ಬೆಂಗಳೂರು ಗ್ರಾಮಾಂತರ: ಕೊರೊನ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಹಾಗೂ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರಿಗೆ ಆಕಾಶ್ ಮೆಡಿಕಲ್ ಕಾಲೇಜ್ ದೇವನಹಳ್ಳಿ ತಾಲೂಕು Quarantine Facilities ಒದಗಿಸಲು ಮಾರ್ಚ್ 13 ರಿಂದ 24×7ರಂತೆ ಶಿಫ್ಟ್ ವೈಸ್ ಕಾರ್ಯ ನಿರ್ವಹಿಸುತ್ತಿದೆ. ಖುದ್ದಾಗಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು Quarantine Screening Center ಗೆ ಕರೆತಂದು ವೈದ್ಯಾಧಿಕಾರಿಗಳಿಂದ ತಪಾಸಣೆ ಮಾಡಲಾಗುತ್ತಿದೆ ಎಂದರು.
ಆಕಾಶ್ ಆಸ್ಪತ್ರೆಯ ಸ್ಕ್ರೀನಿಂಗ್ ಸೆಂಟರ್ ನಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಮಾರ್ಚ್ 13 ರಿಂದ ಮಾರ್ಚ್ 23 ರ ವರೆಗೆ ಒಟ್ಟು 4028 ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, 34 ಎ ವರ್ಗ, 273 ಬಿ ವರ್ಗ, 3721 ಸಿ ವರ್ಗಕ್ಕೆ ಸೇರಿದವರಾಗಿದ್ದಾರೆ ಹಾಗೂ ಇದುವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಟ್ಟಿರುವ ಒಟ್ಟು ಪ್ರಯಾಣಿಕರ ಸಂಖ್ಯೆ:89,963 ಎಂದು ಮಾಹಿತಿ ನೀಡಿದರು.
Quarantine Facilities centers for cat-B ದೇವನಹಳ್ಳಿಯ ಆಕಾಶ್ ಹಾಸ್ಪಿಟಲ್ ನಲ್ಲಿ 97, ಹೊಸಕೋಟೆಯ ಎಂ.ವಿ.ಜೆ ಹಾಸ್ಪಿಟಲ್ ನಲ್ಲಿ 52, ನೆಲಮಂಗಲದ ತಾಲ್ಲೂಕು ಆಸ್ಪತ್ರೆ 5, ಸಿದ್ಧಾರ್ಥ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 1 ಸೇರಿದಂತೆ ಒಟ್ಟು 155 ಬಿ ವರ್ಗಕ್ಕೆ ಸೇರಿದವರನ್ನು Quarantine Facilities ಆಸ್ಪತ್ರೆಯಲ್ಲಿರಿಸಲಾಗಿದೆ. ಹೊಸಕೋಟೆ 11, ದೇವನಹಳ್ಳಿ 34, ದೊಡ್ಡಬಳ್ಳಾಪುರ 06, ನೆಲಮಂಗಲ 05 ಬಿ ವರ್ಗದವರನ್ನು ಮನೆಯಲ್ಲಿಯೇ ಪ್ರತ್ಯೇಕ ವ್ಯವಸ್ಥೆಯಲ್ಲಿರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಅವುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿಗಳು ಮತ್ತು ಆ್ಯಂಬುಲೆನ್ಸ್ ಗಳ ಮಾಹಿತಿಯನ್ನು ಸಂಗ್ರಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೊರೋನಾ ಸಂಬಂಧಿತ ತ್ವರಿತ ಮಾಹಿತಿ ಹಾಗೂ ಸೇವೆಗಾಗಿ ಬಿಬಿಎಂಪಿ ವಾರ್ ರೂಂ ಸ್ಥಾಪಿಸಲಾಗಿದ್ದು, ಹೆಲ್ಪ್ ಲೈನ್ ಸಂಖ್ಯೆ: 080 22660000 ಹಾಗೂ 080 22221188 ಕರೆ ಮಾಡುವಂತೆ ಸಚಿವರು ಮಾಹಿತಿ ನೀಡಿದರು ಹಾಗೂ ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯ ದೂರು ನಿರ್ವಹಣಾ ಕೋಶ ಕಂಟ್ರೋಲ್ ರೂಮ್ ಸಹಾಯವಾಣಿ ಕೇಂದ್ರ (ದೂರವಾಣಿ ಸಂಖ್ಯೆ: 080-29781021) 24×7 ರೀತಿ ಇಂದಿನಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕೊರೋನಾ ಸೋಂಕು ತಡೆಯಲು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ 500 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ತಕ್ಷಣ ಸ್ಪಂದಿಸಲಿದ್ದಾರೆ ಎಂದರು. ಹಾಗೂ ಕೊರೋನಾ ಸಮರದಲ್ಲಿ ದುಡಿಯುತ್ತಿರುವ ಎಲ್ಲ ಸಿಬ್ಬಂದಿಗೂ ಕೂಡಲೇ ವಿಶೇಷ ಪಾಸ್ ವಿತರಿಸುವಂತೆ ಸಚಿವರು ಸೂಚಿಸಿದರಲ್ಲದೆ ಎಲ್ಲಾ ಕಡೆ ಪೊಲೀಸ್ ತಪಾಸಣೆ ಇರುವುದರಿಂದ ಸಿಬ್ಬಂದಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಪಾಸ್ ಅವಶ್ಯಕವಾಗಿದೆ. ಆದರೆ ಪಾಸ್ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕು ಇರುವವರು ಪತ್ತೆಯಾಗಿಲ್ಲ. ಕೊರೋನಾ ವೈರಸ್ ಶಂಕಿತರ ತಪಾಸಣೆ ನಿಗಾ ದಿನವನ್ನು ಮತ್ತೆರಡು ದಿನ ವಿಸ್ತರಣೆಗೆ ಕ್ರಮಕೈಗೊಳ್ಳಬೇಕು. ನಿಯಮ ಮೀರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಕೋವಿಡ್-19 ಸೋಂಕು ಹರಡದಂತೆ ಕ್ರಮವಹಿಸಲು 4,52 ಕೋಟಿ ರೂ.ಗಳನ್ನು ಎಸ್.ಡಿ.ಆರ್.ಅಫ್ ನಿಧಿಯಿಂದ ಬಳಸಿಕೊಳ್ಳಲು ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದರು.
ಎನ್-95 ಮಾಸ್ಕ್ ಹ್ಯಾಂಡ್ ಗ್ಲೋಸ್, ಔಷಧಿಗಳು, ಥರ್ಮಲ್ ಟಾರ್ಚ್, ಸ್ಯಾನಿಟೈಸರ್ ಇತ್ಯಾದಿ ಅವಶ್ಯವಿರುವ ಸಾಮಾಗ್ರಿಗಳನ್ನು ಖರೀದಿಸಲು ಕ್ರಮಕೈಗೊಳ್ಳಬೇಕು ಮತ್ತು Quarantine Facilities Centers ಒಳಗೆ ಮತ್ತು ಹೊರಗೆ ಶುಚಿ ಮತ್ತು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯವಿರುವ ಪೌರಕಾರ್ಮಿಕರನ್ನು ನೇಮಿಸಲು ಕ್ರಮಕೈಗೊಳ್ಳಬೇಕು ಎಂದರು.