯದಲ್ಲಿ ನಡೆದ ಗಲಾಟೆ ಬಾರ್‌ ಕ್ಯಾಶಿಯರ್‌ ಕೊಲೆಯಲ್ಲಿ ಅಂತ್ಯವಾಗಿರುವುದು ಶಿವಮೊಗ್ಗದಲ್ಲಿ ನಡೆದಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಸಚಿನ್ (27) ಕೊಲೆಯಾದ ಬಾರ್‌ ಕ್ಯಾಶಿಯರ್‌. ಶಿವಮೊಗ್ಗ ತಾಲೂಕಿನ ಆಯನೂರಿನ ನವರತ್ನ ಬಾರ್‌ನಲ್ಲಿ ಈ ಗಲಾಟೆ ನಡೆದಿದೆ. ನಿರಂಜನ, ಸತೀಶ್ ಹಾಗೂ ಅಶೋಕ್ ನಾಯ್ಕ್ ಎಂಬುವರು ಕೊಲೆ ಮಾಡಿದ ಆರೋಪಿಗಳು.

ಈ ಹಿಂದೆ ಕಂಟಮಟ್ಟ ಕುಡಿದು ಹಣ ನೀಡದೇ ಆರೋಪಿಗಳು ಪರಾರಿಯಾಗಿದ್ದರು. ಹೀಗಾಗಿ ಮತ್ತೆ ನಿನ್ನೆ ಭಾನುವಾರ ಆರೋಪಿಗಳು ಬಾರ್‌ ಬಳಿ ಬಂದಾಗ ಕ್ಯಾಶಿಯರ್ ಹಣ ಕೇಳಿದ್ದಾರೆ.

ಕುಡಿದ ಹಣ ಕೇಳಿದನ್ನೇ ಎಲ್ಲರು ಎದುರು ಹಣ ಕೇಳುತ್ತೀಯಾ ಅಂತಾ ಗಲಾಟೆ ಮಾಡಿದ್ದದ್ದಾರೆ. ಬಳಿಕ ಮೂವರು ಮತ್ತೆ ರಾತ್ರಿ 10 ಗಂಟೆಗೆ ಬಾರ್‌ಗೆ ಕುಡಿಯಲು ಬಂದಿದ್ದು, ರಾತ್ರಿ 11.30 ಆದರೂ ಆರೋಪಿಗಳು ಮದ್ಯ ಸೇವಿಸುತ್ತಲೇ ಇದ್ದರು.

ಈ ವೇಳೆ ಸಚಿನ್ 11.30 ಆಯ್ತು ಬಂದ್ ಮಾಡ್ತೇವೆ ಹೊರಡಿ ಎಂದು ಹೇಳಿದ್ದಾರೆ. ಆಗ ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ ಅಂತಾ ಗಲಾಟೆ ಮಾಡಿದ್ದಾರೆ. ಜಗಳ ತಾರಕಕ್ಕೇರಿ ಸಚಿನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಹಲ್ಲೆಯಿಂದ ಕುಸಿದು ಬಿದ್ದ ಸಚಿನ್‌ನನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಾಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡುವಾಗಲೇ ಸಚಿನ್ ಮೃತಟ್ಟಿದ್ದಾರೆ.

ಹತ್ಯೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...