NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

KSRTC ಸ್ಕ್ರ್ಯಾಪ್‌ ಬಸ್‌ಗಳನ್ನೇ ತೆಗೆದುಕೊಂಡು ಹೋಗಬೇಕು: ಚಾಲನಾ ಸಿಬ್ಬಂದಿಗೆ ಡಿಎಂ ತಾಕೀತು

ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಚಿಕ್ಕಮಗಳೂರು ವಿಭಾಗದ ಸಕಲೇಶಪುರ ಘಟಕದ ಕೆಎಸ್ಆರ್ಟಿಸಿಯ ಚಾಲಕರು ಮತ್ತು ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಯ ಮೇಲೆ ದೌರ್ಜನ್ಯ, ಏಕವಚನ ಪದ ಪ್ರಯೋಗ, ಅಧಿಕಾರಿಗಳ ಅಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.

ಸಕಲೇಶಪುರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಗನ್ನಾಥ್ ಎಂಬುವರು ಹುದ್ದೆಯಲ್ಲಿ ಎಡಬ್ಲ್ಯೂಎಸ್ ಆಗಿದ್ದಾರೆ. ಅದರ ಜತೆಗೆ ಸದ್ಯ ಸಕಲೇಶಪುರ ಘಟಕದ ಪ್ರಭಾರಿ ಘಟಕ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ.

ಆದರೆ, ಘಟಕದಲ್ಲಿ ಬಸ್ಗಳನ್ನು ದುರಸ್ತಿಗೊಳಿಸುವುದಕ್ಕೆ ಮಾತ್ರ ಮುಂದಾಗುವುದಿಲ್ಲ. ಈ ಬಗ್ಗೆ ಚಾಲಕ ನಿರ್ವಾಹಕರು ಕೇಳಿದರೆ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಕಳುಹಿಸುತ್ತಾರೆ.

ಇವರು ಬಾಯಿ ಬಿಟ್ಟರು ಎಂದರೆ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಕೆಟ್ಟ ಪದಗಳ ಪ್ರಯೋಗವನ್ನೇ ಮಾಡುವುದು. ಇವರ ಸೊಂಟದ ಕೆಳಗಿನ ಬೈಗುಳಗಳಿಂದ ಘಟಕದ ನೌಕರರು ಬೇಸತ್ತುಹೋಗಿದ್ದಾರೆ.

ಇನ್ನು ಘಟಕದಲ್ಲಿ ಎಕ್ಸ್‌ಪ್ರೆಸ್ ಅನುಸೂಚಿಗಳನ್ನು ಕಾರ್ಯಾಚರಣೆ ಮಾಡುತ್ತಿರುವಂತಹ ಚಾಲನಾ ಸಿಬ್ಬಂದಿಗಳಿಂದ ಮಂತ್ಲಿ ನೀಡಬೇಕಂತೆ. ಒಂದು ವೇಳೆ ಕೊಡದಿದ್ದರೆ, ಮುಗಿದೆ ಹೋಯಿತು. ನಾವು ಮೇಲಿನವರಿಗೆ ಕೊಡಬೇಕು. ನೀವು ಹೀಗೆ ಮಾಡಿದರೆ ಹೇಗೆ ಎಂದು ಇನ್ನಷ್ಟು ಸೊಂಟದ ಕೆಳಗಿನ ಪದ ಪ್ರಯೋಗ ಮಾಡಿ ಹಿಂಸೆ ನೀಡುತ್ತಿದ್ದಾರೆ ಎಂದು ನೌಕರರು ಅಲವತ್ತುಕೊಂಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲಧಿಕಾರಿಗಳು ಇಂಥ ಕೆಳಹಂತದ ಅಧಿಕಾರಿಗಳಿಗೆ ತಿಂಗಳಿಗೆ ಇಂತಿಷ್ಟು ಎಂಬ ಸೂಟ್ಕೇಸ್ಸಂಸ್ಕೃತಿ ಅಳವಡಿಸಿಕೊಂಡಿದ್ದಾರೆ. ಅದನ್ನು ಕೆಳಹಂತದ ಅಧಿಕಾರಿಗಳು ಕೇಳದಿದ್ದರೆ ಅವರನ್ನು ವರ್ಗಾವಣೆ ಇಲ್ಲ ಯಾವುದಾದರು ಒಂದು ಪ್ರಕರಣದಲ್ಲಿ ಸಿಲುಕಿಸಿ ಮಾನಸಿಕ ಹಿಂಸೆ ನೀಡುತ್ತಾರೆ.

