NEWSಕೃಷಿನಮ್ಮಜಿಲ್ಲೆ

ವೃತ್ತಿ ಒತ್ತಡದ ನಡುವೆಯೂ ಟೊಮ್ಯಾಟೋ ಬೆಳೆದು ಲಕ್ಷ ಲಕ್ಷ ಹಣ ಗಳಿಸಿದ ಪೊಲೀಸಪ್ಪ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಖರೀದಿ ಮಾಡೋದಂತೂ ದೂರದ ಮಾತಾಗಿಬಿಟ್ಟಿದೆ. ಈ ಬೆಲೆ ಏರಿಕೆ ಬೇಡಿಕೆ ಮಾತ್ರ ತಗ್ಗಿಲ್ಲ. ಇದರ ಲಾಭದಲ್ಲಿ ಭರ್ಜರಿಯಾಗಿ ಟೊಮ್ಯಾಟೋ ಬೆಳೆದ ಪೊಲೀಸಪ್ಪನೊಬ್ಬ ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ.

ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ಬೇಲೂರು ತಾಲೂಕಿನ ಹಳೆಬೀಡು ಹೋಬಳಿ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಸದ್ಯ ಟೊಮ್ಯಾಟೋವನ್ನು ಒಂದು ಎಕರೆ 6 ಗುಂಟೆಯಲ್ಲಿ ಬೆಳೆದು, ಈಗಾಗಲೇ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಈಗಾಗಲೇ ಸಾವಿರ ಬಾಕ್ಸ್​ ಟೊಮ್ಯಾಟೋ ಮಾರಿರುವ ಬೈರೇಶ್​ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಇನ್ನೂ ಸಾವಿರ ಬಾಕ್ಸ್ ಟೊಮ್ಯಾಟೋ ಮಾರುವ ನಿರೀಕ್ಷೆಯಲ್ಲಿದ್ದಾರೆ.

ಕಳ್ಳರ ಕಾಟ ತಪ್ಪಿಲ್ಲ: ಸರ್ಕಾರಿ ಕೆಲಸದ ಒತ್ತಡದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಲಕ್ಷಾಂತರ ರೂಪಾಯಿಯ ಲಾಭವನ್ನು ಬೈರೇಶ್ ಪಡೆದಿದ್ದಾರೆ. ಆದರೆ, ಸ್ವತಃ ಪೊಲೀಸ್ ಪೇದೆಯೇ ತಮ್ಮ ಹೊಲದಲ್ಲೂ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗಾಗಲೇ ನೂರಕ್ಕೂ ಹೆಚ್ಚು ಬಾಕ್ಸ್ ಟೊಮ್ಯಾಟೋವನ್ನು ಖದೀಮರು ಕಳುವು ಮಾಡಿದ್ದಾರೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಬೈರೇಶ್​, ರಾತ್ರಿಯಿಡಿ ಹೊಲದಲ್ಲಿ ಕಾವಲು ಹಾಕಿ ಬೆಳೆ ಕಾಪಾಡಿಳ್ಳುತ್ತಿದ್ದಾರೆ.

ಬೈರೇಶ್​ ಕುಟುಂಬ ಖುಷ್​: ಮಳೆ ಕೊರತೆ, ರೋಗ ಬಾದೆ ಹಾಗೂ ಕಳ್ಳರ ಕಾಟ ನಡುವೆಯೂ ಬೈರೇಶ್​ ಟೊಮ್ಯಾಟೋ ಬೆಳೆದು ಭರ್ಜರಿ ಆದಾಯ ಗಳಿಸಿದ್ದಾರೆ. ಉಡುಪಿ, ಮಂಗಳೂರಿನಿಂದ ಬಂದು ಬಸ್ತಿಯಲ್ಲಿರುವ ಬೈರೇಶ್ ಹೊಲದಲ್ಲಿ ವರ್ತಕರು ಟೊಮ್ಯಾಟೋ ಖರೀದಿ ಮಾಡುತ್ತಿದ್ದಾರೆ. ಹೆಚ್ಚಿನ ಆದಾಯದಿಂದ ಬೈರೇಶ್​ ಕುಟುಂಬವೂ ಕೂಡ ತುಂಬಾ ಖುಷಿಯಾಗಿದೆ.

Leave a Reply

error: Content is protected !!
LATEST
KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ...