ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಮೇಲೆ ಜಾಹೀರಾತುಗಳ ಪ್ರಕಟಿಸಿ ತನ್ನ ಆದಾಯ ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಇದರಿಂದ ಪ್ರಯಾಣಿಕರು ವಿಶೇಷವಾಗಿ ವೃದ್ಧರು ತಮ್ಮ ಬಸ್‌ಗಳನ್ನು ತ್ವರಿತವಾಗಿ ಗುರುತಿಸಲಾಗದ ಪರಿಸ್ಥಿತಿ ಉಂಟಾಗಿದೆ.
ಈ ಮೊದಲು, ಬಸ್‌ಗಳನ್ನು ಗುರುತಿಸುವುದು ನಮಗೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಭಾರಿ ಕಷ್ಟವಾಗುತ್ತಿದೆ. ಏಕೆಂದರೆ ಇಡೀ ಬಸ್ ಹೊರಮೈ ಬರಿ ಜಾಹೀರಾತುಗಳಿಂದ ತುಂಬಿದ್ದು ಇದು ಬಿಎಂಟಿಸಿ ಬಸ್ಸೋ ಅಥವಾ ಬೇರೆಯದೋ ಎಂದು ಗೊತ್ತಾಗುವುದಕ್ಕೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುವ ಕತ್ತರಿಗುಪ್ಪೆಯ ನಿವಾಸಿ ಅಂಬೂಜಾಕ್ಷಿ ತಿಳಿಸಿದ್ದಾರೆ.
ನಾವು ಈ ಹಿಂದೆ ಬಸ್ ಎಲ್ಲಿಗೆ ಪ್ರಯಾಣಿಸುತ್ತಿದೆ ಮತ್ತು ಯಾವಾಗ ಇಳಿಯಲು ಸಿದ್ಧರಾಗಿರಬೇಕು ಎಂದು ಸುಲಭವಾಗಿ ತಿಳಿಯಬಹುದಿತ್ತು. ಆದರೆ, ಇತ್ತೀಚೆಗೆ ಬಸ್ ಪಕ್ಕದ ಫಲಕಗಳಲ್ಲಿಯೂ ಜಾಹೀರಾತುಗಳನ್ನು ಹಾಕುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದ ನಾವು ಎಷ್ಟೋ ಬಾರಿ ಬಂದ ಬಸ್‌ಅನ್ನು ಮಿಸ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅದರಲ್ಲೂ ಸಾರಿಗೆ ಬಸ್‌ಅನ್ನು ನಿಯಮಿತವಾಗಿ ಬಳಸುವ ಅನೇಕ ಹಿರಿಯ ನಾಗರಿಕರು, ತಮ್ಮ ಸ್ಥಳಗಳಿಗೆ ಹೋಗುವ ಬಸ್‌ಗಳನ್ನು ಗುರುತಿಸಲು ಕಷ್ಟ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಬಿಎಂಟಿಸಿ ಆದಾಯ ಕಡಿಮೆಯಾಗಿದೆ. ಹೀಗಾಗಿ ಜಾಹೀರಾತು ಆದಾಯ ಮೂಲಗಳಲ್ಲಿ ಒಂದಾಗಿದ್ದು, ಬಸ್‌ಗಳ ಹಿಂದಿನ ಫಲಕದಲ್ಲಿ ಜಾಹೀರಾತುಗಳನ್ನು ಅನುಮತಿಸಲಾಗುತ್ತಿದೆ. ಬಸ್ಸಿನ ಸುತ್ತಲೂ ಸಂಪೂರ್ಣ ಜಾಹೀರಾತು ಹಾಕುವುದು ಹೆಚ್ಚಿನ ಆದಾಯ ನೀಡುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ನಗರದಾದ್ಯಂತ ಈ ಬಸ್‌ಗಳ ಸಂಚಾರವಿದೆ. ಪ್ರತಿಯೊಂದು ಬಸ್‌ಗಳ ಮೇಲೆ ಸಂಪೂರ್ಣ ಜಾಹೀರಾತುಗಳನ್ನು ಹಾಕಲಾಗಿದೆ. ಈದರಿಂದ ಆದಾಯ ಉತ್ಪಾದನೆ ಅಗತ್ಯವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಅಂತಾರಾಷ್ಟ್ರೀಯ ಖ್ಯಾತಿಯ ನಗರವಾದ ಬೆಂಗಳೂರಿನಲ್ಲಿ ಸಾರಿಗೆ ಬಸ್ಸಿನ ಸುತ್ತಲೂ ಜಾಹೀರಾತು ಹಾಕುವುದು ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಮಾರ್ಗದಲ್ಲಿ ಅಲ್ಲದೆ, ಬೇರೆ ಜಾಹೀರಾತುಗಳ ಮೂಲಕವೂ ಬಿಎಂಟಿಸಿ ಆದಾಯ ಗಳಿಸಬಹುದು ಎಂದು ಶಿಕ್ಷಣ ಇಲಾಖೆಯ ಉದ್ಯೋಗಿ ಮಂಜುನಾಥ್ ಎಂಬುವವರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.
