NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ತುಮಕೂರು ಜಿಲ್ಲೆಯ ಸುಮಾರು 700 ಹಳ್ಳಿಗಳಿಗೆ ಬಸ್ಸೇ ಬರುತ್ತಿಲ್ಲ- ನಂಬಲಸಾಧ್ಯವಾದರೂ ಇದು ಸತ್ಯ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದ್ದರೂ ಜಿಲ್ಲೆಯ ಸಾಕಷ್ಟು ಗ್ರಾಮಗಳಿಗೆ ಇನ್ನೂ ಕೆಎಸ್‌ಆರ್‌ಟಿಸಿ ಬಸ್ ತಲುಪಿಲ್ಲ. ಜಿಲ್ಲೆಯಲ್ಲಿ 2,726 ಹಳ್ಳಿಗಳಿದ್ದು, 2,062 ಹಳ್ಳಿಗಳಿಗೆ ಮಾತ್ರ ಬಸ್ ಸಂಪರ್ಕವಿದೆ.

ಕೆಎಸ್‌ಆರ್‌ಟಿಸಿ ಗುರುತಿರುವ 391 ರಾಷ್ಟ್ರೀಯ ವಲಯಕ್ಕೆ ಸಂಪೂರ್ಣ ಬಸ್ ಸೌಲಭ್ಯ ಒದಗಿಸಲಾಗಿದೆ. ರಾಷ್ಟ್ರೀಕೃತವಲ್ಲದ ಒಟ್ಟು 2,335 ಹಳ್ಳಿಗಳನ್ನು ಗುರುತಿಸಿದ್ದು, ಈ ಪೈಕಿ 2,062 ಹಳ್ಳಿಗಳಿಗೆ ಮಾತ್ರ ಬಸ್‌ ಸೌಲಭ್ಯವಿದೆ. ತುಮಕೂರು ತಾಲೂಕಿನ 338 ಹಳ್ಳಿಗಳ ಪೈಕಿ 18 ಹಳ್ಳಿಗೆ ಬಸ್ ಸೌಲಭ್ಯವಿಲ್ಲ.

ಇನ್ನು ಗುಬ್ಬಿ ತಾಲೂಕಿನಲ್ಲಿ 290 ಹಳ್ಳಿಗಳ ಪೈಕಿ 24 ಗ್ರಾಮಕ್ಕೆ ಬಸ್ ಹೋಗುತ್ತಿಲ್ಲ. ಕುಣಿಗಲ್‌ನಲ್ಲಿ 262ರ ಪೈಕಿ 18 ಗ್ರಾಮಗಳು ಬಸ್‌ ಬರುವಿಕೆಗಾಗಿ ಕಾಯುತ್ತಿವೆ. ಆಶ್ಚರ್ಯ ಎಂಬಂತೆ ತುರುವೇಕೆರೆಯ ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯವಿದೆ ಎಂದು ಕೆಎಸ್‌ಆರ್‌ಟಿಸಿ ಅಂಕಿ-ಅಂಶ ನೀಡಿದೆ.

ತಿಪಟೂರು ತಾಲೂಕಿನ 197 ಗ್ರಾಮಗಳ ಪೈಕಿ 10, ಚಿಕ್ಕನಾಯಕನಹಳ್ಳಿ ತಾಲೂಕಿನ 235 ಗ್ರಾಮಗಳ ಪೈಕಿ 43 ಗ್ರಾಮಗಳು ಸರ್ಕಾರಿ ಬಸ್‌ಗಳ ಓಡಾಟವನ್ನು ನೋಡೇ ಇಲ್ಲ. ಶಿರಾ ತಾಲೂಕಿನ 232 ರಾಷ್ಟ್ರೀಕೃತ ಗ್ರಾಮಗಳ ಪೈಕಿ 18, ಮಧುಗಿರಿಯಲ್ಲಿ 323ರ ಪೈಕಿ 33, ಕೊರಟಗೆರೆ 252ರ ಪೈಕಿ ಬರೋಬ್ಬರಿ 76 ಹಾಗೂ ಪಾವಗಡ ತಾಲೂಕಿನ 154ರ ಪೈಕಿ 33 ಗ್ರಾಮಗಳಿಗೆ ಬಸ್ ಸೌಲಭ್ಯವನ್ನು ಕೂಡಲೇ ನೀಡಬೇಕಿದೆ.

ತುಮಕೂರು ಜಿಲ್ಲೆಯ ಶೇ.89.73 ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಸೇವೆ ಒದಗಿಸಿದ್ದು ಇನ್ನೂ ಶೇ.11 ಹಳ್ಳಿಗಳಲ್ಲಿ ಕನಿಷ್ಠ ಒಂದು ಬಸ್ ಕೂಡ ಸಂಚರಿಸದಿರುವುದು ಸಾರಿಗೆ ಸೇವೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬುದಕ್ಕೆ ತಾಜಾ ನಿರ್ಶನವಾಗಿದೆ.

ಸುತ್ತು ಮಾರ್ಗ, ಪ್ರಯಾಣಿಕರ ಕೊರತೆ, ಅಂತಾರಾಜ್ಯ ಪರವಾನಗಿ, ರಸ್ತೆ ಸಮಸ್ಯೆ ಸೇರಿದಂತೆ ಮತ್ತಿತರರ ಕಾರಣದಿಂದ ಬಸ್ ಕಾರ್ಯಾಚರಣೆ ಕೈಗೊಳ್ಳಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಿಂದೇಟುಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!
LATEST
ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