NEWSನಮ್ಮಜಿಲ್ಲೆನಮ್ಮರಾಜ್ಯ

BMTC: ವಯಸ್ಸಾದವರಿಗೆ ತಲೆ ಬಿಸಿಯಾಗುತ್ತಿರುವ ಬಸ್‌ಗಳ ಹೊರ ಮೈ ಜಾಹೀರಾತುಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಮೇಲೆ ಜಾಹೀರಾತುಗಳ ಪ್ರಕಟಿಸಿ ತನ್ನ ಆದಾಯ ಹೆಚ್ಚಿಸಿಕೊಳ್ಳುತ್ತಿದೆ. ಆದರೆ, ಇದರಿಂದ ಪ್ರಯಾಣಿಕರು ವಿಶೇಷವಾಗಿ ವೃದ್ಧರು ತಮ್ಮ ಬಸ್‌ಗಳನ್ನು ತ್ವರಿತವಾಗಿ ಗುರುತಿಸಲಾಗದ ಪರಿಸ್ಥಿತಿ ಉಂಟಾಗಿದೆ.

ಈ ಮೊದಲು, ಬಸ್‌ಗಳನ್ನು ಗುರುತಿಸುವುದು ನಮಗೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಭಾರಿ ಕಷ್ಟವಾಗುತ್ತಿದೆ. ಏಕೆಂದರೆ ಇಡೀ ಬಸ್ ಹೊರಮೈ ಬರಿ ಜಾಹೀರಾತುಗಳಿಂದ ತುಂಬಿದ್ದು ಇದು ಬಿಎಂಟಿಸಿ ಬಸ್ಸೋ ಅಥವಾ ಬೇರೆಯದೋ ಎಂದು ಗೊತ್ತಾಗುವುದಕ್ಕೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುವ ಕತ್ತರಿಗುಪ್ಪೆಯ ನಿವಾಸಿ ಅಂಬೂಜಾಕ್ಷಿ ತಿಳಿಸಿದ್ದಾರೆ.

ನಾವು ಈ ಹಿಂದೆ ಬಸ್ ಎಲ್ಲಿಗೆ ಪ್ರಯಾಣಿಸುತ್ತಿದೆ ಮತ್ತು ಯಾವಾಗ ಇಳಿಯಲು ಸಿದ್ಧರಾಗಿರಬೇಕು ಎಂದು ಸುಲಭವಾಗಿ ತಿಳಿಯಬಹುದಿತ್ತು. ಆದರೆ, ಇತ್ತೀಚೆಗೆ ಬಸ್ ಪಕ್ಕದ ಫಲಕಗಳಲ್ಲಿಯೂ ಜಾಹೀರಾತುಗಳನ್ನು ಹಾಕುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದ ನಾವು ಎಷ್ಟೋ ಬಾರಿ ಬಂದ ಬಸ್‌ಅನ್ನು ಮಿಸ್‌ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅದರಲ್ಲೂ ಸಾರಿಗೆ ಬಸ್‌ಅನ್ನು ನಿಯಮಿತವಾಗಿ ಬಳಸುವ ಅನೇಕ ಹಿರಿಯ ನಾಗರಿಕರು, ತಮ್ಮ ಸ್ಥಳಗಳಿಗೆ ಹೋಗುವ ಬಸ್‌ಗಳನ್ನು ಗುರುತಿಸಲು ಕಷ್ಟ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಬಿಎಂಟಿಸಿ ಆದಾಯ ಕಡಿಮೆಯಾಗಿದೆ. ಹೀಗಾಗಿ ಜಾಹೀರಾತು ಆದಾಯ ಮೂಲಗಳಲ್ಲಿ ಒಂದಾಗಿದ್ದು, ಬಸ್‌ಗಳ ಹಿಂದಿನ ಫಲಕದಲ್ಲಿ ಜಾಹೀರಾತುಗಳನ್ನು ಅನುಮತಿಸಲಾಗುತ್ತಿದೆ. ಬಸ್ಸಿನ ಸುತ್ತಲೂ ಸಂಪೂರ್ಣ ಜಾಹೀರಾತು ಹಾಕುವುದು ಹೆಚ್ಚಿನ ಆದಾಯ ನೀಡುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನು ನಗರದಾದ್ಯಂತ ಈ ಬಸ್‌ಗಳ ಸಂಚಾರವಿದೆ. ಪ್ರತಿಯೊಂದು ಬಸ್‌ಗಳ ಮೇಲೆ ಸಂಪೂರ್ಣ ಜಾಹೀರಾತುಗಳನ್ನು ಹಾಕಲಾಗಿದೆ. ಈದರಿಂದ ಆದಾಯ ಉತ್ಪಾದನೆ ಅಗತ್ಯವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ಅಂತಾರಾಷ್ಟ್ರೀಯ ಖ್ಯಾತಿಯ ನಗರವಾದ ಬೆಂಗಳೂರಿನಲ್ಲಿ ಸಾರಿಗೆ ಬಸ್ಸಿನ ಸುತ್ತಲೂ ಜಾಹೀರಾತು ಹಾಕುವುದು ಸೌಂದರ್ಯವನ್ನು ಹಾಳು ಮಾಡುತ್ತದೆ. ಈ ಮಾರ್ಗದಲ್ಲಿ ಅಲ್ಲದೆ, ಬೇರೆ ಜಾಹೀರಾತುಗಳ ಮೂಲಕವೂ ಬಿಎಂಟಿಸಿ ಆದಾಯ ಗಳಿಸಬಹುದು ಎಂದು ಶಿಕ್ಷಣ ಇಲಾಖೆಯ ಉದ್ಯೋಗಿ ಮಂಜುನಾಥ್‌ ಎಂಬುವವರು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.

ಬಸ್‌ಗಳ ಪಕ್ಕದ ಫಲಕಗಳಲ್ಲಿನ ಜಾಹೀರಾತುಗಳು ‘ಪಾರದರ್ಶಕ’ವಾಗಿದ್ದರೆ, ಉಳಿದವು ವಾಲ್ ಪೇಪರ್ ರೀತಿಯಲ್ಲಿ ಮಾಡಲ್ಪಟ್ಟಿವೆ. ಈ ಜಾಹೀರಾತುಗಳು ಯಾವುದೇ ರೀತಿಯಲ್ಲಿ ಬಸ್ ಸೂಚನಾ ಫಲಕಗಳು, ಮುಂಭಾಗ ಮತ್ತು ಹಿಂಭಾಗದ ದೀಪಗಳು, ಡಿಪೋ ಸಂಖ್ಯೆಗಳು, ವಾಹನ ನೋಂದಣಿ ಸಂಖ್ಯೆ ಮತ್ತು ಇತರವುಗಳನ್ನು ನಿರ್ಬಂಧಿಸಬಾರದು ಎಂಬುದು ಷರತ್ತುಗಳಾಗಿವೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

Deva
the authorDeva

Leave a Reply

error: Content is protected !!
Latest news
KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್‌ ಹಾಕುವ ... ಪ್ರಾಮಾಣಿಕತೆ ಮೆರೆದ KSRTC ಸಿಬ್ಬಂದಿ - ಆಭರಣ ಅಡವಿಟ್ಟು ತಂದಿದ್ದ ಹಣ ಕಳೆದು ಕೊಂಡ ಪ್ರಯಾಣಿಕನಿಗೆ ಮರಳಿ ಕೊಟ್ಟ ನೌಕರರ... KSRTC: ಚಾಲನಾ ಸಿಬ್ಬಂದಿ ವಿರುದ್ಧ ಮೆಮೊ ನೀಡುವುದಕಷ್ಟೇ ತಮ್ಮ ಕಾರ್ಯ ವ್ಯಾಪ್ತಿಯ ಸೀಮಿತಗೊಳಿಸಿಕೊಂಡ ತನಿಖಾಧಿಕಾರಿಗಳು?...