NEWSಕೃಷಿಸಂಸ್ಕೃತಿ

ಸಸಿ  ನೆಟ್ಟು, ಮುಂದಿನ ವರ್ಷದವರೆಗೆ ಅತ್ತ ಸುಳಿಯದೆ ಒಣಮಹೋತ್ಸವ ಆಗುವುದು ಬೇಡ : ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಕರೆ

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಈ ವರ್ಷ ವನಮಹೋತ್ಸವ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು, ಮುಂದಿನ ವರ್ಷದವರೆಗೆ ಅತ್ತ ಸುಳಿಯದೆ ಒಣಮಹೋತ್ಸವ ಆಗುವುದು ಬೇಡ ಎಂದು ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೂಟಗಲ್ ಹೋಬಳಿ ಘಟಕ ಕ್ಯಾಸಾಪುರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನಾವು ಮಾಡುವ ಕಾರ್ಯ ನಿಜ ಅರ್ಥದ ವನಮಹೋತ್ಸವ ಅಗಬೇಕು. ವಿಶ್ವ ಪರಿಸರದ ದಿನದಂದು ನೆಟ್ಟ ಗಿಡಗಳು ಹೇಗಿವೆ ಎಂಬುದನ್ನು ಗಮನಿಸಬೇಕು. ಹಾಗೇ ಅವುಗಳ ಜೊತೆಗೊಂದು ಸಂವಹನ ನಡೆಸಬೇಕು.ನಮ್ಮ ಮತ್ತು ಸಸ್ಯಗಳ ನಡುವೆ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡುಗಳ ಕೊಡು-ಕೊಳ್ಳುವಿಕೆ ಇರುವುದನ್ನು ಮರೆಯಬಾರದು ಎಂಉ ಹೇಳಿದರು.

ಮರ-ಗಿಡಗಳು ಮಾತಾಡುತ್ತವೆ: ಅವುಗಳನ್ನು ಮಾತನಾಡಿಸುವ ಛಾತಿ ಮತ್ತು ಮನಸ್ಸು ನಮಗಿರಬೇಕು. ಇದಕ್ಕೆ ಪುರಾಣಕಾಲದ ಕಾವ್ಯಗಳಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಆಧುನಿಕ ಮತ್ತು ವೈಜ್ಞಾನಿಕ ಯುಗಕ್ಕೂ ಮೊದಲೇ ಕಾಳಿದಾಸನ ಕಾಲದಲ್ಲಿಯೇ ಸಸ್ಯಗಳಿಗೆ ಭಾವನೆಗಳಿವೆ, ಜೀವವಿರುತ್ತದೆ ಎಂಬುದು ತಿಳಿದಿತ್ತು ಎಂದರು.

ಸ್ಥಳೀಯ ಮಣ್ಣಿನ ಗುಣಗಳನ್ನು ಅರ್ಥ ಮಾಡಿಕೊಂಡು, ನೈಸರ್ಗಿಕವಾಗಿ ಬೆಳೆದಿರುವ ಉಪಯುಕ್ತ ಗಿಡಮರಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ. ಪರಿಸರ ಪಾಠದ ಪಠ್ಯಭಾಗಗಳು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಮತ್ತಷ್ಟು ಅಳವಡಿಕೆಯಾಗಬೇಕಿದೆ ಎಂದರು.

ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ನಂಜುಂಡಿ ಬಾನಂದೂರು ಮಾತನಾಡಿ, ಅವೈಜ್ಞಾನಿಕ ಮತ್ತು ಪ್ರಮಾಣ ಬದ್ಧವಲ್ಲದ ರಾಸಾಯನಿಕಗಳ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ಅದನ್ನು ಬಳಸುವುದು ಅಪಾಯಕಾರಿಯಲ್ಲ. ನಮ್ಮ ಭೂಮಿಯ ಕೊರತೆಯೇನಿದೆ ಅಂತಹ ಪೋಷಕಾಂಶಗಳನ್ನು ಕೊಟ್ಟು ವೈಜ್ಞಾನಿಕವಾಗಿ ಗಿಡಮರಗಳನ್ನು ಬೆಳೆಸಬೇಕಾಗಿದೆ. ನೀರಿನ ನಿರ್ವಹಣೆ, ಪ್ಲಾಸ್ಟಿಕ್ ಕಡಿಮೆ ಬಳಕೆ ಇವೆಲ್ಲ ನಮ್ಮ ಪರಿಸರದ ಉಳಿವಿನ ಮಾರ್ಗಗಳು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕೂಟಗಲ್ ಹೋಬಳಿ ಘಟಕದ ಅಧ್ಯಕ್ಷ ದೇವರಾಜ್ ಮಾತನಾಡಿ, ಕ್ಯಾಸಾಪುರ ಗ್ರಾಮಪ್ರವೇಶದಲ್ಲಿರುವ ಸರ್ಕಾರಿ ಜಮೀನಿಗೆ ವಿವಿಧ ಹಣ್ಣಿನ ಗಿಡಗಳನ್ನು ತರಿಸಿ, ಗ್ರಾಮಸ್ಥರು ಮತ್ತು ಶಾಲಾಮಕ್ಕಳ ನೆರವಿನಿಂದ ಸುಂದರ ಸಾರ್ವಜನಿಕ ಹಣ್ಣಿನ ತೋಟ ನಿರ್ಮಾಣದ ಕನಸು ಕಂಡಿದ್ದೇನೆ. ಅದಕ್ಕೆ ಪೂರಕವಾಗಿ ಈಗಾಗಲೇ ಮೂವತ್ತು ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದ್ದು, ಅವುಗಳ ಪೋಷಣೆ ಮಾಡುವುದಾಗಿ, ನಿಜ ಅರ್ಥದ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕ ಚಂದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಕೃಷ್ಣೇಗೌಡ, ಮುಖಂಡರಾದ ಕುಮಾರ್, ಲೋಕೇಶ್, ಶಿವಮೂರ್ತಿ, ಗಂಗಾಧರ್, ಶಿಕ್ಷಕರುಗಳಾದ ವೆಂಕಟೇಶ್, ಎಸ್. ವೇಣುಗೋಪಾಲ್, ಶಿವರಾಜು, ರಮೇಶ್, ಶ್ವೇತಾ ಮತ್ತು ಶಿವರತ್ನ ಮುಂತಾದವರು ಪಾಲ್ಗೊಂಡಿದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು