ಬೆಂಗಳೂರು: ಚಿನ್ನದ ಬೆಲೆ ಎನಿಸಿಕೊಂಡಿರುವ ಟೊಮ್ಯಾಟೋವನ್ನು ಹೊತ್ತಿದ್ದ ಬೊಲೆರೋ ವಾಹನವನ್ನೇ ಖದೀಮರು ಎಗರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ರೈತರು ಚಿತ್ರದುರ್ಗದಿಂದ ಟೊಮ್ಯಾಟೋ ಲೋಡ್ ಅನ್ನು ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ಗೆ ಬಂದು ನಿಲ್ಲಿಸುವ ವೇಳೆ ಘಟನೆ ನಡೆದಿದೆ.
ಬೊಲೆರೋ ವಾಹನ ಸಮೇತ 2 ಟನ್ ಟೊಮ್ಯಾಟೋ ಎಗರಿಸಲು ಹೊಂಚುಹಾಕಿಕೊಂಡು ಹಿಂಬಾಲಿಸಿಕೊಂಡು ಬಂದ ಖದೀಮರು ಈ ಕೃತ್ಯ ಎಸಗಿದ್ದಾರೆ.
250 ಕ್ಕೂ ಹೆಚ್ಚು ಟಪಮ್ಯಾಟೋ ಟ್ರೇ ಇದ್ದ ಬೊಲೆರೋ ವಾಹನವನ್ನು ಕಾರಿನಲ್ಲಿ ಬಂದಿದ್ದ ಮೂವರು ಹೈಜಾಕ್ ಮಾಡಿದ್ದಾರೆ. ಟೊಮ್ಯಾಟೋ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಖಧೀಮರು, ಆರ್‌ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಕೂಡ ಹಾಕಿದ್ದರು. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‌ಗೂ ಥಳಿಸಿದ್ದರು.
ಆ ಬಳಿಕ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಎಂದು ಹೆದರಿಸಿದ್ದರು. ಹಣ ಇಲ್ಲ ಎಂದಾಗ ಮೊಬೈಲ್ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ಟೊಮ್ಯಾಟೋ ಗಾಡಿಯಲ್ಲಿ ರೈತನನ್ನು ಕೂರಿಸಿಕೊಂಡು ಹೈಜಾಕ್ ಮಾಡಿದ್ದಾರೆ.
ನಂತರ ಚಿಕ್ಕಜಾಲ ಬಳಿ ಡ್ರೈವರ್‌ನನ್ನು ಬಿಟ್ಟು ಟೊಮ್ಯಾಟೋ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಟೊಮ್ಯಾಟೋಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ತೊಮ್ಯಾಟೋ ಬೆಳೆಗಾರ ರೈತರಲ್ಲಿ ಕಳ್ಳರ ಆತಂಕ ಶುರುವಾಗಿದೆ.