ಬಸ್‌ಗಳ ಪಕ್ಕದ ಫಲಕಗಳಲ್ಲಿನ ಜಾಹೀರಾತುಗಳು ‘ಪಾರದರ್ಶಕ’ವಾಗಿದ್ದರೆ, ಉಳಿದವು ವಾಲ್ ಪೇಪರ್ ರೀತಿಯಲ್ಲಿ ಮಾಡಲ್ಪಟ್ಟಿವೆ. ಈ ಜಾಹೀರಾತುಗಳು ಯಾವುದೇ ರೀತಿಯಲ್ಲಿ ಬಸ್ ಸೂಚನಾ ಫಲಕಗಳು, ಮುಂಭಾಗ ಮತ್ತು ಹಿಂಭಾಗದ ದೀಪಗಳು, ಡಿಪೋ ಸಂಖ್ಯೆಗಳು, ವಾಹನ ನೋಂದಣಿ ಸಂಖ್ಯೆ ಮತ್ತು ಇತರವುಗಳನ್ನು ನಿರ್ಬಂಧಿಸಬಾರದು ಎಂಬುದು ಷರತ್ತುಗಳಾಗಿವೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
Related

You Might Also Like
BMTC: ಸ್ಕೂಟರ್ ಸ್ಕಿಡ್ಆಗಿ ಬಿದ್ದ ಬಾಲಕಿ ಬಸ್ ಹಿಂದಿನ ಚಕ್ರಕ್ಕೆ ಸಿಲುಕಿ ಸಾವು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ 10 ವರ್ಷದ ಬಾಲಕಿ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್...
ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ಬೆಂಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಆದಿ ಜಾಂಬವ ಅಭಿವೃದ್ಧಿ ನಿಗಮಗದಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ...
ಉತ್ತರಾಖಂಡ್ನ 6ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ-ಸದಸ್ಯರ ನಿಯೋಗ ಗ್ರಾಮಾಂತರ ಜಿಲ್ಲೆಗೆ ಭೇಟಿ
ಬೆಂಂಗಳೂರು ಗ್ರಾಮಾಂತರ: ಉತ್ತರಾಖಂಡ್ ರಾಜ್ಯದ 6ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ರವಿಶಂಕರ್, ಸದಸ್ಯರಾದ ಜಂಗ್ಪಂಗಿ, ಎಂ.ಸಿ. ಜೋಷಿ ಅವರ ನಿಯೋಗವು ಅಧ್ಯಯನಕ್ಕಾಗಿ ಇಂದು ಜಿಲ್ಲೆಗೆ ಭೇಟಿ...
NWKRTC: UPI ಮೂಲಕ ಹೆಚ್ಚು ಟಿಕೆಟ್ ವಿತರಿಸಿದ ನಿರ್ವಾಹಕರ ಅಭಿನಂದಿಸಿದ ಎಂಡಿ ಪ್ರಿಯಾಂಗಾ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪ್ರಯಾಣಿಕರಿಗೆ UPI ಮೂಲಕ ಹೆಚ್ಚು ಟಿಕೆಟ್ ವಿತರಣೆ ಮಾಡಿದ ನಿರ್ವಾಹಕರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಪ್ರಶಂಸನಾ...
KKRTC ಅಧಿಕಾರಿ-ಸಿಬ್ಬಂದಿಗಳು ಕಚೇರಿಗೆ ಭೇಟಿ ನೀಡುವಾಗ ಈ ನಿಯಮ ಪಾಲಿಸಬೇಕು: ಸಂಸ್ಥೆಯ ಎಂಡಿ ಸುಶೀಲಾ ನಿರ್ದೇಶನ
ಕಲಬುರಗಿ: ನಿಗಮದ ಅಧಿಕಾರಿ-ಸಿಬ್ಬಂದಿಗಳು ವೈಯಕ್ತಿಕ ಕಾರ್ಯಗಳಿಗಾಗಿ ಕಚೇರಿಗೆ ಭೇಟಿ ನೀಡುವಾಗ ಈ ನಿಯಮಗಳನ್ನು ಪಾಲಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸುಶೀಲಾ...
KSRTC ಬಡ ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ ಸಲ್ಲ: ಸಾರಿಗೆ ಸಚಿವರು ಪರಿಶೀಲಿಸಿ- ಅಧಿವೇಶನದಲ್ಲಿ ಶಾಸಕರ ಆಗ್ರಹ
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಿಂದ ಕರ್ನಾಟಕ ರಾಜ್ಯ ಅತ್ಯವಶ್ಯಕ ಸೇವೆ ವಿಧೇಯಕವನ್ನು ಮಂಡಿಸುವ ಸಂದರ್ಭದಲ್ಲಿ ರಾಜ್ಯದ ಸಾರಿಗೆ ನೌಕರರ ಮೇಲೆ ಎಸ್ಮಾ ಕಾಯಿದೆಯನ್ನು ಜಾರಿ ಮಾಡುತ್ತಿರುವ ಬಗ್ಗೆ...
BMTC ಬಸ್ ಬಾಗಿಲಿಗೆ ಸಿಲುಕಿದ ಕೈ- ಬಿದ್ದು ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಮೃತಪಟ್ಟಿರುವ ಘಟನೆ ಇಂದು ಜಯನಗರದ 4ನೇ ಬ್ಲಾಕ್ನಲ್ಲಿ ನಡೆದಿದೆ. ಸಂಪಂಗಿ (64) ಮೃತಪಟ್ಟವರು....
ರೀಲ್ಸ್, ವಿಡಿಯೋ ಮಾಡುವ ವಕೀಲರಿಗೆ ಶಿಸ್ತು ಕ್ರಮದ ಎಚ್ಚರಿಕೆ ಕೊಟ್ಟ ವಕೀಲರ ಪರಿಷತ್
ಬೆಂಗಳೂರು: ವೃತ್ತಿನಿರತ ವಕೀಲರು ತಮ್ಮನ್ನು ತಾವೇ ಉನ್ನತೀಕರಿಸಿಕೊಳ್ಳುವಂತಹ ಪ್ರಚಾರದ ಯಾವುದೇ ರೀಲ್ಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದರೆ ಅಂತಹ ಆಕ್ಷೇಪಾರ್ಹ ರೀಲ್ಗಳು, ವಿಡಿಯೋಗಳನ್ನು...