ಮೈಸೂರು: ಪ್ರಿಯಕರ ಕೈಕೊಟ್ಟಿದ್ದಕ್ಕೆ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೆ.ಆರ್. ನಗರದ ಗೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ನಿಸರ್ಗ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ನಿಸರ್ಗ ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ಅನನ್ಯ, ಸುಹಾಸ್ ಹಾಗೂ ಆತನ ತಂದೆ ಗೋಪಾಲಕೃಷ್ಣ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ನಾಲ್ಕು ವರ್ಷದ ಪ್ರೀತಿ: ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಸುಹಾಸ್ ರೆಡ್ಡಿ ಎಂಬಾತನನ್ನು ಪ್ರೀತಿಸುತ್ತಿದ್ದಳು. 4 ವರ್ಷದಿಂದ ಪ್ರೀತಿಸಿ ಎಲ್ಲ ಕಡೆ ಸುತ್ತಾಡಿದ್ದರು. ಆದರೆ ಸುಹಾಸ್ ನಿಸರ್ಗಳಿಗೆ ಕೈಕೊಟ್ಟು ಮತ್ತೊಬ್ಬ ಯುವತಿಯ ಪ್ರೀತಿಗೆ ಬಿದ್ದಿದ್ದನು.
ಇದರಿಂದ ಮನನೊಂದಿದ್ದ ನಿಸರ್ಗ ಸುಹಾಸ್ ತಂದೆ ತಾಯಿಗೆ ವಿಚಾರ ಹೇಳಿದರೂ ಸ್ಪಂದಿಸಲಿಲ್ಲ. ಈ ವಿಚಾರವಾಗಿ ಅವಮಾನಿಸದರೆಂದು ನಿಸರ್ಗ ಡೆತ್ ನೋಟ್ನಲ್ಲಿ ಬರೆದಿದ್ದಾಳೆ. ನನ್ನ ಸಾವಿಗೆ ಅನನ್ಯ, ಸುಹಾಸ್ ಹಾಗೂ ತಂದೆ ಆತನ ಗೋಪಾಲಕೃಷ್ಷ ಕಾರಣ. ಅವರನ್ನು ಸುಮ್ಮನೆ ಬಿಡಬೇಡಿ ಅಪ್ಪ, ನನ್ನನ್ನು ಕ್ಷಮಿಸಿಬಿಡಿ ಎಂದು ಯುವತಿ ವಿಷ ಸೇವಿಸಿದ್ದಾಳೆ.
ರೀಲ್ಸ್ ಮಾಡಿದ ನಿಸರ್ಗ: ಇನ್ನು ಈ ಮುನ್ನ ನಿಸರ್ಗ ಕೈ ಕೊಯ್ದುಕೊಂಡು ರೀಲ್ಸ್ ಮಾಡಿದ್ದಾಳೆ. ಬಳಿಕ ವಿಷ ಸೇವಿಸಿದ್ದಾಳೆ. ನಂತರ ಈ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆ ನಿಸರ್ಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಈ ಪ್ರಕರಣ ಸಂಬಂಧ ಐವರ ವಿರುದ್ಧ ಕೆ.ಆರ್. ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.