CrimeNEWSದೇಶ-ವಿದೇಶ

8 ವರ್ಷಗಳ ಕಾಲ ತನ್ನ ಮಗನನ್ನೇ ಕಾಮತೃಷೆಗೆ ಬಳಸಿಕೊಂಡ ತಾಯಿ

ವಿಜಯಪಥ ಸಮಗ್ರ ಸುದ್ದಿ

ಟೆಕ್ಸಾಸ್‌: ಗಂಡ ಮೃತಪಟ್ಟ ಬಳಿಕ 17 ವರ್ಷದ ಮಗನನ್ನೇ ಸುಮಾರು 8 ವರ್ಷಗಳ ಕಾಲ ತನ್ನ ಕಾಮ ತೃಷೆಗೆ ಬಳಸಿಕೊಂಡ ಘಟನೆ ವರದಿಯಾಗಿದೆ.

ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದು 8 ವರ್ಷದ ಬಳಿಕ ತಾಯಿ ಕಾಮ ತೃಷೆಗೆ ಬಲಿಯಾದ ಯುವಕನೇ ಪೊಲೀಸರ ಬಳಿ ತನ್ನ ದಯನೀಯ ಸ್ಥಿತಿಯನ್ನು ಹೇಳಿಕೊಂಡಿದ್ದಾನೆ.

ನಮ್ಮ ಭಾರತದಲ್ಲಿ ತಾಯಿ- ಮಕ್ಕಳ ಸಂಬಂಧವೆಂದರೆ ಅತ್ಯಂತ ಪವಿತ್ರವಾದುದು ಎಂದು ಹೇಳಲಾಗುತ್ತಿದೆ. ಇದು ಭಾರತಕ್ಕಷ್ಟೇ ಸೀಮಿತವಲ್ಲ ಪ್ರಪಂಚದ ಎಲ್ಲೆಡೆಯು ಇದೇ ಇರೋದು ಆದರೆ ಅಮೆರಿಕದ ಮಹಿಳೆಯೊಬ್ಬಳು ತನ್ನ ಮಗನನ್ನು ಕೂಡಿಟ್ಟು ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದರೆ ಅದನ್ನು ನಂಬಲಿಕ್ಕೂ ಅಸಾಧ್ಯ ಆದರು ಸತ್ಯ.

ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಮಹಿಳೆ 8 ವರ್ಷಗಳ ಹಿಂದೆಯೇ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದಳು. ಆತನ ಹೆಸರು ರೂಡಿ ಫರಿಯಾಸ್, 17 ವರ್ಷ ಎಂದು ಪೊಲೀಸ್‌ ಠಾಣೆಯಲ್ಲಿ ನೀಡಿದ್ದ ನಾಪತ್ತೆ ದೂರಿನಲ್ಲಿ ತಿಳಿಸಿದ್ದಳು.

ದೂರು ನೀಡಿದ ಸುಮಾರು 8 ವರ್ಷಗಳ ಬಳಿಕ ರೂಡಿ ಪತ್ತೆಯಾಗಿದ್ದಾನೆ. ಆತನಿಗೆ ಈಗ 25 ವರ್ಷ. ತನ್ನ ತಾಯಿಯೇ ಅವಳ ಕಾಮಾಸಕ್ತಿ ತೀರಿಸಿಕೊಳ್ಳಲು ನನ್ನನ್ನು ಬಂಧಿಸಿಟ್ಟಿದ್ದಳು ಎಂಬ ಸತ್ಯವನ್ನು ಬಯಲು ಮಾಡಿದ್ದಾನೆ.

ಚರ್ಚ್‌ನ ಹೊರಗೆ ಪತ್ತೆಯಾಗಿರುವ ರೂಡಿ, ಒಂದು ವಾರದ ನಂತರ ತನ್ನ ತಾಯಿಯ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾನೆ. ನನ್ನ ತಾಯಿ ಜೆನ್ನಿ ಸಂತಾನಾ ಸುಮಾರು 8 ವರ್ಷಗಳ ಕಾಲ ಲೈಂಗಿಕ ಗುಲಾಮನಾಗಿ ನನ್ನನ್ನು ಇಟ್ಟುಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾನೆ.

ರೂಡಿ ಪತ್ತೆಯಾದ ನಂತರ, ಅವನನ್ನು ವಿಚಾರಣೆಗೆ ಒಳಪಡಿಸಿದಾಗ, ಅಪ್ಪ ಮೃತಪಟ್ಟ ಬಳಿಕ ನನ್ನ ಗಂಡನಾಗಿ ನೀನು ಇರಬೇಖು ಎಂದು ಒತ್ತಾಯಿಸಿದ್ದಳು. ಅಷ್ಟೇ ಅಲ್ಲ ಯಾರಿಗೂ ಏನನ್ನೂ ಹೇಳಬೇಡ. ಇದನ್ನು ಪೊಲೀಸರಿಗೆ ಹೇಳಿದರೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಳು ಎಂದು ತಿಳಿಸಿದ್ದಾನೆ.

ಈ ಸಂಬಂಧ ಹೂಸ್ಟನ್ ಪೊಲೀಸರು ಕ್ವಾನೆಲ್ ಎಕ್ಸ್ ಅವರ ಸಮ್ಮುಖದಲ್ಲಿ ತಾಯಿ ಜೆನ್ನಿ ಮತ್ತು ಮಗ ರೂಡಿಯನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸಿ, ನಂತರ ಘಟನೆಯ ಸತ್ಯಾಸತ್ಯತೆ ತಿಳಿದು ತಾಯಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Leave a Reply

error: Content is protected !!
LATEST
KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ...