ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸರ್ಕಾರ ಶಕ್ತಿ ಯೋಜನೆಯ ಕಳೆದ ಜೂನ್ ತಿಂಗಳ ಹಣವನ್ನು ಇನ್ನು ಬಿಡುಗಡೆ ಮಾಡಿಲ್ಲ. ಇದರಿಂದ ಈ ತಿಂಗಳ ವೇತನ ಕೊಡುವುದಕ್ಕೆ ಆಗಸ್ಟ್ ತಿಂಗಳಿನಲ್ಲಿ ಸಮಸ್ಯೆ ಆಗಬಹುದು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸಾರಿಗೆ ಅಧಿಕಾರಿಗಳು ಮಾತನಾಡಿದ್ದು, ಜೂನ್ ತಿಂಗಳ 11ನೇ ತಾರೀಖಿನಿಂದ ಜಾರಿಗೆ ಬಂದಿರುವ ಶಕ್ತಿ ಯೋಜನೆಯಡಿ ಜೂನ್ 11ರಿಂದ ಜೂನ್ 30ರವರೆಗೆ 10,54,45,047 ಮಹಿಳೆಯರು ಪ್ರಯಾಣಿಸಿದ್ದಾರೆ. ಅಂದರೆ ಜೂನ್ ತಿಂಗಳ ಹಣ 248,30,13,266 ರೂ.ಗಳು ಇನ್ನೂ ಬಿಡುಗಡೆ ಮಾಡದಿರುವುದು ನಿಗಮಗ ಅಧಿಕಾರಿಗಳು ಮತ್ತ ನೌಕರರಿಗೆ ವೇತನ ಕೊಡುವುದಕ್ಕೆ ಭಾರಿ ತೊಂದರೆಯಾಗಲಿದೆ.
ಹೀಗಾಗಿ ಸಂಬಂಧ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡಿ ಆರ್ಥಿಕ ಇಲಾಖೆಯಿಂದ ಈ ತಿಂಗಳ ಕಳೆಯುವುದರೊಳಗೇ ಜೂನ್ ತಿಂಗಳ ಹಣ 248,30,13,266 ರೂ.ಗಳನ್ನು ಬಿಡುಗಡೆ ಮಾಡಿಸಬೇಕು. ಅದರ ಜತೆಗೆ ಜುಲೈ ತಿಂಗಳು ಎಷ್ಟು ಮಹಿಳೆಯರು ನಿತ್ಯ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ತಕ್ಷಣವೆ ನೀಡುತ್ತಿದ್ದು, ಅದರ ಹಣವನ್ನು ಆಗಸ್ಟ್ 2ನೇ ತಾರೀಖಿನೊಳಗೆ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಪ್ರಯಾಣಿಸುತ್ತಿದ್ದು, ಮಹಿಳೆಯರ ಜತೆಗೆ ಅವರ ಕುಟುಂಬದ ಪುರುಷರು ಕೂಡ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಈ ಹಿಂದಿನ ವರ್ಷಕ್ಕಿಂತ ಈಗ ಹೆಚ್ಚು ಆದಾಯ ಬರುತ್ತಿದೆ ಎಂದು ಅಧಿಕಾರಿಗಳು ಖುಷಿಯಿಂದ ಹೇಳುತ್ತಿದ್ದಾರೆ.
ಆದರೆ, ಸರ್ಕಾರ ಮಾತ್ರ ಪ್ರತಿ ತಿಂಗಳು ತಪ್ಪದೆ ಶಕ್ತಿ ಯೋಜನೆಯಡಿ ಪ್ರಯಾಣಿಸಿದ ಮಹಿಳೆಯರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅದು ವಿಳಂಬವಾದರೆ ವೇತನ ಕೊಡುವುದಕ್ಕೆ ಮತ್ತು ಡೀಸೆಲ್ ಕರೀದಿಸುವುದಕ್ಕೂ ಸಮಸ್ಯೆ ಆಗಲಿದೆ ಎಂದು ಹೇಳುತ್ತಿದ್ದಾರೆ.
ಇನ್ನು ಜೂನ್ ತಿಂಗಳು ಪ್ರಯಾಣಿಸಿರುವ ಮಹಿಳೆಯರ ಎಲ್ಲ ಮಾಹಿತಿಯನ್ನು ಅವರು ಕ್ರಮಿಸಿದ ದೂರ ಮತ್ತು ಎಷ್ಟು ಹಣದ ಟಿಕೆಟ್‌ಗಳನ್ನು ನೀಡಲಾಗಿದೆ ಎಂಬುದರ ಮಾಹಿತಿ ನೀಡಿದ್ದು, ಈ ಬಗ್ಗೆ ಸಿಎಂ ಮತ್ತು ಸಾರಿಗೆ ಸಚಿವರು ಕೂಡಲೇ ಹಣ ಬಿಡುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇದಿಷ್ಟೇ ಅಲ್ಲದೆ ಅಧಿಕಾರಿಯೊಬ್ಬರು ಜೂನ್ ತಿಂಗಳ ಹಣ ಇನ್ನು ಬಿಡುಗಡೆ ಮಾಡಿಲ್ಲ ಎಂಬ ಬಗ್ಗೆ ಮಾತನಾಡಿದರುವ ವಿಡಿಯೋ ಒಂದು ಈಗಾಗಲೇ ವೈರಲ್ ಆಗಿದ್ದು, ಇನ್ನಾದರೂ ಸರ್ಕಾರ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಕೂಡ ಒತ್ತಾಯಿಸಿದ್ದಾರೆ.