ಇನ್ನು ಈ ಮೇಲಧಿಕಾರಿಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಈ ಕೆಳಹಂತದ ಅಧಿಕಾರಿಗಳು ಚಾಲನಾ ಮತ್ತು ತಾಂತ್ರಿಕಾ ಸಿಬ್ಬಂದಿಯ ರಕ್ತಬಸಿಯಲು ಮುಂದಾಗುತ್ತಾರೆ. ಇಲ್ಲಿ ಕೊನೆಯದಾಗಿ ಕಷ್ಟಕ್ಕೆ ಸಿಲುಕಿಕೊಳ್ಳುವವರು ಈ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ಮಾತ್ರ.

ಇನ್ನು ಸರಿಯಾಗಿ ಫಿಟ್ನೆಸ್ಇರುವ ಬಸ್ಗಳನ್ನು ಕೊಡದೆ. ಚಾಲನಾ ಸಿಬ್ಬಂದಿಯನ್ನು ನಿಂದಿಸುವುದು. ಹೌದು! ಇದು ಸ್ಕ್ರ್ಯಾಪ್ಗಾಡಿ ಇದನ್ನೇ ನೀನು ತೆಗೆದುಕೊಂಡು ಹೋಗಬೇಕು ಎಂದು ತಾಕೀತು ಮಾಡುವುದು. ಸ್ಕ್ರ್ಯಾಪ್ಗಾಡಿಗಳನ್ನು ತೆಗೆದುಕೊಂಡು ಹೋಗಿ ಪ್ರಯಾಣಿಕರಿಗೆ ತೊಂದರೆ ಆದರೆ, ಕಾರಣ ಕೇಳಿ ಮೆಮೋ ಕೊಡುವುದು.

ಒಟ್ಟಾರೆ, ಡಿಪೋ ಮಟ್ಟದಲ್ಲಿ ನಡೆಯುವ ಮತ್ತು ಅಧಿಕಾರಿಗಳು ನಡೆದುಕೊಳ್ಳುವ ನಡೆಯನ್ನು ನಿಯಂತ್ರಿಸುವಲ್ಲಿ ಯಾವುದೇ ನೌಕರರ ಪರ ಸಂಘಟನೆಗೂ ಬೀಜ ಇಲ್ಲದಿರುವುದರಿಂದ ನೌಕರರು ಈ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಇನ್ನು ಕಾನೂನಿನ ಪ್ರಕಾರ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳೆ ವಾಮ ಮಾರ್ಗದಲ್ಲಿ ಹೋದರೆ ಕೇಳುವವರಾರು?

ಇನ್ನಾದರೂ ಚಿಕ್ಕಮಗಳೂರು ವಿಭಾಗದ ಸಕಲೇಶಪುರ ಘಟಕದ ಪ್ರಭಾರಿ ವ್ಯವಸ್ಥಾಪಕರ ಬಾಯಿಗೆ ಬೀಗಹಾಕಿ ನೌಕರರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವುದಕ್ಕೆ ತಾಕೀತು ಮಾಡಬೇಕು. ಜತೆಗೆ ಈತನ ಲಂಚಗುಳಿತನದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಮಾರ್ಗಗಳಿಗೆ ನೀಡುವ ಬಸ್ಗಳು ಫಿಟ್ನೆಸ್ಆಗಿರಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ...