KKRTC: ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಬಸ್‌ಗೆ ಕಾರು ಗುದ್ದಿದ ಕಾಂಗ್ರೆಸ್ ಮುಖಂಡ- ಈವರೆಗೂ FIR ದಾಖಲಿಸದ ಪೊಲೀಸರು!!?

ಮುಧೋಳ್: ಕಾಂಗ್ರೆಸ್ ಲೀಡರ್ ಒಬ್ಬ ಕುಡಿದ ಮತ್ತಿಲ್ಲಿನ ಕಾರು ಚಾಲನೆ ಮಾಡಿಕೊಂಡು ಬಂದು ಕೆಕೆಆರ್‌ಟಿಸಿ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಈ ಬಗ್ಗೆ ಎಫ್‌ಐಆರ್ ಕೂಡ ಮಾಡದೆ ಬಸ್‌ಅನ್ನು ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ 12ಗಂಟೆಯಿಂದಲೂ ನಿಲ್ಲಿಸಿಕೊಂಡು ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡಿರುವ ಘಟನೆ ಮುಧೋಳ್‌ನಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದ ಕಾಂಗ್ರೆಸ್ ಲೀಡರ್ ಭೀಮ್‌ಸೆ ಸರ್ಕಾರ್ ಕುರಿ ಎಂಬುವರು ತಾನು ಮಾಡಿರುವ ತಪ್ಪನ್ನು ಮುಚ್ಚಿಹಾಕಲು ಬಸ್‌ಅನ್ನು ಪೊಲೀಸ್‌ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಬಳಿಕ ಈವರೆಗೂ ಅಂದರೆ ಏ.23ರ ಸಂಜೆ 6 ಗಂಟೆ ಆದರೂ ಆಸಾಮಿ ಪತ್ತೆಯಿಲ್ಲ.
ಇನ್ನು ಇತ್ತ ಈತ ಒಬ್ಬ ಕಾಂಗ್ರೆಸ್ ಮುಖಂಡ ಈತ ಹೇಳಿದಂತೆ ನಾವು ಕೇಳಬೇಕು ಎಂದು ಪೊಲೀಸರು ಪ್ರಯಾಣಿಕರಿಗೆ ತೊಂದರೆ ಕೊಟ್ಟಿರುವುದೂ ಅಲ್ಲದೆ ಈವರೆಗೂ ಸಾರಿಗೆ ಬಸ್ ಚಾಲಕ ಕೊಡುವ ದೂರನ್ನು ತೆಗೆದುಕೊಳ್ಳದೆ ಠಾಣೆ ಮುಂದೆ ಚಾಲಕ ಕಾದು ಕುಳಿತು ಕೊಳ್ಳುವಂತೆ ಮಾಡಿದ್ದಾರೆ.
ಕಾಂಗ್ರೆಸ್ ಲೀಡರ್ ಭೀಮ್‌ಸೆ ಸರ್ಕಾರ್ ಕುರಿ ಎಂಬಾತ ಈವರೆಗೂ ಯಾವುದೇ ದೂರು ನೀಡಿಲ್ಲ. ಇನ್ನು ಬಸ್ ಚಾಲಕ ದೂರು ನೀಡಿದರೆ ಅವರ ದೂರನ್ನು ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಈ ನಡುವೆ ಇಂದು ಬೆಳಗ್ಗೆ ಯಾವುದೋ ಒಂದು ಸಮಾರಂಭವಿದೆ ಎಂದು ಹೇಳಿ ಸರ್ಕಾರ್ ಕುರಿ ಜಮಖಂಡಿಗೆ ಹೋಗಿದ್ದಾರೆ. ಅಂದರೆ ಅವರನ್ನು ಪೊಲೀಸರು ಕಳಿಸಿದ್ದು, ಚಾಲಕ ಮತ್ತು ನಿರ್ವಾಹಕರನ್ನು ಮಾತ್ರ ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಇಲ್ಲಿ ನ್ಯಾಯ ಎಲ್ಲಿದೆ ಎಂಬ ಅನುಮಾನ ಮೂಡುತ್ತಿದೆ.
ಇನ್ನು ಈ ಬಗ್ಗೆ ವಿಚಾರಿಸಲು ಮುಧೋಳ್ ಪೊಲೀಸ್ ಠಾಣೆಯ ಪಿಎಸ್‌ಐ ಅಜಿತ್ ಅವರಿಗೆ ಕರೆ ಮಾಡಿದರೆ ಅವರ ಕಚೇರಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಎಂದು ಬಂದಿತು. ಬಳಿಕ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಿ ಪಿಎಸ್‌ಐ ಅವರ ಖಾಸಗಿ ಫೋನ್ ನಂಬರ್ ಕೊಟ್ಟರು ಅದಕ್ಕೆ ಎರಡು ಬಾರಿ ಕರೆ ಮಾಡಿದರೂ ಪಿಎಸ್‌ಐ ಕರೆಯನ್ನು ಸ್ವೀಕರಿಸಲಿಲ್ಲ.
ಇತ್ತ ನಿನ್ನೆ ರಾತ್ರಿಯಿಂದ ಸರಿಯಾಗಿ ನಿದ್ರೆ ಇಲ್ಲದೆ ಜತೆಗೆ ಊಟ ಕೂಡ ಮಾಡದೆ ಬಸ್ ಚಾಲಕ ಮತ್ತು ನಿರ್ವಾಹಕರು ಪೊಲೀಸ್ ಠಾಣೆಯಲ್ಲೇ ಕುಳಿತಿದ್ದಾರೆ. ಇನ್ನು ಭೀಮ್‌ಸೆ ಸರ್ಕಾರ್ ಕುರಿ ನಾನು ಕಾಂಗ್ರೆಸ್ ಲೀಡರ್ ಎಂದು ಹೇಳಿಕೊಂಡು ಕಾನೂನನ್ನೇ ಗಾಳಿತೂರಿ ಒಂದು ಸರ್ಕಾರಿ ಬಸ್‌ಅನ್ನು ಪೊಲೀಸ್ ಠಾಣೆಯಲ್ಲೇ ಅದೂ ದೂರು ನೀಡದೆ ನಿಲ್ಲಿಸಿಕೊಂಡು ದರ್ಪ ಮೆರೆಯುತ್ತಿದ್ದಾರೆ.

ಪೊಲೀಸರು ಈತ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ನಮ್ಮ ಮೇಲೆ ಕಿಡಿಕಾರಿದರೆ ನಾವೇನು ಮಾಡುವುದು, ನಾವು ಅಮಾನತಾಗಬೇಕಾಗುತ್ತದೆ ಎಂದು ಹೆದರೆ ಆ ಭಯದಲ್ಲೇ ಈ ಭೀಮ್‌ಸೆ ಸರ್ಕಾರ್ ಕುರಿಯ ವಿರುದ್ಧ ಈವರೆಗೂ ದೂರು ದಾಖಲಿಸಿಕೊಂಡೇ ಇಲ್ಲ.
ಇನ್ನು ಇಂದು ಪರೀಕ್ಷೆ ಇದ್ದ ಕಾರಣ ರಾತ್ರಿಯೇ ಹುಬ್ಬಳ್ಳಿಯಿಂದ ಬೀದರ್‌ಗೆ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳು ಇದರಿಂದ ಗಾಬರಿಗೊಂಡಿದ್ದರು. ಅವರನ್ನಾದರೂ ಸುರಕ್ಷಿತವಾಗಿ ಕಳಿಸಿಕೊಡುವ ವ್ಯವಸ್ಥೆಯನ್ನು ಪೊಲೀಸರು ಮಾಡಲಿಲ್ಲ. ಇತ್ತ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮುಂದೆ ಕೂರಲಾಗದೆ ಪರಿತಪ್ಪಿಸಿದ್ದಾರೆ.
ಇದನ್ನು ನೋಡಲಾರದೆ ಸಾರಿಗೆ ಬಸ್ ಚಾಲಕ ಅವರನ್ನು ಬೇರೆ ಬಸ್‌ಗೆ ಹತ್ತಿಸಿಬಿಟ್ಟು ಬರುತ್ತೇವೆ ಅಲ್ಲಿಯವರೆಗಾದರು ಬಸ್ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಕೊಡಿ ಎಂದು ಪೊಲೀಸರ ಬಳಿ ಬೇಡಿಕೊಂಡಿದ್ದಾರೆ. ಆ ಬಳಿಕ ಇಬ್ಬರು ಪೊಲೀಸ್ ಸಿಬ್ಬಂದಿಗಳ ಕಾವಲಿನಲ್ಲಿ ಬಸ್‌ಅನ್ನು ತೆಗೆದುಕೊಂಡು ಗೋಗಲು ಅನುಮತಿ ನೀಡಿದ್ದಾರೆ.
ಮುಂಜಾನೆ ಸುಮಾರು 3.30ರ ವೇಳೆಗೆ ಒಂದು ಬಸ್ ಬಂದಿದ್ದು ಅದು ಸಿಂಧಗಿ ವರೆಗೆ ಮಾತ್ರ ಹೋಗುತ್ತಿತ್ತು. ಅದೇ ಬಸ್‌ಗೆ ಪ್ರಯಾಣಿಕರನ್ನು ಹತ್ತಿಸಿ ಸಿಂಧಗಿಯಿಂದ ಮುಂದಕ್ಕೆ ಬೇರೆ ಬಸ್‌ಗೆ ಹತ್ತಿಸುವಂತೆ ತಮ್ಮ ಸಹೋದ್ಯೋಗಿಗೆ ಚಾಲಕರು ಮನವಿ ಮಾಡಿದ್ದಾರೆ. ಅಲ್ಲದೆ ಆ ಪ್ರಯಾಣಿಕರು ಸುರಕ್ಷಿತವಾಗಿ ಅವರ ಸ್ಥಳ ತಲುಪುವ ವರೆಗೂ ಅವರಿಗೆ ಕರೆ ಮಾಡಿ ಚಾಲಕರು ವಿಚಾರಿಸಿಕೊಂಡಿದ್ದಾರೆ.
ನೋಡಿ ಒಬ್ಬ ಕಾಂಗ್ರೆಸ್ ಲೀಡರ್ ಈ ರೀತಿ ನಡೆದುಕೊಂಡದರೆ ಇನ್ನು ಸಾಮಾನ್ಯರು ಯಾವ ರೀತಿ ನಡೆದುಕೊಳ್ಳಬೇಕು. ಜತೆಗೆ ಈವರೆಗೂ ಪೊಲೀಸ್ ಠಾಣೆಗೆ ಬರದೆ ಯಾರೋ ಹಿಂಬಾಲಕರನ್ನು ಕಳಿಸಿ ಕಾರು ರೆಡಿ ಮಾಡಿಸಿಕೊಡುವಂತೆ ಚಾಲಕನಿಗೆ ಹೇಳಿದ್ದಾನಂತೆ ಈ ಬೀಮ್‌ಸೇ ಸರ್ಕಾರ್ ಕುರಿ. ತಪ್ಪು ಮಾಡಿ ಬಸ್‌ಗೆ ಡಿಕ್ಕಿ ಹೊಡೆದಿರುವುದು ಈತ. ಆದರೆ ಬಸ್ ಚಾಲಕ ಕಾರನ್ನು ಏಕೆ ರೆಡಿ ಮಾಡಿಸಿಕೊಡಬೇಕು. ಅಲ್ಲದೆ ಪೊಲೀಸರು ಏಕೆ ಈವರೆಗೂ ಚಾಲಕ ಕೊಡುತ್ತಿರುವ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎಂಬುವುದು ಗೊತ್ತಾಗುತ್ತಿಲ್ಲ.
ಇನ್ನು ಸಾರಿಗೆಯ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡ ಈ ಕಾಂಗ್ರೆಸ್ ಮುಖಂಡ ಎಂಬ ವಿಷಯ ತಿಳಿದ ಮೇಲೆ ಪೊಲೀಸ್ ಠಾಣೆಗೆ ಬರುವ ಧೈರ್ಯವನ್ನೇ ಮಾಡಿಲ್ಲ. ಈ ರೀತಿ ಆದರೆ ತಮ್ಮ ಅಧೀನ ನೌಕರರ ಗತಿ ಏನು ಡಿಸಿ ಮತ್ತು ಡಿಟಿಒ ಸಾಹೇಬರೆ ನಿಮಗೆ ಕಾನೂನು ಪಾಲನೆ ಯಾವರೀತಿ ಮಾಡಬೇಕು ಎಂಬು ನಾವು ಹೇಳಿಕೊಡಬೇಕಾ? ಈಗಲಾದರೂ ನಿಮ್ಮ ಚಾಲಕನ ಪರ ನಿಂತು ದೂರುಕೊಡಲು ಮುಂದಾಗಿ ಇಲ್ಲ ನಾವು ಈ ಹುದ್ದೆಗೆ ಲಾಯಕ್ ಇಲ್ಲ ಎಂದು ಮನೆಗಾದರೂ ಹೋಗಿ.
Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...