ಬೆಂಗಳೂರು: ಲಕ್ಷಾಂತರ ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಪಕ್ಷದ ಮಹತ್ತರ ಕೊಡುಗೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸೇವಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ನಗರ ಪ್ರದಕ್ಷಿಣೆ ನಿಮಿತ್ತ ಮಾಗಡಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಇದಕ್ಕೂ ಮುನ್ನ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸವಿದರು.
ಬೆಂಗಳೂರಿನ ಕಸ ವಿಲೇವಾರಿ ಘಟಕಕ್ಕೆ ಸಪ್ರೈಸ್ ವಿಸಿಟ್ ಕೊಟ್ಟು ಪರಿಶೀಲನೆ ನಡೆಸಲು ಮುಂದಾಗಿದ್ದ ಅವರು, ಸದಾಶಿವ ನಗರದ ಮನೆಯಿಂದ ಹೊರಟು ಮೊದಲು ಕನ್ನಳ್ಳಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಶಿವಕುಮಾರ್ ಅವರಿಗೆ ಜಾಲಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಬಿಸಿ ತಟ್ಟಿತು.
ನಂತರ, ದಾಸರಹಳ್ಳಿ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭ ಅವರು, ಸಿಬ್ಬಂದಿ ಬಳಿ ತಿಂಡಿ ಕೊಡಿ ಎಂದು ಕೇಳಿದ್ದು, ಖಾಲಿ ಆಗಿದೆ ಎಂಬ ಉತ್ತರ ಲಭಿಸಿದೆ. ಈ ಸಂದರ್ಭದಲ್ಲಿ “ಎಷ್ಟು ಪ್ಲೇಟ್ ಬರುತ್ತದೆ?” ಎಂದು ಕ್ಯಾಂಟೀನ್ ಮ್ಯಾನೇಜರ್‌ಗೆ ಕೇಳಿದಾಗ “208 ಪ್ಲೇಟ್ ಬಂದು ಖಾಲಿ ಆಗಿದೆ” ಎಂದರು.
ಸರಿ ಬಿಡಿ ನಾನು ಮಾಧ್ಯಮ ಮಿತ್ರರಿಗೆ ತಿಂಡಿ ಕೊಡಿಸೋಣ ಅಂದುಕೊಂಡೆ, ಆದರೆ ಖಾಲಿ ಆಗಿದೆಯಲ್ಲ ಎಂದು ನಗೆ ಬೀರಿದರು. ಸಾಕಷ್ಟು ಪ್ರಮಾಣದಲ್ಲಿ ತಿಂಡಿ ಪೂರೈಕೆ ಖಾತರಿಪಡಿಸಿಕೊಳ್ಳಲು ಸೂಚನೆ ನೀಡಿದರು. ತಿಂಡಿ ಖಾಲಿ ಆದ್ದರಿಂದ ಶಿವಕುಮಾರ್, ಬೇರೆ ಇಂದಿರಾ ಕ್ಯಾಂಟೀನ್ಗೆ ತೆರಳಿದ್ದಾರೆ.
ನಂತರ, ಚೊಕ್ಕಸಂದ್ರದ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿದರು. ಈ ಸಂದರ್ಭ, ಕ್ಯಾಂಟಿನ್ ಸಿಬ್ಬಂದಿ ಉಪ್ಪಿಟ್ಟು, ಕೇಸರಿಬಾತ್ ನೀಡಿದ್ದು ಅದನ್ನು ಸವಿದಿದ್ದಾರೆ.
ಇಂದಿರಾ ಕ್ಯಾಂಟೀನಲ್ಲಿ ಎರಡನೇ ಸರ್ಪ್ರೈಸ್!: ತಿಂಡಿ ಸವಿದ ಡಿಕೆಶಿ, ಇಂದಿರಾ ಕ್ಯಾಂಟಿನ್ ಹೆಲ್ಪ್ಲೈನ್ ನಂಬರ್ ಪರಿಶೀಲನೆ ಮಾಡಲು ಮುಂದಾಗಿದ್ದು ಅಲ್ಲೂ ಅವರಿಗೆ ಸರ್ಪ್ರೈಸ್ ಕಾದಿತ್ತು. ಕ್ಯಾಂಟೀನ್ ಮೇಲೆ ದೂರುಗಳನ್ನು ನೀಡಲು ಇರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಇನ್ವ್ಯಾಲಿಡ್ ಎಂದು ಬಂದಿದೆ. ಆಗ ವಾಟ್ಸಪ್ ಮಾತ್ರ ಮಾಡಬೇಕು ಎಂದು ಸಿಬ್ಬಂದಿ ಸ್ಪಷ್ಟೀಕರಣ ನೀಡಿದ್ದಾರೆ.
ಇಂದು ನಗರ ಪ್ರದಕ್ಷಿಣೆ ನಿಮಿತ್ತ ಮಾಗಡಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಇದಕ್ಕೂ ಮುನ್ನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ನಲ್ಲಿ ಉಪಾಹಾರ ಸೇವಿಸಿದೆ. ಲಕ್ಷಾಂತರ ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಪಕ್ಷದ ಮಹತ್ತರ ಕೊಡುಗೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. pic.twitter.com/3q5yTvCQz1
— DK Shivakumar (@DKShivakumar) July 9, 2023